ಮುಗುಳುನಗೆ 
ಸಿನಿಮಾ ಸುದ್ದಿ

ಮುಗುಳುನಗೆಯ ಮೊದಲ ಪ್ರೇಕ್ಷಕ ನಿರ್ದೇಶಕ ಸೂರಿ!

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಸೂರಿ ಯೋಗರಾಜ್ ಭಟ್ ಅವರ ಮುಗುಳುನಗೆ ಸಿನಿಮಾವನ್ನು ವೀಕ್ಷಿಸಿ, ಸಿನಿಮಾ ವೀಕ್ಷಿಸಿದ ಮೊದಲ ಪ್ರೇಕ್ಷಕರಾಗಿದ್ದಾರೆ.

ಒಬ್ಬ ನಿರ್ದೇಶನ ಮತ್ತೋರ್ವ ನಿರ್ದೇಶಕನ ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ನೋಡುವುದು ಅಪರೂಪ, ವಿರಳ. ಆದರೆ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಸೂರಿ ಯೋಗರಾಜ್ ಭಟ್ ಅವರ ಮುಗುಳುನಗೆ ಸಿನಿಮಾವನ್ನು ವೀಕ್ಷಿಸಿ, ಸಿನಿಮಾ ವೀಕ್ಷಿಸಿದ ಮೊದಲ ಪ್ರೇಕ್ಷಕರಾಗಿದ್ದಾರೆ. 
ನಿರ್ದೇಶಕ ಸೂರಿ ಸಧ್ಯಕ್ಕೆ ಟಗರು ಸಿನಿಮಾವನ್ನು ಮುಕ್ತಾಯಗೊಳಿಸುತ್ತಿದ್ದು, ಜು.1 ರಿಂದ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ನಡೆಸಲಿದ್ದಾರೆ. ಬಿಡುವಿರದ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು ಯೋಗರಾಜ್ ಭಟ್ಟರ ಸಿನಿಮಾ ವೀಕ್ಷಿಸಿದ್ದಾರೆ ನಿರ್ದೇಶಕ ಸೂರಿ.  
ಮುಗುಳುನಗೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸೂರಿ, " ಈ ಸಿನಿಮಾ ಯೋಗರಾಜ್ ಭಟ್ಟರಿಗೆ ಖಂಡಿತವಾಗಿಯೂ ಕಂಬ್ಯಾಕ್ ಸಿನಿಮಾ ಆಗಿರಲಿದ್ದು, ಭಟ್ಟರ ಟ್ರೇಡ್ ಮಾರ್ಕ್ ಇದೆ, ಗಣೇಶ್ ಸಹ ಉತ್ತಮನ ನಟನೆ ನೀಡಿದ್ದು ಒಟ್ಟಾರೆ ಒಳ್ಳೆಯ ಸಿನಿಮಾ ಎಂದು ಬಣ್ಣಿಸಿದ್ದಾರೆ. 
ಚಿತ್ರ ನಿರ್ದೇಶಕ ಯೋಗರಾಜ್ ಭಟ್, ನಟ ಗಣೇಶ್ ಹಾಗೂ ಇನ್ನಿತರ ತಂತ್ರಜ್ಞರೊಂದಿಗೆ ಸಿನಿಮಾ ವೀಕ್ಷಿಸಿರುವ ನಿರ್ದೇಶಕ ಸೂರಿ,  ಭಟ್ಟರು-ಗಣೇಶ್ ಜೋಡಿಯಿಂದ ಪ್ರೇಕ್ಷಕರು ಮುಂಗಾರು ಮಳೆಯಂತಹ ಸಿನಿಮಾವನ್ನು ಎದುರುನೋಡುತ್ತಿದ್ದಾರೆ. ಆದರೆ ಇದು ಪ್ರೇಕ್ಷಕರ ನಿರೀಕ್ಷೆಗಿಂತಲೂ ಮೇಲ್ಮಟ್ಟದಲ್ಲಿದ್ದು, ಇಂದಿನ ಟ್ರೆಂಡ್ ಗೆ ತಕ್ಕಂತೆ ಇದೆ ಎಂದು ಹೇಳಿದ್ದಾರೆ. ಮುಗುಳುನಗೆ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ಸುಜ್ಞಾನ್ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!