ಹರಿಪ್ರಿಯಾ 
ಸಿನಿಮಾ ಸುದ್ದಿ

ಕುರುಕ್ಷೇತ್ರದ ಮೊದಲ ನಾಯಕಿಯಾಗಿ ಹರಿಪ್ರಿಯಾ ಆಯ್ಕೆ

ಐತಿಹಾಸಿಕ ಮಹಾಭಾರತ ಕಥೆಯುಳ್ಳು ಕುರುಕ್ಷೇತ್ರ ಸಿನಿಮಾ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವುದು ಕಠಿಣ ಕೆಲಸ. ಚಾಲೆಂಜಿಂಗ್ ಸ್ಟಾರ್ ...

ಬೆಂಗಳೂರು: ಐತಿಹಾಸಿಕ ಮಹಾಭಾರತ ಕಥೆಯುಳ್ಳು ಕುರುಕ್ಷೇತ್ರ ಸಿನಿಮಾ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವುದು ಕಠಿಣ ಕೆಲಸ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾವಾದ ಕುರುಕ್ಷೇತ್ರದಲ್ಲಿ ಈಗಾಗಲೇ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ನಟಿಸಲಿದ್ದಾರೆ.
ಇದೇ ವೇಳೆ ಪ್ರೊಡಕ್ಷನ್ ಹೌಸ್ ಉಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆಯಲ್ಲಿ ನಿರತವಾಗಿದೆ. ಹಲವಾರು ನಾಯಕಿಯರ ಹೆಸರುಗಳು ಕೇಳಿ ಬರುತ್ತಿವೆ. ಹರಿಪ್ರಿಯಾ ಹೆಸರು ಅಧಿಕೃತವಾಗಿ ಫೈನಲ್ ಆಗಿದೆ, ಆದರೆ ಹರಿಪ್ರಿಯಾ ಪಾತ್ರ ಯಾವುದು ಎಂಬುದರ ಬಗ್ಗೆ ಚಿತ್ರ ತಂಡ ತಿಳಿಸಿಲ್ಲ.
ನಾಗಣ್ಣ ನಿರ್ದೇಶನದ ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಗಣವೇ ಇದೆ. ಪ್ರತಿಯೊಬ್ಬ ಕಲಾವಿದರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ದರ್ಶನ್ ಎದುರು ಹರಿಪ್ರಿಯಾ ಯಾವ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ಬಹಿರಂಗವಾಗಿಲ್ಲ, ಏಕೆಂದರೆ ಪ್ರೇಕ್ಷಕರ ಕುತೂಹಲ ಕಾಯ್ದಿರಿಸಿಸಬೇಕಾಗಿದೆ. ಜುಲೈ 30 ರಂದು ಸಿನಿಮಾ ಬಗ್ಗೆ ಅಧಿಕೃತವಾದ ಮಾಹಿತಿ ಹೊರ ಬೀಳಲಿದೆ.
ದರ್ಶನ್ ಕಾಸ್ಟ್ಯೂಮ್ ಸಿದ್ದವಾಗಿದ್ದು, ರವಿಚಂದ್ರನ್ ಶಸ್ತ್ರಾಸ್ತ್ರಗಳ ಬಗ್ಗೆ ಸಿದ್ಧತೆ ನಡೆಸಲಾಗುತ್ತಿದೆ. ಬಾಹುಬಲಿ ಸಿನಿಮಾ ತಂಡದ ಕೆಲ ಸದಸ್ಯರು ಹಾಗೂ ಮುಂಬಯಿಯ ಸೆಟ್ಸ್ ತರಲಾಗಿದೆ. ಮುನಿರತ್ನ ಮತ್ತು ಜಯಶ್ರೀ ದೇವಿ ಈ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 
ನಟಿ ಹರಿಪ್ರಿಯಾ ಹಲವಾರು ಚಿತ್ರದ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದಾರೆ, ಭರ್ಜರಿ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿರುವ ಹರಿಪ್ರಿಯಾ ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಥಾ ಸಂಗಮದಲ್ಲಿ ಆಕೆಯ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
ಸದ್ಯ ಗುರುದತ್ತ ಪಾಂಡೆ ನಿರ್ದೇಶನದ ಚಿರಂಜೀವಿ ಸರ್ಜಾ ನಟನೆಯ ಸಂಹಾರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನೂ ದುನಿಯಾ ವಿಜಯ್ ಜೊತೆ ಮೊದಲ ಬಾರಿಗೆ ಕನಕ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ಅಭಿನಯಿಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