ಆಕೆ ಸಿನೆಮಾದ ಪೋಸ್ಟರ್ 
ಸಿನಿಮಾ ಸುದ್ದಿ

'ಆಕೆ' ಟ್ರೇಲರ್ ನೋಡಿ ಮೆಚ್ಚಿ ಹೊಗಳಿದ ಸ್ಯಾಂಡಲ್ವುಡ್!

ನಿರ್ದೇಶಕ ಕೆ ಎಂ ಚೈತನ್ಯ ಅವರ ಮುಂದಿನ ಸಿನೆಮಾ 'ಆಕೆ' ಟ್ರೇಲರ್ ಕನ್ನಡ ಚಿತ್ರರಂಗದ ಜನಪ್ರಿಯ ನಟರ ಗಮನ ಸೆಳೆದಿದೆ. ಅಂಬರೀಷ್, ಅರ್ಜುನ್ ಸರ್ಜಾ, ಶಿವರಾಜ್ ಕುಮಾರ್, ಸುದೀಪ್, ಶ್ರೀಮುರಳಿ

ಬೆಂಗಳೂರು: ನಿರ್ದೇಶಕ ಕೆ ಎಂ ಚೈತನ್ಯ ಅವರ ಮುಂದಿನ ಸಿನೆಮಾ 'ಆಕೆ' ಟ್ರೇಲರ್ ಕನ್ನಡ ಚಿತ್ರರಂಗದ ಜನಪ್ರಿಯ ನಟರ ಗಮನ ಸೆಳೆದಿದೆ. ಅಂಬರೀಷ್, ಅರ್ಜುನ್ ಸರ್ಜಾ, ಶಿವರಾಜ್ ಕುಮಾರ್, ಸುದೀಪ್, ಶ್ರೀಮುರಳಿ ಇತ್ಯಾದಿ ನಟರು ಟ್ರೇಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ತಂಡಕ್ಕೆ ಶುಭ ಹಾರೈಸಿವೆ. 
ಸಿನೆಮಾದ ಟ್ರೇಲರ್ ನೋಡಿದ ಹಿರಿಯ ನಟ ಅಂಬರೀಷ್ ಮೇಕಿಂಗ್ ಸಂಪನ್ನವಾಗಿದೆ ಎಂದಿದ್ದು ತಂಡಕ್ಕೆ ಶುಭ ಹಾರೈಸಿದ್ದಾರೆ. ೧೫೦ ಸಿನೆಮಾಗಳಲ್ಲಿ ನಟಿಸಿರುವ ಅರ್ಜುನ್ ಸರ್ಜಾ "ಈ ಟ್ರೇಲರ್ ನೋಡುಗರಿಗೆ ಹಬ್ಬ" ಎಂದಿದ್ದರೆ, ನಟ ಶಿವರಾಜ್ ಕುಮಾರ್ "ಟ್ರೇಲರ್ ಹಿಡಿದಿಡುತ್ತದೆ ಮತ್ತು ಸಿನೆಮಾ ಒಳ್ಳೆಯ ಪ್ರದರ್ಶನ ನೀಡುವ ಭರವಸೆಯಿದೆ" ಎಂದಿದ್ದಾರೆ. 
ಈ ಟ್ರೇಲರ್ ಅನ್ನು ಮೊದಲು ನೋಡಿದ ಕೆಲವರಲ್ಲಿ ಒಬ್ಬರಾದ ನಟ ದರ್ಶನ್ "ಈ ಟ್ರೇಲರ್ ಹಾಲಿವುಡ್ ಮಾದರಿಯಲ್ಲಿದೆ ಮತ್ತು ವಿಶಿಷ್ಟವಾಗಿದೆ. ಇದೇ ಶ್ರಮ ಸಿನೆಮಾದಲ್ಲಿಯು ಇರುವುದರ ಬಗ್ಗೆ ನನಗೆ ನಂಬಿಕೆ ಇದೆ" ಎಂದು ಹೇಳಿದ್ದಾರೆ. 
ಪುನೀತ್ ಚಿತ್ರದ ತಂತ್ರಜ್ಞರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿರ್ದೇಶಕ ಮತ್ತು ಸಿನೆಮ್ಯಾಟೋಗ್ರಾಫರ್ ರನ್ನು ವಿಶೇಷವಾಗಿ ಅಭಿನಂದಿಸಿದ್ದಾರೆ. 
ಟ್ರೇಲರ್ ಬಗ್ಗೆ ಜನಪ್ರಿಯ ನಟ ಸುದೀಪ್ ಕೂಡ ಟ್ವೀಟ್ ಮಾಡಿದ್ದು "ಟ್ರೇಲರ್ ಭರವಸೆ ಮೂಡಿಸುತ್ತದೆ ಮತ್ತು ಚೆನ್ನಾಗಿದೆ.. ನನ್ನ ನೆಚ್ಚಿನ ನಟ ಅಚ್ಯುತ್ ರಾವ್ ಅವರನ್ನು ನೋಡಿ ಸಂತಸವಾಯಿತು.. ನಿಮಗೆ ಮತ್ತು ತಂಡಕ್ಕೆ ಶುಭ ಹಾರೈಕೆಗಳು @ಚಿರುಸರ್ಜಾ" ಎಂದು ಬರೆದಿದ್ದಾರೆ. 
ಕಾಂಗ್ರೆಸ್ ನಾಯಕಿ, ನಟಿ ರಮ್ಯಾ ಕೂಡ ಟ್ವೀಟ್ ಮಾಡಿದ್ದು "ಚಿರು, ಶರ್ಮಿಳಾ ಮತ್ತು ಚೈತನ್ಯ ಅವರಿಗೆ ಶುಭಾಶಯಗಳು! ಟ್ರೇಲರ್ ಕಾಡುತ್ತದೆ #ಆಕೆ" ಎಂದು ಬರೆದಿದ್ದಾರೆ. 
ನಟ ಶ್ರೀಮುರಳಿ ಕೂಡ ಪ್ರಶಂಸೆ ವ್ಯಕ್ತಪಡಿಸುದ್ದು, ಚಿತ್ರರಂಗದ ವಿವಿಧೆಡೆಯಿಂದ ಹರಿದುಬಂದಿರುವ ಪ್ರಶಂಸೆಯ ಮಹಾಪೂರಕ್ಕೆ ಸಂತಸಗೊಂಡಿರುವ ನಿರ್ದೇಶಕ ಚೈತನ್ಯ "ಚಿತ್ರರಂಗದಿಂದ ಬಂದಿರುವ ಇಂತಹ ಪ್ರಶಂಸೆ ಧೈರ್ಯ ನೀಡುತ್ತದೆ... ಚಿರು ಮತ್ತು ಶರ್ಮಿಳಾ ವರ್ಷಗಳಿಂದ ಸಂಪಾದಿಸಿರುವ ಗೌರವವನ್ನು ಇದು ಸೂಚಿಸುತ್ತದೆ" ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT