ಲಾಸ್ ಏಂಜಲೀಸ್: ರಾಕಿ ಮತ್ತು ದ ಕರಾಟೆ ಕಿಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಜಾನ್ ಜಿ. ಅವಿಲ್ಡ್ ಸನ್ ನಿನ್ನೆ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಮ್ಮ ತಂದೆ ನಿನ್ನೆ ಲಾಸ್ ಏಂಜಲೀಸ್ ನಲ್ಲಿ ನಿಧನರಾಗಿದ್ದಾರೆ ಎಂದು ಪುತ್ರ ಆಂಟನಿ ಅವಿಲ್ಡ್ ಸನ್ ತಿಳಿಸಿದ್ದಾರೆ. ಅವರೊಬ್ಬ ಅದ್ಭುತ ವ್ಯಕ್ತಿ. ಬಹುಮುಖ ಪ್ರತಿಭೆಯುಳ್ಳವರಾಗಿದ್ದು, ತುಂಬಾ ಚಾಲಿತ ಮತ್ತು ಅತ್ಯಂತ ಮೊಂಡುತನದ ವ್ಯಕ್ತಿಯಾಗಿದ್ದರು. ಅದು ಅವರ ವಿನಾಶಕ್ಕೆ ಕಾರಣವಾಯಿತು ಮತ್ತು ಕೆಲವಮ್ಮೆ ಪ್ರಯೋಜನಕ್ಕೂ ಕಾರಣವಾಯಿತು ಎಂದು ಆಂಟನಿ ಅವಿಲ್ಡೆಸನ್ ಹೇಳುತ್ತಾರೆ.
ಜಾನ್ ಜಿ ಅವಿಲ್ಡ್ಸನ್ ನಿರ್ದೇಶಿಸಿದ್ದ ರಾಕಿ ಚಿತ್ರ ಅತ್ಯಂತ ಯಶಸ್ವಿಯಾಗಿತ್ತು. ಉತ್ತಮ ಚಿತ್ರ, ನಿರ್ದೇಶನ, ಸಂಕಲಕ್ಕೆ ಆಸ್ಕರ್ ಪ್ರಶಸ್ತಿ ಗಳಿಸಿದ್ದ ಈ ಚಿತ್ರ ಇತರ ಏಳು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು.
1 ಮಿಲಿಯನ್ ಡಾಲರ್ ಗಿಂತಲೂ ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ರಾಕಿ ಚಿತ್ರ ಕೇವಲ 28 ದಿನಗಳಲ್ಲಿ ಪೂರ್ಣಗೊಂಡಿತ್ತು. ಈ ಚಿತ್ರದ ಯಶಸ್ಸಿನಿಂದಾಗಿ ನಂತರ ರಾಕಿ 5 ಸರಣಿ ಚಿತ್ರಗಳು ಬಂದಿವೆ. ಕರಾಟೆ ಕಿಡ್ ಕೂಡ ಮೂರನೇ ಭಾಗ 1989ರಲ್ಲಿ ಬಂದಿತ್ತು.
ಅವಿಲ್ಡ್ಸನ್ ಮೂವರು ಗಂಡು ಮಕ್ಕಳಾದ ಜೊನತನ್, ಅಶ್ಲೆ ಮತ್ತು ಆಂಟನಿ ಹಾಗೂ ಪುತ್ರಿ ಬ್ರಿಜೆಟ್ ನ್ನು ಅಗಲಿದ್ದಾರೆ.