'ಆಕೆ' ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

'ಆಕೆ' ಚಿತ್ರತಂಡಕ್ಕೆ ಲಂಡನ್ ನಲ್ಲಿ ದೆವ್ವ-ಪಿಶಾಚಿ ಕಾಟ!

ದೆವ್ವ-ಅತಿಮಾನುಷ ಹಾರರ್ ಸಿನೆಮಾಗಳ ಚಿತ್ರೀಕರಣದ ವೇಳೆ ಚಿತ್ರತಂಡಕ್ಕೇ ದೆವ್ವದ ಅನುಭಗಳು ಆಗುವುದುಂಟು? ಹೌದೆನ್ನುತ್ತಾರೆ 'ಆಕೆ' ಚಿತ್ರದ ನಿರ್ದೇಶಕ ಕೆ ಎಂ ಚೈತನ್ಯ.

ಬೆಂಗಳೂರು: ದೆವ್ವ-ಅತಿಮಾನುಷ ಹಾರರ್ ಸಿನೆಮಾಗಳ ಚಿತ್ರೀಕರಣದ ವೇಳೆ ಚಿತ್ರತಂಡಕ್ಕೇ ದೆವ್ವದ ಅನುಭಗಳು ಆಗುವುದುಂಟು? ಹೌದೆನ್ನುತ್ತಾರೆ 'ಆಕೆ' ಚಿತ್ರದ ನಿರ್ದೇಶಕ ಕೆ ಎಂ ಚೈತನ್ಯ. ಲಂಡನ್ ನಲ್ಲಿ ಚಿತ್ರೀಕರಣ ಮಾಡುವಾಗ ಇದ್ದಕ್ಕಿದ್ದಂತೆ ಕಗ್ಗತ್ತಲೆಯಾಗುತ್ತಿದ್ದುದು, ವಿಚಿತ್ರ ಶಬ್ದಗಳನ್ನು ಕೇಳಿಸಿಕೊಂಡಿದ್ದು ಇಂತಹ ಅನುಭವಗಳಾದವು ಎನ್ನುವ ಅವರು ಇದಕ್ಕಾಗಿ ಇಡೀ ದಿನ ಕೆಲಸ ಮಾಡದೆ ಇರಬೇಕಾದ ಸನ್ನಿವೇಶಗಳು ಕೂಡ ಎದುರಾದವು ಎನ್ನುತ್ತಾರೆ. 
ಮೊದಲಿಗೆ ಅಲ್ಲಿಗೆ ತೆರಳುವುದೇ ಸಮಸ್ಯೆಯಾಗಿತ್ತು. ಇದು ನಮ್ಮ ಮೇಲೆ ಯಾರೋ ಶಾಪ ಹಾಕಿದಂತೆ ಭಾಸವಾಗುತ್ತಿತ್ತು. ನಿರ್ದೇಶಕನ ಜೀವನದಲ್ಲಿ ಇದೆ ಮೊತ್ತ ಮೊದಲ ಬಾರಿಗೆ ವೀಸಾ ತಿರಸ್ಕಾರವಾಗಿತ್ತಂತೆ ಮತ್ತು ಅದಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಿ, ಚಿತ್ರೀಕರಣಕ್ಕೆ ಇನ್ನು ಕೇವಲ ಐದೇ ದಿನ ಇರುವಾಗ ಅಲ್ಲಿಗೆ ತೆರಳಿದರಂತೆ. "ತಾರಾಗಣದ ಆಯ್ಕೆಗೆ ಮತ್ತು ಚಿತ್ರೀಕರಣಕ್ಕೆ ತಾಣಗಳನ್ನು ಅಂತಿಮಗೊಳಿಸಲು ಸಮಯ ಅತ್ಯಲ್ಪ ಇತ್ತು. ಸಿನೆಮಾದಲ್ಲಿ ಬರುವ ಮಾನಸಿಕ ಅಸ್ವಸ್ಥರ ಚಿಕಿತ್ಸಾಲಯಕ್ಕಾಗಿ ಹಾರ್ಸ್ಲಿ ಟವರ್ಸ್ ಆಯ್ಕೆ ಮಾಡಿಕೊಂಡಿದ್ದೆ. ನಂತರ ಆ ಜಾಗದ ಬಗ್ಗೆ ಹಲವು ಕಥೆಗಳನ್ನು ಕೇಳಿದೆವು. 
"ಅದು ಕೂಡ ಈ ಹಿಂದೆ ಹುಚ್ಚಾಸ್ಪತ್ರೆಯಾಗಿತ್ತು ಎಂದು ನಮಗೆ ನಂತರ ತಿಳಿದಿದ್ದು ಭಯಾನಕವಾಗಿತ್ತು. ಅದನ್ನು ಸರಿಯಾಗಿ ನಿರ್ವಹಿಸಿರಲಿಲ್ಲ ಆದುದರಿಂದ ಅದನ್ನು ನಂತರ ರೆಸಾರ್ಟ್ ಆಗಿ ಬದಲಿಸಲಾಗಿತ್ತು. ಇದು ಸಿನೆಮಾದಲ್ಲಿ ನನ್ನ ಕಥೆ ಕೂಡ" ಎನ್ನುತ್ತಾರೆ ಚೈತನ್ಯ. 
ಯುರೋಪಿನಲ್ಲಿ ಅತಿಮಾನುಷ ಶಕ್ತಿಗಳಿರುವ ೧೦ ತಾಣಗಳಲ್ಲಿ ೪೫೦ ವರ್ಷ ಹಳೆಯ ಈ ಸ್ಥಳವನ್ನು ಕೂಡ ಪಟ್ಟಿ ಮಾಡಲಾಗಿದೆ ಎನ್ನುವ ಚೈತನ್ಯ "ಇಂಗ್ಲಿಷ್ ಕವಿಯೊಬ್ಬರ ಪುತ್ರಿ ಕೂಡ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವಳ ಆತ್ಮ ಅಲ್ಲಿ ಸುತ್ತುತ್ತಿರುವ ಕಥೆಗಳಿವೆ" ಎನ್ನುತ್ತಾರೆ. 
ಇಲ್ಲಿಯವರೆಗೂ ಕೇವಲ ನಾಲ್ಕು ಸಿನೆಮಾಗಳಷ್ಟೇ ಅಲ್ಲಿ ಚಿತ್ರೀಕರಣಗೊಂಡಿದ್ದು, ಪ್ರತಿ ತಂಡಕ್ಕೂ ಹಲವು ವಿಚಿತ್ರ ಅನುಭವಗಳಾಗಿವೆ ಎಂದು ತಿಳಿಸುವ ನಿರ್ದೇಶಕ, ಹಾರ್ಡ್ ಡಿಸ್ಕ್ ನಿಂದ ನಿಗೂಢವಾಗಿ ಒಂದು ದೃಶ್ಯವೇ ಕಾಣೆಯಾಗಿ ಮತ್ತೆ ಚಿತ್ರೀಕರಣ ನಡೆಸಬೇಕಾಯಿತು ಎಂದು ವಿವರಿಸುತ್ತಾರೆ!
ಇನ್ನು ಹಲವು ಇಂತಹ ಘಟನೆಗಳನ್ನು ವಿವರಿಸುವ ಚೈತನ್ಯ ಈಗ ಸಿನೆಮಾ ಬಿಡುಗಡೆಗೆ ಸಜ್ಜಾಗಿದ್ದಾರೆ. ತಮಿಳು ಸಿನೆಮಾ 'ಮಾಯಾ'ದ ರಿಮೇಕ್ ಇದಾಗಿದ್ದು ಚಿರಂಜೀವಿ ಸರ್ಜಾ,  ಶರ್ಮಿಳಾ ಮಾಂಡ್ರೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಅಚ್ಯುತ್ ಕುಮಾರ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT