ನಟಿ ಸಿಂಧು ಲೋಕನಾಥ್ 
ಸಿನಿಮಾ ಸುದ್ದಿ

'ಲೂಸ್ ಕನೆಕ್ಷನ್' ಮೂಲಕ ವೆಬ್ ಧಾರಾವಾಹಿಗೆ ಪಾದಾರ್ಪಣೆ ಮಾಡಿದ ಸಿಂಧು ಲೋಕನಾಥ್

ಇತ್ತೀಚಿಗೆ ಬೆಳ್ಳಿತೆರೆ ನಟ ನಟಿಯರು ವೆಬ್ ಧಾರವಾಹಿ ಲೋಕಕ್ಕೆ ಪಾದಾರ್ಪಣೆ ಮಾಡುವ ಪ್ರಯೋಗ ಮಾಡುತ್ತಿರುವ ಸಮಯದಲ್ಲಿ ಅದಕ್ಕೆ ಹೊಸ ಪ್ರವೇಶ ಕನ್ನಡ ಚಿತ್ರ ರಂಗದ ನಾಯಕನಟಿ

ಬೆಂಗಳೂರು: ಇತ್ತೀಚಿಗೆ ಬೆಳ್ಳಿತೆರೆ ನಟ ನಟಿಯರು ವೆಬ್ ಧಾರವಾಹಿ ಲೋಕಕ್ಕೆ ಪಾದಾರ್ಪಣೆ ಮಾಡುವ ಪ್ರಯೋಗ ಮಾಡುತ್ತಿರುವ ಸಮಯದಲ್ಲಿ ಅದಕ್ಕೆ ಹೊಸ ಪ್ರವೇಶ ಕನ್ನಡ ಚಿತ್ರ ರಂಗದ ನಾಯಕನಟಿ ಸಿಂಧು ಲೋಕನಾಥ್. 
'ಲೂಸ್ ಕನೆಕ್ಷನ್' ಎಂಬ ಶೀರ್ಷಿಕೆ ಹೊತ್ತ ಈ ರೋಮ್ಯಾಂಟಿಕ್ ಹಾಸ್ಯ ವೆಬ್ ಧಾರಾವಾಹಿಯನ್ನು ಸಕತ್ ಸ್ಟುಡಿಯೋ ನಿರ್ಮಿಸುತ್ತಿದೆ. ಆರ್ ಜೆ ಪ್ರದೀಪ್ ಮತ್ತು ತಂಡವಾದ ರಘು ಶಾಸ್ತ್ರಿ, ಶಾಮ್ ಖಾನ್ ಹಾಗು ಹಸಿನ್ ಖಾನ್ ಈ ವೆಬ್ ಧಾರಾವಾಹಿಯ ಆವೃತ್ತಿಗಳನ್ನು ಬರೆದು ನಿರ್ದೇಶಿಸಿದ್ದಾರೆ. 
ಇಂದಿನ ದಿನದ ಪ್ರೇಕ್ಷಕರು ಚಿತ್ರಮಂದಿರ ಅಥವಾ ಟಿವಿಯ ಬದಲು ಮನರಂಜನೆಗೆ ಸಾಮಾಜಿಕ ಜಾಲತಾಣದ ಮೊರೆಹೋಗುತ್ತಿದ್ದಾರೆ. ಈಗ ವೆಬ್ ಧಾರವಾಹಿ ಮನರಂಜನೆಯ ಹೊಸ ಮಂತ್ರ ಎನ್ನುವ ನಟಿ ಸಿಂಧು "ಇದು ನನ್ನ ಮೊದಲ ಪ್ರಯತ್ನ. ಇದನ್ನು ಜನ ಹೇಗೆ ಸ್ವೀಕರಿಸಲಿದ್ದಾರೆ ಎಂದು ತಿಳಿಯಲು ಉತ್ಸಾಹದಿಂದ ಕಾಯುತ್ತಿದ್ದೇನೆ" ಎನ್ನುತ್ತಾರೆ. 
ಸಿನೆಮಾ ಆಗಿರಲಿ ವೆಬ್ ಧಾರಾವಾಹಿ ಆಗಿರಲಿ ನಟನ ಶ್ರಮ ಒಂದೇ ಎನ್ನುವ ಸಿಂಧು "'ಲೂಸ್ ಕನೆಕ್ಷನ್' ಚಿತ್ರೀಕರಣ ನನ್ನ ಯಾವುದಾದರೂ ಸಿನೆಮಾ ಚಿತ್ರೀಕರಣದಂತೆಯೇ. ಇದು ಹಲವು ಆವೃತ್ತಿಗಳಲ್ಲಿ ಬಿಡುಗಡೆ ಆಗಲಿದೆ" ಎನ್ನುತ್ತಾರೆ. 
ಈ ವೆಬ್ ಧಾರಾವಾಹಿಯಲ್ಲಿ ಸುನಿಲ್ ರಾವ್ ಮತ್ತು ಅನುಪಮಾ ಗೌಡ ಕೂಡ ನಟಿಸಿದ್ದಾರೆ. ಇದು ಜೂನ್ ಮಧ್ಯಭಾಗದಲ್ಲಿ ಬಿಡುಗಡೆಯಾಗಲಿದೆ. ಬಂಗಾಳಿ ಸಿನೆಮಾಗಳಲ್ಲಿ ಕೆಲಸ ಮಾಡಿರುವ ರಾಯ್ ಇದಕ್ಕೆ ಸಂಗೀತ ನೀಡಿದ್ದಾರೆ. 
ಈ ಮಧ್ಯೆ ಹೀರೋಯಿನ್ ಕೇಂದ್ರಿತ ಸಿನೆಮಾ 'ಸಮಯದ ಗೊಂಬೆ'ಯ ಚಿತ್ರೀಕರಣ ಮುಗಿಸಿದ್ದಾರೆ ಸಿಂಧು. ಹಾಗೆಯೇ 'ಕಾಣದಂತೆ ಮಾಯವಾದನು' ಸಿನಿಮಾದಲ್ಲಿಯೂ ಸಿಂಧು ನಟಿಸುತ್ತಿದ್ದಾರೆ. ಯೋಗರಾಜ್ ಗರಡಿಯಲ್ಲಿ ಪಳಗಿರುವ ರಾಜ್ ಪತಿಪತಿ ಈ ಸಿನೆಮಾದ ನಿರ್ದೇಶಕ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT