ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಮಿಲನ ಪ್ರಕಾಶ್ ಜಯರಾಮ್ ನಿರ್ದೇಶನದ ದರ್ಶನ್ ಅಭಿನಯದ ತಾರಕ್ ಚಿತ್ರ ಯಾವುದೇ ಅಬ್ಬರವಿಲ್ಲದೆ ಶೇಖಡ 90ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ.
ಇಟಲಿಯ ಸುಂದರ ತಾಣಗಳಲ್ಲಿ ಸುದೀರ್ಘ ಚಿತ್ರೀಕರಣದ ನಂತರ ತಾಯ್ನಾಡಿಗೆ ಮರಳಿರುವ ನಿರ್ದೇಶಕ ಪ್ರಕಾಶ್ ಅವರು ಸಮಯ ವ್ಯರ್ಥ ಮಾಡದೇ ಚಿತ್ರದ ಮಾತನಿ ಜೋಡಣೆಗೆ ಅಣಿಯಾಗಿದ್ದಾರೆ.
ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ನಿರ್ದೇಶಕರು ಚುರುಕು ನೀಡಿದ್ದಾರೆ. ಇನ್ನು ಕೊನೆಯ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದ್ದು ಶೀಘ್ರದಲ್ಲೇ ಪ್ರಾರಂಭಗೊಳ್ಳಲಿದೆ.
ತಾರಕ್ ದರ್ಶನ್ ಅವರ 49ನೇ ಚಿತ್ರವಾಗಿದೆ. ಈ ಚಿತ್ರದಲ್ಲಿ ದೇವರಾಜ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಶೃತಿ ಹರಿಹರನ್ ಮತ್ತು ಸಾನ್ವಿ ಶ್ರೀವಾತ್ಸವ್ ಅವರು ದರ್ಶನ್ ಗೆ ಜೋಡಿಯಾಗಿ ಅಭಿನಯಿಸಿದ್ದಾರೆ.