ಮುಂಬೈ: ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ ನಟಿ ರವೀನಾ ಟಂಡನ್ ಇತ್ತೀಚಿಗೆ ತಮ್ಮ ಅಭಿಪ್ರಾಯಗಳನ್ನು ಗಟ್ಟಿಯಾಗಿ ಹೇಳುತ್ತಿದ್ದಾರೆ ಎಂಬ ಟ್ವಿಟ್ಟರ್ ಟ್ರಾಲ್ ಗಳಿಗೆ ಉತ್ತರಿಸಿರುವ ನಟಿ, ರಾಜಕೀಯ ಸೇರುವ ಆಸಕ್ತಿ ತಮಗೆ ಇಲ್ಲ ಎಂದ್ದಾರೆ.
"ಸೀರೆಯ ದಿನ.. ಇದನ್ನು ಕೋಮುವಾದಿ, ಸಂಘಿ, ಭಕ್ತ, ಹಿಂದುತ್ವವಾದಿ ಎಂದು ಕರೆಯಲಾಗುವುದೇ? ನನಗೆ ಸೀರೆ ಉಡುವುದು ಇಷ್ಟ ಏಕೆಂದರೆ ಅದು ಬಹಳ ಸೊಬಗಿನದ್ದು" ಎಂದು ನಟಿ ಹೇಳಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಕುಚೋದ್ಯ ಮಾಡಲಾಗುತ್ತಿದೆ.
"ನೀವು ಸಿನೆಮಾಗೆ ಹಿಂದಿರುಗಲು ಪ್ರಯತ್ನಿಸುತ್ತಿದ್ದೀರಿಯೇ? ಅಥವಾ ೨೦೧೯ ರಲ್ಲಿ ಸಂಘಿ ಸೀಟ್ ಆಕಾಂಕ್ಷಿಯೇ?" ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಬರೆದಿದ್ದರು.
ಇದಕ್ಕೆ ರವೀನಾ ಉತ್ತರಿಸಿದ್ದು "ನಾನು ರಾಜಕೀಯಕ್ಕೆ ಸೇರುತ್ತೇನೆ ಎಂದು ಯೋಚಿಸುತ್ತಿರುವ ಎಲ್ಲರಿಗೂ, ನನಗೆ ಇದರಲ್ಲಿ ಆಸಕ್ತಿ ಇಲ್ಲ. ಟಿಎಂಸಿ, ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನನಗೆ ಅವಕಾಶ ಬಂದಿತ್ತು. ನಾನು ಬೇಡ ಎಂದೆ" ಎಂದು ಬರೆದಿದ್ದಾರೆ.
ಅವರ ಸೀರೆ ಟ್ವೀಟ್ ಬಗ್ಗೆ ಕೂಡ ಸ್ಪಷ್ಟಿಕರಣ ನೀಡಿ, ಅವರ ಮೊದಲ ಟ್ವೀಟ್ ಗೆ ಕ್ಷಮೆ ಕೂಡ ಕೋರಿದ್ದಾರೆ. "ಅದನ್ನು ನೀವು ಬೇರೆ ರೀತಿ ಅರ್ಥ ಮಾಡಿಕೊಂಡಿದ್ದರೆ ನಾನು ಕ್ಷಮೆ ಕೋರುತ್ತೇನೆ. ಅದು ನನ್ನ ಇರಾದೆ ಆಗಿರಲಿಲ್ಲ. ಇದನ್ನು ಹೀಗೆ ತಪ್ಪಾಗಿ ಅರ್ಥ ಮಾಡಿಕೊಳ್ಳಬಹುದು ಎಂದು ನನಗೆ ತಿಳಿದಿರಲಿಲ್ಲ" ಎಂದು ಬರೆದಿದ್ದಾರೆ.
ರವೀನಾ ಅವರ ನೂತನ ಚಿತ್ರ 'ಶಬ್' ಜೂನ್ ೩೦ಕ್ಕೆ ಬಿಡುಗಡೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics