ಸಿನಿಮಾ ಸುದ್ದಿ

ಅರಮನೆ ಮೈದಾನದಲ್ಲಿ 'ರೋಗ್' ಅದ್ದೂರಿ ಆಡಿಯೋ ಬಿಡುಗಡೆಗೆ ಸಿದ್ಧ

Guruprasad Narayana
ಬೆಂಗಳೂರು: ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ 'ರೋಗ್' ಚಲನಚಿತ್ರ ನಿರ್ಮಾಪಕರು ಸಿನೆಮಾದ ಟ್ರೇಲರ್ ಬಿಡುಗಡೆ ಮಾಡಿದ್ದರು. ಈಗ ಆಡಿಯೋ ಬಿಡುಗಡೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ವಾರ ಜರುಗಲಿದ್ದು, ಅದ್ದೂರಿಯಾಗಿ ಜರುಗಲಿದೆಯಂತೆ. ೧೫ ವರ್ಷಗಳ ನಂತರ ಕನ್ನಡ ಸಿನೆಮಾ ನಿರ್ದೇಶನಕ್ಕೆ ಹಿಂದಿರುಗಿರುವ ಪೂರಿ ಜಗನ್ನಾಥ್ ಅವರ ಸಿನೆಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣಗೊಂಡಿದೆ. ಈ ಸಿನೆಮಾದ ಮೂಲಕ ಇಶಾನ್ ನಾಯಕ ನಟನಾಗಿ ಹೊರಹೊಮ್ಮಿದ್ದಾರೆ. 
ಇದು ಅದ್ದೂರಿ ಸಾರ್ವಜನಿಕ ಕಾರ್ಯಕ್ರಮ ಎಂದು ತಿಳಿಸುವ ತನ್ವಿ ಫಿಲಂಸ್ ನಿರ್ಮಾಣ ಸಂಸ್ಥೆ ಶಿವರಾಜ್ ಕುಮಾರ್, ಪುನೀತ್ ರಾಜಕುಮಾರ್ ಮತ್ತು ಸುದೀಪ್ ತಾರಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದೆ. ಪೂರಿ ಜಗನ್ನಾಥ್, ಮನ್ನಾರ ಚೋಪ್ರಾ ಮತ್ತು 'ರೋಗ್' ಸಿನೆಮಾದ ಇಡೀ ಚಿತ್ರತಂಡ ಆಡಿಯೋ ಬಿಡುಗಡೆಯಲ್ಲಿ ಭಾಗವಹಿಸಲಿದೆ. 
ನಿರ್ಮಾಪಕ ಮನೋಹರ್ ಅವರ ಸೋದರ ಅಳಿಯ ಇಶಾನ್ ಈ ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದು, ಕಾರ್ಯಕ್ರಮ ನೆನಪಿನಲ್ಲುಳಿಯುವಂತೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಚಿತ್ರೀಕರಣದ ನಂತರದ ಕಾರ್ಯಗಳು ಭರದಿಂದ ಸಾಗಿದ್ದು ಈ ತಿಂಗಳ ಕೊನೆಗೆ ಸಿನೆಮಾ ಬಿಡುಗಡೆಯಾಗಲಿದೆ. 
SCROLL FOR NEXT