ವಾಷಿಂಗ್ಟನ್: ಹಾಲಿವುಡ್ ನಲ್ಲಿ 1950-60ರಲ್ಲಿ ಪ್ರಖ್ಯಾತಿ ಪಡೆದಿದ್ದ ಎಬಿಸಿ ಪ್ರವೈಟ್ ಹೈ ಸಿರೀಸ್ 77 ಸನ್ ಸೆಟ್ ಸ್ಟ್ರಿಪ್ ಟಿವಿ ಶೋನ ಖ್ಯಾತ ನಟ ರೋಜರ್ ಸ್ಮಿತ್ ನಿಧನರಾಗಿದ್ದಾರೆ.
84 ವರ್ಷದ ರೋಜರ್ ಸ್ಮಿತ್ ಅನಾರೋಗ್ಯದಿಂದ ಬಳಲುತ್ತಿದ್ದರು. ರೋಜರ್ ಅವರು ಹಲವು ಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ರೋಜರ್ ಅಂಡ್ ಮಿ ಚಿತ್ರದಲ್ಲಿ ರೋಜರ್ ಸ್ಮಿತ್ ನಟಿಸಿದ್ದಾರೆ.
ಹಾಲಿವುಡ್ ನಟಿ ಅನ್ ಮಾರ್ಗೇಟ್ ಅವರನ್ನು ರೋಜರ್ ಸ್ಮಿತ್ ವರಿಸಿದ್ದರು. ಸ್ಮಿತ್ ಅವರಿಗೆ ಟ್ರೆಸಿ ಸ್ಮಿತ್, ಜೋರ್ಡನ್ ಸ್ಮಿತ್ ಮತ್ತು ಡಲ್ಲಾಸ್ ಸ್ಮಿತ್ ಮೂವರು ಮಕ್ಕಳಿದ್ದಾರೆ.