ಸಿನಿಮಾ ಸುದ್ದಿ

ಭಾರತದಾದ್ಯಂತ ಹೆಬ್ಬುಲಿ ಗಳಿಕೆ ಬಗ್ಗೆ ನಿರ್ಮಾಪಕರಿಗೆ, ವಿತರಕರಿಗೆ ಸಂತಸ

Guruprasad Narayana
ಬೆಂಗಳೂರು: ನಟ ಸುದೀಪ್ ಅವರ ಇತ್ತೀಚಿನ ಬಿಡುಗಡೆ 'ಹೆಬ್ಬುಲಿ' ಗಾಂಧಿನಗರದ ಪಂಡಿತರ ಪ್ರಕಾರ ಹಲವು ದಾಖಲೆಗಳನ್ನು ಮುರಿದಿದೆಯಂತೆ. ಬಿಡುಗಡೆಯಾದ ಮೊದಲ ವಾರವೇ ಬಾಕ್ಸ್ ಆಫಿಸ್ ನಲ್ಲಿ ಗಳಿಕೆ ೩೦ ಕೋಟಿ ದಾಟಿದೆಯಂತೆ.
ಇದರಿಂದ ಸಂತಸಗೊಂಡಿರುವ ವಿತರಕ ಜಾಕ್ ಮಂಜು ತಿಳಿಸುವಂತೆ "ಭಾರತದಾದ್ಯಂತ ವಿವಿಧ ಭಾಗಗಳಲ್ಲಿ ೨೩ ತೆರೆಗಳಲ್ಲಿ ಬಿಡುಗಡೆ ಕಂಡಿರುವ ಮೊದಲ ಕನ್ನಡ ಸಿನೆಮಾ 'ಹೆಬ್ಬುಲಿ'. ಇದು ಕರ್ನಾಟಕದ ಹೊರಗೆ, ಮೊದಲ ವಾರದಲ್ಲಿಯೇ ೩೦ ಲಕ್ಷ ಗಳಿಕೆ ಕಂಡಿದೆ" ಎನ್ನುತ್ತಾರೆ. 
ಇದು ಹಣಕಾಸಿನ ಪ್ರಶ್ನೆಯಲ್ಲ ಬದಲಾಗಿ ಕನ್ನಡ ಸಿನೆಮಾಗಳು ರಾಜ್ಯದ ಹೊರಗೆ ಗಮನ ಸೆಳೆಯುತ್ತಿವೆ ಎಂಬುದನ್ನು ತಿಳಿಯಲು ಸಂತವಾಗುತ್ತದೆ. "ಕನ್ನಡ ಜನರು ಹೆಚ್ಚಿರುವ ಭಾಗದಲ್ಲಿ ಈ ಸಿನೆಮಾ ಬಾಯಿಂದ ಬಾಯಿಗೆ ಹರಡಿ ಅತಿ ಹೆಚ್ಚು ಜನರನ್ನು ಚಿತ್ರಮಂದಿರದತ್ತ ಸೆಳೆದಿದೆ.
"ಗುರಗಾಂವ್, ಪುಣೆ, ತಮಿಳು ನಾಡು, ಮುಂಬೈ ಮತ್ತಿತರ ಪ್ರದೇಶಗಳಲ್ಲಿ 'ಹೆಬ್ಬುಲಿ'ಗೆ ಒಳ್ಳೆಯ ಸ್ವಾಗತ ಸಿಕ್ಕಿದೆ. ಹೊಸೂರು ಮತ್ತು ಗೋವಾದಿಂದಲೂ ನನಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ" ಎಂದು ತಿಳಿಸುತ್ತಾರೆ ವಿತರಕ. 
"ಇತರ ಭಾಷೆಯ ಸಿನೆಮಾಗಳು ಕನ್ನಡ ನಾಡಿನಲ್ಲಿ ಯಶಸ್ಸು ಪಡೆಯಬಹುದಾದರೆ ನಮ್ಮ ಭಾಷೆಯ ಸಿನೆಮಾಗಳನ್ನು ತಡೆಯುತ್ತಿರುವುದೇನು ಎಂಬ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿತ್ತು" ಎನ್ನುವ ಮಂಜು ನಿರ್ಮಾಪಕರು ಮತ್ತು ವಿತರಕರು 'ಹೆಬ್ಬುಲಿ'ಯ ಉದಾಹರಣೆ ತೆಗೆದುಕೊಂಡು ಒಳ್ಳೆಯ ಸಿನೆಮಾಗಳನ್ನು ನಿರ್ಮಿಸಿ ಕರ್ನಾಟಕದ ಹೊರಗೆ ತೆಗೆದುಕೊಂಡು ಹೋಗಬೇಕು ಎಂಬುದು ನನ್ನಾಸೆ ಎನ್ನುತ್ತಾರೆ ಮಂಜು. 
SCROLL FOR NEXT