ಬೆಂಗಳೂರು: 2006 ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಮುಂಗಾರು ಮಳೆ ಸಿನಿಮಾದಲ್ಲಿ ನಂದಿನಿ ಪಾತ್ರದ ಮೂಲಕ ಮನೆ ಮಾತಾದ ಪೂಜಾ ಗಾಂಧಿ, ದಂಡು ಪಾಳ್ಯ - 2 ಸಿನಿಮಾದಲ್ಲಿ ವಿಭಿನ್ನವಾದ ಡೆಡ್ಲಿ ಲಕ್ಷ್ಮಿ ಪಾತ್ರದಲ್ಲಿ ನಟಿಸಿದ್ದಾರೆ.
ಶ್ರೀನಿವಾಸ್ ರಾಜು ನಿರ್ದೇಶನದ ದಂಡುಪಾಳ್ಯ- 2 ಸಿನಿಮಾ ಈ ವಾರ ತೆರೆ ಕಾಣಲಿದೆ. ಸಿನಿಮಾದಲ್ಲಿನ ಅಪರಾಧ ಅದರಿಂದಾಗುವ ಪರಿಣಾಮಗಳ ಬಗ್ಗೆ ವೀಕ್ಷಿಸಲು ಪ್ರೇಕ್ಷಕರು ತುಂಬಾ ಕುತೂಹಲ ಭರಿತರಾಗಿದ್ದಾರೆ ಎಂದು ಪೂಜಾಗಾಂಧಿ ಹೇಳಿದ್ದಾರೆ.
ನಾಯಕಿಯರು ಅಪರಾಧ ಕಥೆಯುಳ್ಳ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸುವುದು ಅಪರೂಪ. ಆದರೆ ಪೂಜಾ ಪ್ರಕಾರ ಯಾವುದೇ ಆಯವಾಗಲಿ ಅದನ್ನು ಅನುಭವ ಪಡೆಯಬೇಕು, ಇಲ್ಲದಿದ್ದರೇ ನಾವು ಕಲಾವಿದರಾಗಲು ಸಾಧ್ಯವಿಲ್ಲ, ಸ್ಟೀರಿಯೋಟೈಪ್ ಹೀರೋ ಮತ್ತು ಹೀರೋಯಿನ್ ಕಾಲ ಮುಗಿಯಿತು. ಇತ್ತೀಚಿನ ದಿನಗಳಲ್ಲಿ ಚಿತ್ರಕಥೆಗೆ ನಿರ್ಮಾಪಕರು ಹೆಚ್ಚಿನ ಒತ್ತು ನೀಡುತ್ತಾರೆ.
ಪ್ರತಿಯೊಬ್ಬ ಕಲಾವಿದರು ಹೊಸತನ ಪ್ರಯತ್ನಿಸುತ್ತಿರುತ್ತಾರೆ. ಜೊತೆಗೆ ಪ್ರೇಕ್ಷಕರು ಕೂಡ ನೈಜತೆಯಿರುವ ಸಿನಿಮಾವನ್ನು ಬಯಸುತ್ತಾರೆ. ಅದಕ್ಕಾಗಿ ಅವರು ಬೇಡಿಕೆಯಿಡುತ್ತಾರೆ, ನಾವು ಅದನ್ನೇ ನೀಡಬೇಕಿದೆ.
