ರಣ್ಬೀರ್ ಕಪೂರ್ 
ಸಿನಿಮಾ ಸುದ್ದಿ

ಮೊರಕ್ಕೊ ರಸ್ತೆಗಳಲ್ಲಿ ಸಾರ್ವನಿಕರಿಂದ ಹಣ ಬೇಡಿದ ನಟ ರಣ್ಬೀರ್ ಕಪೂರ್

ಮೊರಕ್ಕೊ ರಸ್ತೆಗಳಲ್ಲಿ ನಟಿ ಕತ್ರೀನಾ ಕೈಫ್ ಜೊತೆ ರಣ್ಬೀರ್ ಕಪೂರ್ ಡ್ಯಾನ್ಸ್ ಮಾಡುತ್ತಾ ಹಣ...

ಮುಂಬಯಿ: ಮೊರಕ್ಕೊ ರಸ್ತೆಗಳಲ್ಲಿ ನಟಿ ಕತ್ರೀನಾ ಕೈಫ್ ಜೊತೆ ರಣ್ಬೀರ್ ಕಪೂರ್ ಡ್ಯಾನ್ಸ್ ಮಾಡುತ್ತಾ ಹಣ ಬೇಡಿದ್ದಾರೆ. 
ಹೌದು. ಜಗ್ಗಾ ಜಾಸೂಸ್ ಚಿತ್ರದ ಹಾಡಿನ ಶೂಟಿಂಗ್ ವೊಂದರಲ್ಲಿ ರಣ್ಬೀರ್ ಮತ್ತು ಕತ್ರೀನಾ ಡ್ಯಾನ್ಸ್ ಮಾಡಿ ಅಲ್ಲಿ ನೆರೆದಿದ್ದ ಜನರ ಬಳಿಯಿಂದ ಹಣ ಸಂಗ್ರಹಿಸಿದ್ದಾರೆ.
ಚಿತ್ರೀಕರಣಕ್ಕೂ ಮೊದಲು ನಿರ್ದೇಶಕ ಅನುರಾಗ್ ಬಸು ಮತ್ತು ಅವರ ಸಹಾಯಕರು ಮೊರಕ್ಕೊ ರಸ್ತೆಯಲ್ಲಿ ಡ್ಯಾನ್ಸ್ ಆರಂಭಿಸಿದ್ದಾರೆ, ಡ್ಯಾನ್ಸ್ ನೋಡಲು ಜನ ಸೇರುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಡ್ಯಾನ್ಸ್ ಮಾಡುತ್ತಿದ್ದರು.
ನೋಡ ನೋಡುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ಜನ ಸಮುದಾಯವೇ ಅಲ್ಲಿ ನೆರೆದು ಡ್ಯಾನ್ಸ್ ಪ್ರದರ್ಶನ ನೋಡುತ್ತಿತ್ತು. ನಿರ್ದೇಶಕರ ಯೋಜನೆ ಫಲಿಸಿತ್ತು. ನಂತರ ರಣ್ಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಅವರನ್ನು ಕರೆತಂದು ಅಲ್ಲಿಯೇ ಡ್ಯಾನ್ಸ್ ಮಾಡಿಸಿದರು. ಈ ವೇಳೆ ಕೇವಲ ಡ್ಯಾನ್ಸ್ ಮಾತ್ರ ಮಾಡದೇ ನೆರೆದಿದ್ದ ಜನರ ಬಳಿ ತಮ್ಮ ಬಳಿಯಿದ್ದ ಟೋಪಿ ಹಿಡಿದು ಹಣ ಕೇಳಿದ್ದಾರೆ.
ಈ ವಿಷಯವನ್ನು ಅನುರಾಗ್ ಬಸು ಹಂಚಿಕೊಂಡಿದ್ದು, ರಣ್ಬೀರ್ ಕಪೂರ್ ಡ್ಯಾನ್ಸ್ ಮಾಡುತ್ತಾ ಹಣ ಸಂಗ್ರಹಿಸಿದ್ದರು. ರಣ್ಬೀರ್ 250-300 ಮೊರಕ್ಕಾನ್ ಧಿರ್ ಹಾಮ್ಸ್ ಸಂಗ್ರಹಿಸಿದ್ದಾರೆ ಎಂದು ಹೇಳಿದ್ದಾರೆ. ಜಗ್ಗಾ ಜಾಸೂಸ್ ಜುಲೈ 14 2017 ರಂದು ರಿಲೀಸ್ ಆಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT