ಸಿನಿಮಾ ಸುದ್ದಿ

ತೆರೆಯ ಮೇಲೆ ದಿಗ್ಗಜರು: ಸಲ್ಮಾನ್ ಖಾನ್ ಜೊತೆ ಬಾಹುಬಲಿ ಪ್ರಭಾಸ್ ನಟನೆ?

Shilpa D
ಮುಂಬಯಿ: ಬಾಹುಬಲಿ ಹೀರೋ ಪ್ರಭಾಸ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಇಬ್ಬರನ್ನು ಒಟ್ಟಿಗೆ ತೆರೆ ಮೇಲೆ ತರಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.
ನಿರ್ದೇಶಕ ರೋಹಿತ್ ಶೆಟ್ಟಿ ಈ ಇಬ್ಬರೂ ದೈತ್ಯರನ್ನು ಜತೆಯಾಗಿ ತೆರೆ ಮೇಲೆ ತರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಆದರೆ ಅದಿನ್ನೂ ಪಕ್ಕಾ ಆಗಿಲ್ಲ. ಒಂದು ವೇಳೆ ಈ ಇಬ್ಬರೂ ಸೂಪರ್ ಸ್ಟಾರ್ ಗಳು ಜತೆಯಾದರೆ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ.
ಅದರ ಜತೆಗೆ ಬಾಹುಬಲಿ ಹಿಂದಿ ಅವತರಣಿಕೆಯ ಹಂಚಿಕೆದಾರ ಕರಣ್ ಜೋಹರ್ ಕೂಡಾ ಪ್ರಭಾಸ್ ರನ್ನು ಬಾಲಿವುಡ್ ಗೆ ಪರಿಚಯಿಸಲು ತುದಿಗಾಲಲ್ಲಿ ನಿಂತಿದ್ದಾರಂತೆ. ಸದ್ಯಕ್ಕೆ ಪ್ರಭಾಸ್ ತಮ್ಮ ಸಾಹೋ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
SCROLL FOR NEXT