ಬೆಂಗಳೂರು: ತಮಿಳು ಸಿನೆಮಾ 'ಪಿಚ್ಚೈಕಾರನ್' ರಿಮೇಕ್ ನಲ್ಲಿ ನಟಿಸುವ ನಟ ಇಶಾನ್ ಅವರ ಬಯಕೆ ಕೈಗೂಡಿದೆ. ೨೦೧೬ ರಲ್ಲಿ ಬಿಡುಗಡೆಯಾಗಿದ್ದ ಈ ಸಿನೆಮಾದಲ್ಲಿ ವಿಜಯ್ ಆಂಟನಿ ನಟಿಸಿದ್ದರು.
ಈ ಸಿನೆಮಾದ ರಿಮೇಕ್ ಹಕ್ಕುಗಳನ್ನು ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಹೊಂದಿದ್ದು, ಈಗ ರಿಮೇಕ್ ಭಾಗವಾಗಿ ಇಶಾನ್ ಅವರನ್ನು ಕರೆತರಲು ನಿಶ್ಚಯಿಸಿದೆ.
ಇದನ್ನು ಧೃಢೀಕರಿಸಿರುವ ಯೋಗಿ, ಇದು ದ್ವಾರಕೀಶ್ ಪಿಕ್ಚರ್ಸ್ ಸಂಸ್ಥೆಯ ೫೧ನೆಯ ಸಿನೆಮಾ ಎಂದಿದ್ದಾರೆ. ಇದಕ್ಕೆ ಅವರ ತಂದೆ ದ್ವಾರಕೀಶ್ ಅವರ ಹುಟ್ಟುಹಬ್ಬವಾದ ಆಗಸ್ಟ್ ೧೯ ರಂದು ಚಾಲನೆ ಸಿಗಲಿದ್ದು, ಅದಕ್ಕೂ ಮುಂಚಿತವಾಗಿ ಇಶಾನ್ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರಂತೆ.
"'ನೀವು ನಂಬುವುದಿಲ್ಲ, ಪಿಚ್ಚೈಕಾರನ್' ರಿಮೇಕ್ ಹಕ್ಕುಗಳನ್ನು ನಾವು ಖರೀದಿಸಿದ ನಂತರ ನನ್ನಲ್ಲಿ ಸುಮಾರು ೧೫ ನಿರ್ಮಾಪಕರು ಅದಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಈ ಸಿನೆಮಾ ತಮಿಳಿನಲ್ಲಿ ೨೦ ಕೋಟಿ ಮತ್ತು ತೆಲುಗಿನಲ್ಲಿ ೨೫ ಕೋಟಿ ಗಳಿಸಿತ್ತು. ಸಿನೆಮಾದ ವಿಷಯ ಭಾವನಾತ್ಮಕವಾದದ್ದು ಹೂಡಿಕೆ ಮಾಡಲು ನಿಶ್ಚಯಿಸಿದೆ" ಎನ್ನುತ್ತಾರೆ ಯೋಗಿ.
ಸಾಮಾಜಿಕ ಸಂದೇಶವನ್ನು ಹರಡುವುದು ನಕಲು ಮಾಡಿದಂತಲ್ಲ ಎನ್ನುವ ಯೋಗಿ "ನಾನು ಸರಿಯಾಗಿ ನೆನಪಿಸಿಕೊಂಡರೆ ಸಿನೆಮಾದ ಮೂಲಕ ಮೊದಲು ಹೇಳಿದ ಕಥೆಗಳು ರಾಮಾಯಣ ಮತ್ತು ಮಹಾಭಾರತ. .. ಇವುಗಳನ್ನು ಸಂಸ್ಕೃತದಲ್ಲಿ ಬರೆದು ಹಲವು ಭಾಷೆಗಳಲ್ಲಿ ಅನುವಾದ ಆಗಿದೆ. ಆದುದರಿಂದ ರಿಮೇಕ್ ಅನ್ನು ಕೂಡ ನಿಷಿದ್ಧದಂತೆ ಕಾಣುವ ಅವಶ್ಯಕತೆ ಇಲ್ಲ. ಯಾವುದೇ ಒಳ್ಳೆಯ ಕಥೆಯನ್ನು ಮತ್ತೆ ಮತ್ತೆ ಹೇಳಬೇಕಾಗುತ್ತದೆ ಮತ್ತು ವಿಭಿನ್ನ ಭಾಷೆಗಳಲ್ಲಿ, ವಿಭಿನ್ನ ಪ್ರೇಕ್ಷಕರಿಗೆ ಅದನ್ನು ಮೂಡಿಸಬೇಕಾಗುತ್ತದೆ. ಅಲ್ಲದೆ ನಾನು ಸಿನೆಮಾಗಳನ್ನು ಅಳವಡಿಸಿಕೊಳ್ಳುತ್ತೇನೆ, ರಿಮೇಕ್ ಮಾಡುವುದಿಲ್ಲ" ಎನ್ನುತ್ತಾರೆ ಯೋಗಿ.
ಇಶಾನ್ ನಟಿಸಲಿರುವ ಈ ಸಿನೆಮಾವನ್ನು ಕೆ ಎಂ ಚೈತನ್ಯ ನಿರ್ದೇಶಿಸಿದರೆ ಉತ್ತಮವಾಗಿರುತ್ತದೆ ಎನ್ನುತ್ತಾರೆ ಯೋಗಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics