ಮೇಘನಾ ರಾಜ್-ಮರ್ಲಿನ್ ಮನ್ರೋ 
ಸಿನಿಮಾ ಸುದ್ದಿ

ಮೇಘನಾ ರಾಜ್ ಗೂ ಮರ್ಲಿನ್ ಮನ್ರೋಗು ಇರುವ ಸಾಮ್ಯತೆಯೇನು?

'ದಯವಿಟ್ಟು ಗಮನಿಸಿ' ಸಿನೆಮಾದ ಅಸಾದುಲ್ಲಾ ಹಾಡು ವೈರಲ್ ಆಗಿದ್ದು, ನಟಿ ಮೇಘನಾ ರಾಜ್ ಅವರ ಸಂತೋಷಕ್ಕೆ ಪಾರವೇ ಇಲ್ಲ. ಈಗ ಅವರ ಹಲವು ಅಭಿಮಾನಿಗಳು ಅವರನ್ನು ಹಾಲಿವುಡ್

ಬೆಂಗಳೂರು: 'ದಯವಿಟ್ಟು ಗಮನಿಸಿ' ಸಿನೆಮಾದ ಅಸಾದುಲ್ಲಾ ಹಾಡು ವೈರಲ್ ಆಗಿದ್ದು, ನಟಿ ಮೇಘನಾ ರಾಜ್ ಅವರ ಸಂತೋಷಕ್ಕೆ ಪಾರವೇ ಇಲ್ಲ. ಈಗ ಅವರ ಹಲವು ಅಭಿಮಾನಿಗಳು ಅವರನ್ನು ಹಾಲಿವುಡ್ ನಟಿ ಮರ್ಲಿನ್ ಮನ್ರೋಗೆ ಹೋಲಿಸುತ್ತಿರುವುದು ಕೂಡ ವಿಶೇಷ.
ಮೇಘನಾ ತಮ್ಮ ಮೊದಲ ಅತಿಥಿ ಪಾತ್ರದಲ್ಲಿ ಜಾಜ್ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮರ್ಲಿನ್ ಜೊತೆಗಿನ ಹೋಲಿಕೆಯ ಬಗ್ಗೆ ನಾಚಿಕೊಳ್ಳುವ ನಟಿ "ಇದು ಮಚ್ಚೆಯ ಸಂಬಂಧ. ಮರ್ಲಿನ್ ಮತ್ತು ನನಗೆ ತುಟಿಯ ಬಳಿ ಮಚ್ಚೆ ಇದೆ. ಈ ಅಂಶ ಅಭಿಮಾನಿಗಳನ್ನು ಸೆಳೆದಿದೆ" ಎಂದು ನಗುತ್ತಾರೆ.
ನಿರ್ದೇಶಕ ರೋಹಿತ್ ಪದಕಿಗಾಗಿ ಈ ಹಾಡಿನಲ್ಲಿ ಅಭಿನಯಿಸಿದೆ ಎನ್ನುವ ಅವರು "ಈ ಹಾಡನ್ನು ರೋಹಿತ್ ಗಾಗಿಯೇ ಮಾಡಿದ್ದು. ಅವರ ಕೆಲಸಗಳ ಬಗ್ಗೆ ನನಗೆ ಪ್ರೀತಿ. ಮತ್ತು ಈ ಹಾಡನ್ನು ನನಗಾಯಿಯೇ ಸೃಷ್ಟಿಸಿದ್ದು ಎಂದು ಅವರು ಹೇಳಿದಾಗ ನಾನು ಥ್ರಿಲ್ ಆದೆ. ಜಾಜ್ ಗಾಯಕಿಯಾಗುವ ನನ್ನ ಕನಸು ಕೂಡ ಈ ಮೂಲಕ ನನಸಾಗಿದೆ" ಎನ್ನುತ್ತಾರೆ ಮೇಘನಾ. 
ಈ ಹಾಡನ್ನು ನೋಡಿ ಹಿರಿಯ ನಟಿ ಸುಮಲತಾ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದು "ಬಹಳ ಚೆನ್ನಾಗಿ ಮೂಡಿ ಬಂದಿದೆ. ಮುದ್ದಾಗಿದೆ ಹಾಡು. ದಯವಿಟ್ಟು ಈ ಹಾಡನ್ನು ಗಮನಿಸಿ ಕೇಳಿಸ್ಕೊಳ್ಳಿ..." ಎಂದು ಬರೆದಿದ್ದಾರೆ. 
ಮೇಘನಾ ಸದ್ಯಕ್ಕೆ ಗುರುದತ್ ನಿರ್ದೇಶನದ ಉಪೇಂದ್ರ ಅವರ 'ನಾಗಾರ್ಜುನ' ಸಿನೆಮಾದಲ್ಲಿ ನಟಿಸಲು ಸಿದ್ಧರಾಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?