ಬೆಂಗಳೂರು: 'ರಾಜಕುಮಾರ' ಯಶಸ್ಸಿನಿಂದ ಸಂತದಲ್ಲಿರುವ ನಟ ಪುನೀತ್ ರಾಜಕುಮಾರ್ ಅದೇ ಸಮಯದಲ್ಲಿ ಸಮತೋಲನದ ಜವಾಬ್ದಾರಿಯ ಬಗ್ಗೆಯೂ ಅರಿವಿನಿಂದ ಮಾತನಾಡುತ್ತಾರೆ.
"ಹೊಸ ನಮೂನೆಯ ನಿರ್ದೇಶಕರು ಅತ್ಯುತ್ತಮ ಚಿತ್ರಗಳನ್ನು ನೀಡುವುದಕ್ಕೆ ತವಕದಿಂದ ಇದ್ದಾರೆ. ಅವರು ಒಳ್ಳೆಯ ಸ್ಕ್ರಿಪ್ಟ್ ಹಿಡಿದು ಬಂದರೆ ನಾನು ಖಂಡಿತ ಅವರನ್ನು ಉತ್ತೇಜಿಸುತ್ತೇನೆ. ಇಂದು ತಂತ್ರಜ್ಞಾನವನ್ನು ಸುಲಭವಾಗಿ ಉತ್ತಮ ಸಿನೆಮಾ ಮಾಡಲು ಬಳಸಬಹುದು. ನಿರ್ದೇಶಕರು ವಿಭಿನ್ನ ರೀತಿಯ ಸಿನೆಮಾಗಳನ್ನು ಮಾಡಿದರೆ ಅದು ಅವರಂತೆಯೇ ಸಿನೆಮಾ ಮಾಡುವುದಕ್ಕೆ ನಮಗೂ ಉತ್ತೇಜನ ನೀಡುತ್ತದೆ" ಎನ್ನುತ್ತಾರೆ ಪುನೀತ್.
'ರಾಜಕುಮಾರ' ಸಿನೆಮಾ ತಮ್ಮ ವೃತ್ತಿ ಜೀವನಕ್ಕೆ ಒಳ್ಳೆಯ ಕಸುವು ನೀಡಿದೆ ಎನ್ನುವ ಪುನೀತ್ "ಇಂತಹ ಸಿನೆಮಾದ ಭಾಗವಾಗಿದ್ದಕ್ಕೆ ನನಗೆ ಸಂತಸವಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಕೂಡ ಸಮ ಶ್ರೇಯಸ್ಸು ಸಲ್ಲಬೇಕು. ಚೊಚ್ಚಲ ಚಿತ್ರದಲ್ಲೇ ದೊಡ್ಡ ದಾಖಲೆ ಮಾಡಿದವರು ಅವರು ಮತ್ತು ಈಗ ಅದಕ್ಕಿಂತಲೂ ದೊಡ್ಡ ಹಿಟ್ ನೀಡಿದ್ದಾರೆ. ದೊಡ್ಡ ಯಶಸ್ಸು ಬಂದಾಗ ನಮಗೆಲ್ಲ ಸಂತಸವಾಗುತ್ತದೆ, ಹಾಗೆಯೇ ಈ ಸಿನೆಮಾ ನನ್ನ ತಂದೆಯ ಹೆಸರು ಹೊತ್ತಿರುವುದಕ್ಕೆ ಹೆಮ್ಮೆ ಕೂಡ" ಎನ್ನುತ್ತಾರೆ.
ಪುನೀತ್ ಅವರ ಮುಂದಿನ ಚಿತ್ರ 'ಅಂಜನೀಪುತ್ರ'ವನ್ನು ಎ ಹರ್ಷ ನಿರ್ದೇಶಿಸುತ್ತಿದ್ದು ಸುಮಾರು ೬೦% ಚಿತ್ರೀಕರಣ ಸಂಪೂರ್ಣಗೊಂಡಿದೆಯಂತೆ. "ಹರ್ಷ ಒಳ್ಳೆ ತಂತ್ರಜ್ಞ ಮತ್ತು ಅದನ್ನು ಒಳ್ಳೆಯ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂವ ಭರವಸೆ ಇದೆ" ಎನ್ನುತ್ತಾರೆ ಪುನೀತ್.
"ನಾನು ಒಳ್ಳೆಯ ಸ್ಕ್ರಿಪ್ಟ್ ಗಳನ್ನು ಯಾವಾಗಲೂ ಎದುರು ನೋಡುತ್ತಿರುತ್ತೇನೆ. ಸಿನೆಮಾ ಗೆಲ್ಲಲಿ ಸೋಲಲಿ ವೈಯಕ್ತಿಕವಾಗಿ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸವನ್ನು ತೃಪ್ತಿಯಿಂದ ಮಾಡಲು ಇಲ್ಲಿದ್ದೇನೆ. ಎಲ್ಲವು ನಿನ್ನೆಡೆಗೆ ಬಂದಾಗ ಅತ್ಯುತ್ತಮವಾದದ್ದನ್ನು ನೀಡಬೇಕು. ನನಗೆ ಅದಷ್ಟೇ ಮುಖ್ಯವಾಗುವುದು" ಎನ್ನುತ್ತಾರೆ ಪುನೀತ್.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos