'ನೂರೊಂದು ನೆನಪು' ಸಿನೆಮಾದಲ್ಲಿ ಚೇತನ್ 
ಸಿನಿಮಾ ಸುದ್ದಿ

ಪ್ರೀತಿಯಿಂದ ಕಾಲೇಜು ದಿನಗಳಿಗೆ ಹಿಂದಿರುಗಿದ ಚೇತನ್; 'ನೂರೊಂದು ನೆನಪು' ನಾಳೆ ಬಿಡುಗಡೆ

ನಟ ಚೇತನ್ ಪಾತ್ರಗಳ ಆಯ್ಕೆಯಲ್ಲಿ ಸದಾ ನಾಜೂಕು ಮತ್ತು ಪ್ರೇಕ್ಷಕರ ನಿರೀಕ್ಷೆಯು ಕೂಡ ಅದೆ. ಈಗ ಎಂ ಕುಮಾರೇಶ್ ನಿರ್ದೇಶನದ ಅವರ ಮುಂದಿನ ಚಿತ್ರ 'ನೂರೊಂದು ನೆನಪು'ವಿನಲ್ಲಿ ನಟ ಕಾಲೇಜು

ಬೆಂಗಳೂರು: ನಟ ಚೇತನ್ ಪಾತ್ರಗಳ ಆಯ್ಕೆಯಲ್ಲಿ ಸದಾ ನಾಜೂಕು ಮತ್ತು ಪ್ರೇಕ್ಷಕರ ನಿರೀಕ್ಷೆಯು ಕೂಡ ಅದೆ. ಈಗ ಎಂ ಕುಮಾರೇಶ್ ನಿರ್ದೇಶನದ ಅವರ ಮುಂದಿನ ಚಿತ್ರ 'ನೂರೊಂದು ನೆನಪು'ವಿನಲ್ಲಿ ನಟ ಕಾಲೇಜು ದಿನಗಳಿಗೆ ಹಿಂದಿರುಗಿದ್ದಾರೆ. 
೮೦ರ ದಶಕದ ಕಾದಂಬರಿ ಆಧಾರಿತ ಸಿನೆಮಾ ಇದಾಗಿದೆ. "ಇಲ್ಲಿ ಪಾತ್ರದ ಬೆಳವಣಿಗೆ ಇದೆ. ವರ್ಷಗಳು ಕಳೆದಂತೆ ಅವನು ಹೇಗೆ ಬದಲಾಗುತ್ತಾನೆ, ಅವನ ಗೆಳೆತನ, ಪ್ರೀತಿ ಮತ್ತು ಕುಟುಂಬದ ಸಂಬಂಧಗಳು ಹೇಗೆ ಬದಲಾಗುತ್ತವೆ ಎಂಬ ಅಂಶ ಸಿನಿಮಾದಲ್ಲಿದೆ" ಎನ್ನುತ್ತಾರೆ ಚೇತನ್. 
"ಸಂತೋಷ ದುಃಖದೊಟ್ಟಿಗೆ ಬರುತ್ತದೆ ಮತ್ತು ಈ ಸಿನೆಮಾದಲ್ಲಿ ಆ ಡ್ರಾಮಾ ಇದೆ. ಇದು ಪ್ರೇಕ್ಷಕರನ್ನು ಕಾಡುವ ಭರವಸೆ ನನಗಿದೆ. ಎಲ್ಲ ಪಾತ್ರಗಳು ಮತ್ತು ಮುಖ್ಯವಾಗಿ ಮುಖ್ಯಪಾತ್ರ ನೆನಪಿನಲ್ಲುಳಿಯಲಿದೆ" ಎನ್ನುತ್ತಾರೆ ನಟ.
ಇದು ಯುವಕರಿಗೆ ಭಾರಿ ಇಷ್ಟವಾಗಲಿದೆ ಏಕೆಂದರೆ ಇದು ಕಾಲೇಜು ಕಥೆ ಮತ್ತಿದು ಹಿರಿಯ ಪ್ರೇಕ್ಷಕರಿಗೂ ರುಚಿಸಲಿದೆ ಏಕೆಂದರೆ ಅವರ ಗತದ ಖುಷಿಯ ದಿನಗಳನ್ನು ನೆನಪಿಸುತ್ತದೆ. ಅಮೆರಿಕಾದಲ್ಲಿ ಓದಿ ಬೆಳೆದ ಚೇತನ್ ಗೆ ೮೦ ರ ದಶಕದ ಕಾಲೇಜು ಜೀವನದ ಕಥೆಯಾ ಬಗ್ಗೆ ಆಸಕ್ತಿ ಮೂಡಿಸಿದ್ದು ಹೇಗೆ ಎಂಬ ಪ್ರಶ್ನೆಗೆ "ನಾನು ವಿಶ್ವವಿದ್ಯಾಲಯದ ಶಿಕ್ಷಣ ಮುಗಿಸಿದಾಕ್ಷಣ ಭಾರತಕ್ಕೆ ಬಂದೆ. ಒಂದು ರೀತಿಯಲ್ಲಿ, ಕಳೆದ ೧೨ ವರ್ಷಗಳು ಕಾಲೇಜು ಜೀವನದಂತೆಯೇ ಇದೆ. ಸಂಶೋಧನೆ ನಡೆಸಲು, ಶಿಕ್ಷಣ ಮುಂದುವರೆಸಲು ಮತ್ತು ಸಮಾಜವನ್ನು ಅಧ್ಯಯನ ಮಾಡಲು ನಾನು ಇಲ್ಲಿಗೆ ಹಿಂದಿರುಗಿದ್ದು. ಪ್ರತಿದಿನ ಏನನ್ನೋ ಹೊಸದೊಂದು ಅನುಭವಿಸುತ್ತಿದ್ದೇನೆ. ಅಮೆರಿಕಾದಲ್ಲಿ ಹುಟ್ಟಿ ಬೆಳೆದವನಿಗೆ ಇಲ್ಲಿ ಎಲ್ಲವೂ ಆಸಕ್ತಿದಾಯಕವಾಗಿ ಕಾಣುತ್ತದೆ, ಅದು ಭಾಷೆಯಿರಲಿ, ಸಂಸ್ಕೃತಿಯಿರಲಿ! ನನ್ನ ಕೂದಲು ನೆರೆಯುತ್ತಿದೆ, ಆದರೆ ಕಲಿಯುವಾಗ ಇನ್ನು ಸಣ್ಣವನಾಗುತ್ತಿರುವ ಭಾವನೆ ಇದೆ" ಎನ್ನುತ್ತಾರೆ ಚೇತನ್. 
ಬೆಂಗಳೂರು ಭೂಗತ ಲೋಕದ ಕಥೆಯಿದ್ದ 'ಆ ದಿನಗಳು' ಸಿನೆಮಾದ ಮೂಲಕ ನಟನೆಯ ವೃತ್ತಿ ಜೀವನ ಪ್ರಾರಂಭಿಸಿದ ಚೇತನ್ "ಈ ನನ್ನ ಸಿನೆಮಾ ಕಾಲೇಜಿನ ಬಗೆಗೆ ಮತ್ತು ಅಂದಿನ ರೋಮ್ಯಾನ್ಸ್ ಬಗ್ಗೆ. ಇದು ಪ್ರೇಕ್ಷಕರಿಗೆ ನಿಜವಾಗಿಯೂ ರುಚಿಸಲಿದೆ" ಎನ್ನುತ್ತಾರೆ. 
'ನೂರೊಂದು ನೆನಪು' ಸಿನೆಮಾದಲ್ಲಿ ಮೇಘನಾ ರಾಜ್, ರಾಜ್ ವರ್ಧನ್, ಅರ್ಚನಾ ಮತ್ತು ಸುಶ್ಮಿತಾ ಜೋಶಿ ನಟಿಸಿದ್ದಾರೆ. ಗಗನ್ ಬಡೇರಿಯ ಸಂಗೀತ ನೀಡಿದ್ದು ಎಸ್ ಕೆ ರಾವ್ ಅವರ ಸಿನೆಮ್ಯಾಟೋಗ್ರಫಿ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT