ಸಿನಿಮಾ ಸುದ್ದಿ

ನಾನು ನಟಿ, ನನ್ನ ಗಮನವೆಲ್ಲಾ ಸಿನಿಮಾ ಮೇಲೆ ಮಾತ್ರ: ಪಾರುಲ್ ಯಾದವ್

Shilpa D
ಬೆಂಗಳೂರು: ನಾನು ಮತ್ತೊಬ್ಬ ನಟಿಯ ರೀತಿ ಇರಬೇಕೆಂದು ನನಗೆ ನಾನು ನಿರ್ಬಂಧ ವಿಧಿಸಿಕೊಳ್ಳುವುದಿಲ್ಲ ಎಂದು ನಟಿ ಪಾರುಲ್ ಯಾದವ್ ಹೇಳಿದ್ದಾರೆ.
ಇತ್ತೀಚೆಗೆ ಪಾರುಲ್ ಯಾದವ್, ಪಂಜಾಬಿ ವಿಡಿಯೋ ವೊಂದರಲ್ಲಿ ಪ್ರಸಿದ್ದ ಗಾಯಕ ಗಿಪ್ಪಿ ಗ್ರೇವಾಲ್ ಅವರ ಜೊತೆ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಬಿಡಗಡೆಯಾದ ನಂತರ  ಸಾಕಷ್ಟು ಪ್ರಮಾಣದಲ್ಲಿ ಹಿಟ್ ಗಳಿಸಿಕೊಂಡಿದೆ. ಆ ಆಲ್ಬಂನಲ್ಲಿ ಅಭಿನಯಿಸುವುದಕ್ಕೆ ಸಂತಸವಾಗಿದೆ, ನಾನು ಟ್ರೆಂಡ್ ಸೆಟ್ಟರ್ ಆಗಬೇಕೆಂಬ ಆಸೆಯಿದೆ ಎಂದು ಪಾರುಲ್ ತಮ್ಮ ಬಯಕೆ 
ವ್ಯಕ್ತ ಪಡಿಸಿದ್ದಾರೆ.
ನಾನು ಒಬ್ಬ ನಟಿ ಎಂದು ಗುರುತಿಸಿಕೊಂಡಿದ್ದೇನೆ, ಹೀಗಾಗಿ ನನ್ನ ಗಮನವೆಲ್ಲಾ ಕೇವಲ ಸಿನಿಮಾ ಮೇಲೆ ಮಾತ್ರ, ಸ್ಟಿರಿಯೋ ಟೈಪ್ ನಿಂದ ನಾನು ದೂರ ಎಂದು ಹೇಳಿರುವ ಅವರು, ‘ಕ್ವೀನ್‌’ನಲ್ಲಿ ಸಾಮಾಜಿಕ ಸಂದೇಶವೂ ಇದೆ. ಹಾಗಾಗಿ, ‘ಕ್ವೀನ್’ ಸಿನಿಮಾದ ಕನ್ನಡ ಅವತರಣಿಕೆ ‘ಪಾತರಗಿತ್ತಿ’ಯ ಭಾಗ ಆಗಿರುವುದಕ್ಕೆ ನನಗೆ ಸಂತಸವಿದೆ, ಗ್ಲಾಮರಸ್ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಬಲ್ಲೆ ಎಂದು ಹೇಳಿದ್ದಾರೆ.
ಪಂಜಾಬಿ ವಿಡಿಯೋದಲ್ಲಿ ನಾನು ಒಂದು ಸ್ಟೆಪ್ ಕೂಡ ಡ್ಯಾನ್ಸ್ ಮಾಡಿಲ್ಲ, ಆದರೂ ಆ ಆಲ್ಬಂ ಸಖತ್ ಹಿಟ್ ಆಗಿದೆ. ಆ ಹಾಡಿನಲ್ಲಿ ನಾನು ಡ್ಯಾನ್ಸ್ ಮಾಡದಿರುವುದರ ಬಗ್ಗೆ ಪ್ರಶ್ನೆ ಎದ್ದಿದೆ. ಮುಂದಿನ ವಿಡಿಯೋದಲ್ಲಿ ನಾನು ಡ್ಯಾನ್ಸ್ ಮಾಡಲಿದ್ದೇನೆ ಎಂದು ಪಾರೂಲ್ ತಿಳಿಸಿದ್ದಾರೆ.
ಪಂಜಾಬಿ ಚಿತ್ರದ ನಂಟು ಪಾರುಲ್ ಯಾದವ್ ರನ್ನು ಬಾಲಿವುಡ್ ಗೆ ಕರೆದೊಯ್ಯುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮಯ ಅದಕ್ಕೆ ಉತ್ತರ ನೀಡಲಿದೆ ಎಂದರು. 
ಜುಲೈ 9 ರಿಂದ ಬಟರ್ ಫ್ಲೈ ಸಿನಿಮಾ ಆರಂಭವಾಗಲಿದ್ದು, ಚಿತ್ರೀಕರಣದಲ್ಲಿ ಪಾರೂಲ್ ಯಾದವ್ ಪಾಲ್ಗೋಳ್ಳಲಿದ್ದಾರೆ. 
SCROLL FOR NEXT