ಬೆಳ್ಳಿ ಪರದೆ ಮೇಲೆ ಅಪರಾಧ ಒಳ್ಳೆಯದ್ದೋ ಕೆಟ್ಟದ್ದೋ ಎಂಬ ಪ್ರಶ್ನೆಗೆ ಉತ್ತರಿಸಿದ ಪೂಜಾ ಇದೇ ಪ್ರಶ್ನೆ ಸೆಕ್ಸ್, ರೋಮ್ಯಾನ್ಸ್ ಜೊತೆಗಿನ ದುರಂತ ಅಂತ್ಯ, ಅತ್ಯಾಚಾರ ಸಂತ್ರಸ್ತರು ಹಾಗೂ ವಿವಾಹೇತರ ಸಂಬಂಧವಿರುವ ಸಿನಿಮಾಗಳ ಬಗ್ಗೆ ಪ್ರಶ್ನೆ ಮೂಡುತ್ತದೆ. ಈ ಸಿನಿಮಾಗಳು ಜನರನ್ನು ಯಾವುದೇ ರೀತಿ ಪ್ರೇರೇಪಿಸುವುದಿಲ್ಲ ಹೀಗೆಯೇ, ಅಪರಾಧ ಸಿನಿಮಾಗಳು ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಯೊಂದು ಸಿನಿಮಾಗಳು ಜಾಗೃತಿ ಮೂಡಿಸುತ್ತವೆ. ದಂಡು ಪಾಳ್ಯ ಸಿನಿಮಾ ಕಥೆ ಬಗ್ಗೆ ನಾವು ಈಗಾಗಲೇ ಜನರಿಗೆ ತಿಳಿಸಿದ್ದೇವೆ. ಯೋಗರಾಜ್ ಭಟ್ ಸೇರಿದಂತೆ ಕೆಲವು ನಿರ್ದೇಶಕರುಗಳು ಪೂಜಾ ಗಾಂಧಿ ಅವರ ಪ್ರತಿಭೆ ಹೊರ ತೆಗೆಯಲು ಪ್ರಯತ್ನಿಸಿದ್ದಾರೆ. ದಂಡು ಪಾಳ್ಯದ ಶ್ರೀನಿವಾಸ್ ರಾಜು ಮತ್ತು ಗೋಕುಲದ ಜಯರಾಮ್ ಕೂಡ ಪ್ರಯತ್ನಿಸಿದ್ದಾರೆ.
ಮುಂಗಾರು ಮುಳೆ ಮೂಲಕ ಯೋಗರಾಜ್ ಭಟ್ ನನಗೆ ಜೀವನ ನೀಡಿದರು.ಪ್ರತಿಯೊಂದು ಪಾತ್ರದಲ್ಲೂ ಅಥವಾ ಪ್ರತಿಯೊಬ್ಬ ನಿರ್ದೇಶಕರ ಜೊತೆ ನಾನು ಮಾಡಿದ ಕೆಲಸ ನನ್ನಲ್ಲಿರುವ ಮತ್ತಷ್ಟು ಪ್ರತಿಭೆ ಹೊರಹಾಕಲು ಸಾಧ್ಯವಾಯಿತು. ನಿರ್ದೇಶಕ ಶ್ರೀನಿವಾಸ್ ರಾಜು ಅವರು ಕಲಾವಿದರಿಗೆ ಹೊಸ ಹೊಸ ಸವಾಲುಗಳನ್ನು ನೀಡುತ್ತಾರೆ. ಅವರ ಜೊತೆಯಲ್ಲಿ ಕೆಲಸ ಮಾಡುವ ಕಲಾವಿದರು ಉತ್ಸುಕವಾಗಿರುತ್ತಾರೆ. ಇದು ಅವರ ಜೊತೆ ನನ್ನ ಮೂರನೇ ಸಿನಿಮಾ, ಮತ್ತಷ್ಟು ಸಿನಿಮಾಗಳನ್ನು ಅವರ ಜೊತೆ ಮಾಡಲು ನಾನು ಬಯಸುತ್ತೇನೆ ಎಂದು ಪೂಜಾ ಹೇಳಿದ್ದಾರೆ.
ಮತ್ತೊಬ್ಬ ನಿರ್ದೇಶಕ ಜೆ.ಡಿ ಚಕ್ರವರ್ತಿ ನಟನೆಯಲ್ಲಿ ನನಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಪೂಜಾ ಸ್ಮರಿಸಿದ್ದಾರೆ, ನಾನು ಹಲವು ಹಿಟ್ ಹಾಗೂ ಫ್ಲಾಪ್ ಸಿನಿಮಾಗಳನ್ನು ನೀಡಿದ್ದೇನೆ, ಆದರೆ ಆ ಬಗ್ಗೆ ನನಗೆ ವಿಷಾಧವಿಲ್ಲ, ಪ್ರತಿಯೊಂದು ಚಿತ್ರವೂ ಇವತ್ತು ನಾನು ಏನಾಗಿರುವೆನೋ ಅದಕ್ಕೆ ಕಾರಣ, ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿಮಾ ಫ್ಲಾಪ್ ಆಗಬಹುದು, ಆದರೆ ಕಲಾವಿದ ಯಾವತ್ತೂ ಫ್ಲಾಪ್ ಆಗುವುದಿಲ್ಲ ಎಂಬುದು ಪೂಜಾ ಅಭಿಪ್ರಾಯ.