ಸಿನಿಮಾ ಸುದ್ದಿ

ಮೂರು ವರ್ಷ ವಿಳಂಬ; ಕೊನೆಗೂ ಪದಾರ್ಪಣೆಗೆ ರಾಜ್ ವರ್ಧನ್ ಸಿದ್ಧ

Guruprasad Narayana
ಬೆಂಗಳೂರು: ನಟ ರಾಜ್ ವರ್ಧನ್ ೨೦೧೩ ರಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಅವರ ಕನಸು ಈಗ 'ನೂರೊಂದು ನೆನಪು' ಸಿನೆಮಾದ ಮೂಲಕ ಮೂರೂ ವರ್ಷಗಳ ನಂತರ ಸಾಕಾರವಾಗುತ್ತಿದೆ. 
ಈ ಹಿಂದೆ ಚಾಲನೆಗೊಂಡಿದ್ದ 'ಫ್ಲೈ' ಸಿನೆಮಾ ಹಲವು ಕಾರಣಗಳಿಗೆ ವಿಳಂಬವಾಗಿತ್ತು. ಈಗ ಅದು ಕೂಡ ಸಂಪೂರ್ಣಗೊಂಡಿದೆಯಂತೆ. 
ಈಗ ತಮ್ಮ ಚೊಚ್ಚಲ ಚಿತ್ರವಾಗಲಿರುವ 'ನೂರೊಂದು ನೆನಪು' ಮುಂದಿನ ವಾರ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸಗೊಂಡಿರುವ ನಟ "ಈ ಚಿತ್ರರಂಗದ ವಿಪರ್ಯಾಸ ಎಂದರೆ, ನಾನು ಜನಪ್ರಿಯ ನಟ ಡಿಂಗ್ರಿ ನಾಗಾರಾಜ್ ಅವರ ಪುತ್ರನಾಗಿದ್ದು, ಅವರ ಬೆಂಬಲ ಇದ್ದರೂ ಇವು ಯಾವುವು ನನ್ನ ವೃತ್ತಿ ಜೀವನಕ್ಕೆ ಸಹಕರಿಸಲಿಲ್ಲ. ಈಗ ನಾಲ್ಕು ವರ್ಷ ಕಾಯುವಿಕೆಯ ನಂತರ ಯಾವುದೇ ಕೀರ್ತಿ ಅಥವಾ ಹೆಸರು ಸಹಾಯಕ್ಕೆ ಬರುವುದಿಲ್ಲ ಎಂಬ ಅರಿವಾಗಿದೆ. ಈಗ ಜೂನ್ ೯ ನನ್ನ ಸಿನೆಮಾ ಬಿಡುಗಡೆಯಾಗಲಿದ್ದು ಅದನ್ನು ಎದುರು ನೋಡುತ್ತಿದ್ದೇನೆ" ಎನ್ನುತ್ತಾರೆ ರಾಜ್. 
ಕುಮಾರೇಶ್ ನಿರ್ದೇಶಿಸಿರುವ 'ನೂರೊಂದು ನೆನಪು' ಸಿನೆಮಾದಲ್ಲಿ ಬಹುತಾರಾಗಣದ ಭಾಗವಾಗಿ ರಾಜ್ ಕೂಡ ನಟಿಸಿದ್ದಾರೆ. ಚೇತನ್, ಮೇಘನಾ ರಾಜ್ ಮತ್ತು ಅರ್ಚನಾ ಇತರ ನಟರು. "ಇತ್ತೀಚಿಗೆ ನಿರ್ಮಾಪಕರು ಹೊಸ ನಟರನ್ನು ತೊಡಗಿಸಿಕೊಳ್ಳಲು ಹೆದರಿಕೊಳ್ಳುತ್ತಾರೆ ಏಕೆಂದರೆ ಅವರಿಗೆ ಒಳ್ಳೆಯ ಓಪನಿಂಗ್ ಸಿಗುವುದಿಲ್ಲ. ಆದುದರಿಂದ ಬಹುತಾರಾಗಣವಿದ್ದರೂ ಅದರ ಭಾಗವಾಗಲು ಒಪ್ಪಿಕೊಂಡೆ. ಮತ್ತೆ ನನಗೆ ಮನೆಯಲ್ಲಿ ಸುಮ್ಮನೆ ಕೂರಲು ಇಷ್ಟವಿರಲಿಲ್ಲ. ಸಿನೆಮಾ ನೋಡಿದ ಚಿತ್ರರಂಗದ ಪ್ರಮುಖರು ಒಳ್ಳೆಯ ಪ್ರತಿಕ್ರಿಯೆ ನೀಡಿದ್ದಾರೆ" ಎಂದು ತಿಳಿಸುತ್ತಾರೆ ರಾಜ್. 
SCROLL FOR NEXT