ಸಿನಿಮಾ ಸುದ್ದಿ

ಎಸ್ ಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ 'ಸೈರಾತ್'/'ಮನಸು ಮಲ್ಲಿಗೆ' ನಟಿ ರಿಂಕು

Guruprasad Narayana
ಮುಂಬೈ: ಮರಾಠಿ ಬ್ಲಾಕ್ ಬಸ್ಟರ್ ಚಿತ್ರ 'ಸೈರಾತ್' ನಟಿ ಪ್ರೇರಣಾ ಎಂ ರಾಜಗುರು ಅಲಿಯಾಸ್ ರಿಂಕು ಎಸ್ ಎಸ್ ಸಿ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿದ್ದು ೬೬.೪೦% ಅಂಕಗಳನ್ನು ಗಳಿಸಿದ್ದಾರೆ. 
'ಸೈರಾತ್' ಸಿನೆಮಾ ಕನ್ನಡದಲ್ಲಿ ರಿಮೇಕ್ ಆಗಿತ್ತು. ಎಸ್ ನಾರಾಯಣ್ ನಿರ್ದೇಶನದ 'ಮನಸು ಮಲ್ಲಿಗೆ' ರಿಮೇಕ್ ಸಿನೆಮಾದಲ್ಲಿ ಕೂಡ ರಿಂಕು ನಟಿಸಿದ್ದರು.
ವಿವಿಧ ವಿಷಯಗಳಲ್ಲಿ ೧೭ ವರ್ಷದ ನಟಿ ಗಳಿಸಿರುವ ಅಂಕಗಳು ಇಂತಿವೆ. ಹಿಂದಿ (೮೭), ಮರಾಠಿ (೮೩), ಇಂಗ್ಲಿಷ್ (೫೯), ವಿಜ್ಞಾನ ಮಾತು ತಂತ್ರಜ್ಞಾನ (೪೨), ಗಣಿತ (೪೮) ಮತ್ತು ಸಮಾಜ ವಿಜ್ಞಾನ (೫೦). ಈ ಪರೀಕ್ಷೆಯನ್ನು ಮಹಾರಾಷ್ಟ್ರ್ದ ಎಂ ಎಸ್ ಬಿ ಎಸ್ ಎಚ್ ಎಸ್ ಇ ನಡೆಸುತ್ತದೆ. 
ನಾಗರಾಜ್ ಮಂಜುಳೆ ನಿರ್ದೇಶನದ 'ಸೈರಾತ್' ನಲ್ಲಿ ನಟನೆಗೆ ರಿಂಕು ಆಯ್ಕೆಯಾದಾಗ ಅವರಿಗೆ ೧೪ ವರ್ಷ. ೫ ಕೋಟಿ ವೆಚ್ಚದ ಈ ಸಿನೆಮಾ ಬಿಡುಗಡೆಯ ನಂತರ ೧೦೦ ಕೋಟಿ ಗಳಿಸಿದ್ದು ವಿಶೇಷ. ರಿಂಕು ಅವರ ನಟನೆ ೨೦೧೫ ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರದಲ್ಲಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿತ್ತು. 
SCROLL FOR NEXT