'ಸತ್ಯದೇವ್ ಐಪಿಎಸ್' ಸಿನೆಮಾದ ಪೋಸ್ಟರ್
ಬೆಂಗಳೂರು: ಕನ್ನಡ ಚಿತ್ರರಂಗದ ಕೆಲವರ ವಿರೋಧದ ನಡುವೆಯೂ ತಮಿಳು ಚಿತ್ರ 'ಎನ್ನೈ ಅರಿಂಧಾಲ್' ನ ಕನ್ನಡ ಡಬ್ ಅವತರಿಣಿಕೆ 'ಸತ್ಯದೇವ್ ಐಪಿಸ್' ಕರ್ನಾಟಕದಾದ್ಯಂತ ೬೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಆಗಿರುವ ಮಹತ್ವದ ಬೆಳವಣಿಗೆಯಲ್ಲಿ ಒಂದು. ಆದರೆ ಇದು ಬೆಂಗಳೂರಿನಲ್ಲಿ ಬಿಡುಗಡೆ ಕಾಣುವುದಕ್ಕೆ ಅಡ್ಡಿ-ಆತಂಕಗಳು ಎದುರಾಗಿವೆ.
ಈ ಡಬ್ ಸಿನೆಮಾವನ್ನು ಬಿಡುಗಡೆ ಮಾಡುತ್ತಿರುವ ಕೃಷ್ಣೆ ಗೌಡ ಅವರು ತಿಳಿಸುವಂತೆ ಮಂತ್ರಿ ಮಾಲ್ ಬಳಿಯಿರುವ ಒಂದು ಸ್ವತಂತ್ರ ಚಿತ್ರಮಂದಿರ ಈ ಸಿನೆಮಾ ಪ್ರದರ್ಶನ ಮಾಡಲು ಮೊದಲು ಒಪ್ಪಿಗೆ ನೀಡಿತ್ತಾದರೂ ನಂತರ ಹಿಂದಕ್ಕೆ ಸರಿದಿದೆಯಂತೆ. "ಮತ್ತೊಂದು ಚಿತ್ರಮಂದಿರದಲ್ಲಿ ಬಿಡುಗಡೆಗಾಗಿ ಚರ್ಚೆ ಇನ್ನು ಜಾರಿಯಲ್ಲಿದೆ ಮತ್ತು ಬಿಡುಗಡೆಯಾಗುವ ಭರವಸೆಯಿದೆ" ಎನ್ನುತ್ತಾರೆ ಕೃಷ್ಣೆ ಗೌಡ.
ಈ ಹಿಂದೆ ಹಿಂದಿಯಿಂದ ಡಬ್ ಆಗಿದ್ದ 'ನಾನು ನನ್ನ ಪ್ರೀತಿ' ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತಾದರೂ ಇಷ್ಟು ದೊಡ್ಡ ಮಟ್ಟದ ಸುದ್ದಿ ಮಾಡಲು ಸಾಧ್ಯವಾಗಿರಲಿಲ್ಲ.
ಮಾರ್ಚ್ ೩ ರಂದು ಈ ಸಿನೆಮಾ ಬಿಡುಗಡೆಯಾಗುತ್ತಿರುವುದರ ವಿಶೇಷತೆ ತಿಳಿಸುವ ಕೃಷ್ಣೆ ಗೌಡ ಇದೆ ದಿನ ೮೦ ವರ್ಷಗಳ ಕೆಳಗೆ ಕನ್ನಡದ ಮೊದಲ ಟಾಕಿ ಸಿನೆಮಾ 'ಸತಿ ಸುಲೋಚನ' ಬಿಡುಗಡೆಯಾಗಿತ್ತು ಎನ್ನುತ್ತಾರೆ.
ಈಮಧ್ಯೆ ಅಜಿತ್ ಅವರ ಮತ್ತೊಂದು ಡಬ್ ಸಿನೆಯಾ 'ಆರಂಭಮ್' ಸೆನ್ಸಾರ್ ಮಂಡಳಿಯ ಮುಂದಿದೆ. ಜೊತೆಗೆ 'ಬಾಹಿಬಲಿ-೨ ಮುಕ್ತಾಯ'ದ ಡಬ್ ಅವತಾರಿಣಿಕೆ ಬಿಡುಗಡೆ ಮಾಡಲು ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರನ್ನು ಸಂಪರ್ಕಿಸಿ, ಮಾತುಕತೆ ನಡೆಸುವುದಕ್ಕೆ ಪ್ರಯತ್ನಿಸುತ್ತಿರುವುದಾಗಿ ತಿಳಿಸುತ್ತಾರೆ ಕೃಷ್ಣೇ ಗೌಡ.