ಬೆಂಗಳೂರು: ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಮರಾಠಿ ನಟಿಯರಿಗೆ ಕೈತುಂಬಾ ಅವಕಾಶಗಳು ಸಿಗುತ್ತಿವೆ. ಅಂಥಹ ನಟಿಯರ ಪೈಕಿ ವೈಭವಿ ಶಾಂಡಿಲ್ಯ ಕೂಡ ಸೇರಿದ್ದಾರೆ.
ತಮಿಳು ಸಿನಿಮಾ ಮೂಲಕ ವೃತ್ತಿ ಜೀವನ ಆರಂಭಿಸಿದ ವೈಭವಿ ಕನ್ನಡದ ರಾಜ್-ವಿಷ್ಣು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆ.ಮಾದೇಶ ನಿರ್ದೇಶನದ ಸಿನಿಮಾದಲ್ಲಿ ಶರಣ್ ಮತ್ತು ಚಿಕ್ಕಣ್ಣ ಅಭಿನಯಿಸುತ್ತಿದ್ದಾರೆ.
ರಾಜ್ -ವಿಷ್ಣು ತಮಿಳಿನ ರಜನಿ-ಮುರುಗನ್ ರಿಮೇಕ್ ಆಗಿದ್ದರಿಂದ ತಾನು ಈ ಸಿನಿಮಾದೆಡೆಗೆ ಆಕರ್ಷಿತಳಾಗಿದ್ದೇನೆ, ಆರಂಭದಿಂದ ನಾನು ಹೆಚ್ಚಾಗಿ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ, ರಜನಿ-ಮುರುಗನ್ ಸಿನಿಮಾವನ್ನು ನಾನು ವೀಕ್ಷಿಸಿದ್ದೇನೆ ಎಂದು ವೈಭವಿ ಹೇಳಿದ್ದಾರೆ.
ಸಿನಿಮಾ ಹಾಡು ಹಾಗೂ ಕಥೆಯನ್ನು ನಿರೂಪಿಸಿರುವ ರೀತಿ, ಪಾತ್ರಗಳು ಅದರಲ್ಲೂ ನಾಯಕಿಯ ಪಾತ್ರವನ್ನು ಕೀರ್ತಿ ಸುರೇಶ್ ಅದ್ಬುತವಾಗಿ ನಿರ್ವಹಿಸಿದ್ದಾರೆ. ರಾಮು ಬ್ಯಾನರ್ ಅಡಿ ಕನ್ನಡದಲ್ಲಿ ಸಿನಿಮಾ ರಿಮೇಕ್ ಆಗುತ್ತಿದೆ ಎಂದು ಕೇಳಲ್ಪಟ್ಟಿದ್ದೆ. ನನಗೆ ಆಫರ್ ಬಂದಾಗ ಎರಡನೇ ಮಾತಿಲ್ಲದೇ ನಾನು ಸಿನಿಮಾದಲ್ಲಿ ನಟಿಸಲು ಒಪ್ಪಿದೆ ಎಂದು ಶಾಂಡಿಲ್ಯ ತಿಳಿಸಿದ್ದಾರೆ.
ಸದ್ಯಕ್ಕೆ ತಮಿಳಿನಲ್ಲಿ ಶಾಂಡಿಲ್ಯ 2 ಸಿನಿಮಾಗಳಲ್ಲಿ ನಟಿಸುತ್ತಿದ್ದು, ಕನ್ನಡದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾರೆ. ಯಾವುದೇ ಭಾಷೆಯ ಸಿನಿಮಾದಲ್ಲಿ ನಟಿಸಲು ನನಗೆ ಅಭ್ಯಂತರವಿಲ್ಲ,ಉತ್ತಮ ತಂಡ ಹಾಗೂ ಒಳ್ಳೆಯ ಕಥೆ ಇರಬೇಕು ಎಂದು ಹೇಳಿದ್ದಾರೆ.
ನನ್ನ ಆಂಟಿ ಸುಷ್ಮಾ ಕೌಲ್ ಅವರನ್ನು ನನ್ನ ಮ್ಯಾನೇಜರ್ ಆಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ಕಳೆದ 25 ವರ್ಷಗಳಿಂದ ಅವರು ಚಿತ್ರ ರಂಗದಲ್ಲಿದ್ದಾರೆ, ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಜನ ಅವರನ್ನು ಗೌರವಿಸುತ್ತಾರೆ. ಸುಷ್ಮಾ ಅವರಿಗೆ ಮಾಲಾಶ್ರೀ ಹಲವು ವರ್ಷಗಳಿಂದ ಸ್ನೇಹಿತೆ, ಹೀಗಾಗಿ ನಾನು ಈ ಪ್ರಾಜೆಕ್ಟ್ ಗೆ ಬರಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಇನ್ನು ತೆಲುಗಿನಲ್ಲಿ ನಟಿ ಸಾಯಿಕುಮಾರ್ ಪುತ್ರ ಆದಿ ಜೊತೆ ಮೊತ್ತಮೊದಲ ಬಾರಿಗೆ ಟಾಲಿವುಡ್ ನಲ್ಲಿ ನಟಿಸುತ್ತಿದ್ದಾರೆ.