ಶರ್ಮಿಳಾ ಮಾಂಡ್ರೆ 
ಸಿನಿಮಾ ಸುದ್ದಿ

ಒಳ್ಳೆಯ ಕಾರಣವಿದ್ದರೆ ಮಾತ್ರ ಐಟಂ ಹಾಡಿಗೆ ಡ್ಸಾನ್ಸ್: ಮಾಂಡ್ರೆ

ಇತ್ತೀಚಿನ ದಿನಗಳಲ್ಲಿ ನಾಯಕ ನಟಿಯರು ಚಿತ್ರದ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಅಂತೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ...

ಇತ್ತೀಚಿನ ದಿನಗಳಲ್ಲಿ ನಾಯಕ ನಟಿಯರು ಚಿತ್ರದ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಅಂತೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಪತ್ರಕರ್ತೆ ಪಾತ್ರದ ಜೊತೆಗೆ ಶರ್ಮಿಳಾ ಮಾಂಡ್ರೆ ಒಂದು ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 
ಈ ವಿಶೇಷ ಹಾಡಿನ ಬಗ್ಗೆ ಮಾತನಾಡಿರುವ ಮಾಂಡ್ರೆ ಒಳ್ಳೆಯ ಕಾರಣವಿದ್ದರೆ ನಾನು ಚಿತ್ರದ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕುತ್ತೇನೆ ಎಂದು ಹೇಳಿದ್ದಾರೆ. ಚಿತ್ರದ ಪಾತ್ರದ ಬಗ್ಗೆ ನಿರ್ದೇಶಕರು ಹೇಳುವಾಗಿ ಚಿತ್ರದ ವಿಶೇಷ ಹಾಡಿನ ಬಗ್ಗೆಯೂ ಹೇಳಿದರು. ಅದಕ್ಕೆ ನಾನು ನಾಯಕನ ಜತೆ ಪ್ರೀತಿಯಲ್ಲಿ ಬಿಳುತ್ತೇನೆ. ಇಬ್ಬರ ಮಧ್ಯೆಯ ಡುಯೇಟ್ ಸಾಂಗ್ ಬರುವುದು ಸಾಮಾನ್ಯ ಅದರಲ್ಲಿ ಏನು ವಿಶೇಷ ಇದೇನು ಐಟಂ ಸಾಂಗ ಎಂದು ಪ್ರಶ್ನಿಸಿದ್ದೇ ಎಂದು ಹೇಳಿದ್ದಾರೆ. 
ನಿರ್ದೇಶಕ ನರಸಿಂಹ ಅವರು ಕಥೆ ಹೇಳಿದ್ದು ನನಗೆ ತುಂಬಾ ಇಷ್ಟ ಆಯ್ತು. ಈ ಪಾತ್ರವನ್ನು ನಾನೇ ಮಾಡಬೇಕು ಎಂದು ಆಫರ್ ಸ್ವೀಕರಿಸಿದೆ. ನಾನು ಚಿತ್ರದಲ್ಲಿ ರಹಸ್ಯ ಪತ್ರಕರ್ತೆಯಾಗಿ ಅಭಿನಯಿಸಿದ್ದೇನೆ. ಮೊದಲಿಗೆ ವಿಶೇಖ ಹಾಡಿನ ಬಗ್ಗೆ ಪ್ರಸ್ತಾವನೆ ಇರಲಿಲ್ಲ. ಚಿತ್ರದ ಚಿತ್ರೀಕರಣ ಶುರುವಾದ ಎರಡು ವಾರಗಳ ನಂತರ ನಿರ್ದೇಶಕರು ಹಾಡೊಂದು ಮಾಡಿದರೆ ಹೇಗಿರುತ್ತೆ ಎಂದು ಕೇಳಿದರು. ಈ ಕಲ್ಪನೆ ಎಲ್ಲರಿಗೂ ಇಷ್ಟವಾಗಿ ನಾವು ವಿಶೇಖ ಹಾಡೊಂದನ್ನು ಮಾಡಿದ್ದೇವೆ ಎಂದು ಮಾಂಡ್ರೆ ಹೇಳಿದ್ದಾರೆ. 
ಶರ್ಮಿಳಾ ಮಾಂಡ್ರೆ ಅಭಿನಯದ ಆಕೆ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಶಿವಣ್ಣ ಜತೆಗಿನ ಮಾಸ್ ಲೀಡರ್ ಚಿತ್ರ ಸಹ ಬಿಡುಗಡೆಗೆ ರೆಡಿಯಾಗುತ್ತಿದ್ದು ಮಾಂಡ್ರೆ ಅವರಿಗೆ ಡಬಲ್ ಖುಷಿ ತಂದಿದೆಯಂತೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

UPSC ಪರೀಕ್ಷೆ ಫಲಿತಾಂಶ ಪ್ರಕಟ: ಕಿರಣ್ ಕಾಮತೆ ರಾಜ್ಯಕ್ಕೆ ಟಾಪರ್; ಕರ್ನಾಟಕದ 22 ಅಭ್ಯರ್ಥಿಗಳು ಪಾಸ್

ಯುದ್ಧ ಕೊನೆಗೊಳಿಸಲು ಕೆಲವು ರಾಷ್ಟ್ರಗಳು 'ಮಧ್ಯಸ್ಥಿಕೆ' ಬಯಸುತ್ತಿವೆ: ಭೀಕರ ದಾಳಿಗಳ ನಡುವೆ ಇರಾನ್ ಅಧ್ಯಕ್ಷರ ಸ್ಫೋಟಕ ಹೇಳಿಕೆ!

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar

SCROLL FOR NEXT