ನಟ ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

'ಮಾಸ್ ಲೀಡರ್' ಸೆಟ್ ಗೆ ಹಿಂದಿರುಗಿದ ಶಿವಣ್ಣ; ಚಿತ್ರೀಕರಣ ಸಂಪೂರ್ಣ

ತಾಯಿಯ ಅಗಲಿಕೆಯ ನಂತರ ಈಗ ಮತ್ತೆ ಕೆಲಸಕ್ಕೆ ಹಿಂದಿರುಗಿರುವ ನಟ ಶಿವರಾಜ್ ಕುಮಾರ್, 'ಮಾಸ್ ಲೀಡರ್' ಸಿನೆಮಾದ ಹಾಡೊಂದರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮಿನರ್ವ ಮಿಲ್ಸ್ ನಲ್ಲಿ

ಬೆಂಗಳೂರು: ತಾಯಿಯ ಅಗಲಿಕೆಯ ನಂತರ ಈಗ ಮತ್ತೆ ಕೆಲಸಕ್ಕೆ ಹಿಂದಿರುಗಿರುವ ನಟ ಶಿವರಾಜ್ ಕುಮಾರ್, 'ಮಾಸ್ ಲೀಡರ್' ಸಿನೆಮಾದ ಹಾಡೊಂದರ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಮಿನರ್ವ ಮಿಲ್ಸ್ ನಲ್ಲಿ ಈ ಪರಿಚಯ ಹಾಡನ್ನು ಕಳೆದ ಎರಡು ದಿನಗಳಿಂದ ಚಿತ್ರೀಕರಣ ನಡೆಸಲಾಗಿದೆ. 
ಈ ಹಾಡಿನ ಚಿತ್ರೀಕರಣದಲ್ಲಿ ಶಿವಣ್ಣನವರ ಜೊತೆಗೆ ವಿಜಯ್ ರಾಘವೇಂದ್ರ ಕೂಡ ಭಾಗವಹಿಸಿದ್ದರು. ಡಾ. ನಾಗೇಂದ್ರ ಪ್ರಸಾದ್ ಈ ಹಾಡಿಗೆ ಗೀತರಚನೆ ಮಾಡಿದ್ದು, ನಾಯಕತ್ವದ ಗುಣಗಳ ಬಗ್ಗೆ ಚರ್ಚಿಸುತ್ತದೆಯಂತೆ. ವೀರ ಸಮರ್ಥ್ ಸಂಗೀತದ ಈ ಹಾಡನ್ನು ನಟ ಮತ್ತು ಗಾಯಕ ಚೇತನ್ ಗಂಧರ್ವ ಹಾಡಿದ್ದಾರೆ. 
ಈ ಹಾಡಿನ ಮೂಲಕ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಇಡೀ ಚಿತ್ರತಂಡ ಶಿವರಾಜ್ ಕುಮಾರ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸುವ ಮೂಲಕ ಸಂಭ್ರಮಿಸಿದೆ. ಸೇನಾ ಅಧಿಕಾರಿಯಾಗಿ ಶಿವರಾಜ್ ಕುಮಾರ್ ಈ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದು, ಚಿತ್ರೀಕರಣದ ನಂತರದ ಕೆಲಸಗಳು ಭರದಿಂದ ಸಾಗಿವೆ. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಗಸ್ಟ್ ನಲ್ಲಿ ಸಿನೆಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. 
ಪರಿಣೀತ ಸುಭಾಷ್ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರೆ, ವಿಜಯ್ ರಾಘವೇಂದ್ರ, ಯೋಗೇಶ್, ಗುರುರಾಜ್ ಜಗ್ಗೇಶ್, ಶರ್ಮಿಳಾ ಮಾಂಡ್ರೆ ಹಾಗು ಆಶಿಕಾ ರಘುನಾಥ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 
ಈಗ 'ದ ವಿಲನ್' ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಶಿವರಾಜ್ ಕುಮಾರ್ ಬ್ಯಾಂಗ್ಕಾಕ್ ಗೆ ತೆರಳಲಿದ್ದಾರೆ. ಹಿಂದಿರುಗಿದ ಮೇಲೆ ಸೂರಿ ನಿರ್ದೇಶನದ 'ಟಗರು' ಸಿನೆಮಾದ ಉಳಿದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT