ಬೆಂಗಳೂರು: ಶ್ರುತಿ ಹರಿಹರನ್ ಈಗ ಕನ್ನಡ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿರುವ ನಟಿ. ಸದ್ಯಕ್ಕೆ ನಟಿ ಪ್ರಕಾಶ್ ಜಯರಾಮ್ ನಿರ್ದೇಶದ 'ತಾರಕ್' ಸಿನೆಮಾದಲ್ಲಿ ನಟ ದರ್ಶನ್ ಎದುರು ನಟಿಸುತ್ತಿದ್ದು ಈಗ ಅವರು ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಮಾಲಿವುಡ್ ಗೆ ಹಿಂದಿರುಗಲು ಉತ್ಸುಕರಾಗಿದ್ದಾರೆ.
ಈಗಿನ ಸುದ್ದಿಯ ಪ್ರಕಾರ ಅವರು 'ಸೋಲೋ' ಚಿತ್ರತಂಡ ಸೇರಲಿದ್ದಾರೆ. ಮಲಯಾಳಂ ಮತ್ತು ತಮಿಳಿನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನೆಮಾವನ್ನು ಬಿಜೋಯ್ ನಂಬಿಯಾರ್ ನಿರ್ದೇಶಿಸುತ್ತಿದ್ದು, ದಲ್ಕ್ವೇರ್ ಸಲ್ಮಾನ್ ನಾಯಕ ನಟ. ಕಳೆದ ನವೆಂಬರ್ ನಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಿದ್ದು, ಶ್ರುತಿ ಈಗ ಚಿತ್ರತಂಡ ಸೇರುತ್ತಿದ್ದಾರೆ.
ಸ್ಕ್ರೀನ್ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ನಟಿ ಮಾರ್ಚ್ ಮಧ್ಯದಲ್ಲಿ ಸಿನೆಮಾ ಸೆಟ್ ಸೇರಲಿದ್ದಾರೆ. ಮಲಯಾಳಂ ಸಿನೆಮಾ ಮೂಲಕ ವೃತ್ತಿ ಜೀವನ ಪ್ರಾರಂಭಿಸಿ ನಂತರ ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ನೆಲೆಯೂರಿದವರು ಶ್ರುತಿ. ಬಿಜೋಯ್-ದಲ್ಕ್ವೇರ್ ಸಿನೆಮಾದ ಬಗ್ಗೆ ನಟಿಯನ್ನು ಪ್ರಶ್ನಿಸದರೆ "ಐದು ವರ್ಷಗಳ ನಂತರ ಮಲಯಾಳಂ ಚಿತ್ರರಂಗಕ್ಕೆ ಹಿಂದಿರುಗುತ್ತಿದ್ದೇನೆ. ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಿರಲಿಲ್ಲ. ಈ ಸಿನೆಮಾ ದೊಡ್ಡದಾಗಿ ಮತ್ತು ಮಹತ್ತದ್ದಾಗಿ ಕಾಣುತ್ತಿದೆ" ಎನ್ನುತ್ತಾರೆ.
ಬಿಜೋಯ್ ನಂಬಿಯಾರ್ ನಾನು ಮೆಚ್ಚುವ ನಿರ್ದೇಶಕ ಎಂದು ತಿಳಿಸುವ ಶ್ರುತಿ "ನಾನು 'ವಾಜಿರ್' ಸಿನೆಮಾವನ್ನು ಮೊದಲ ದಿನ ಮೊದಲ ಪ್ರದರ್ಶನದಲ್ಲಿಯೇ ವೀಕ್ಷಿಸಿದ್ದೆ. ಅವರು ಕೆಲಸ ಮಾಡುವ ರೀತಿ ಆಸಕ್ತಿದಾಯಕ. ನಾನು ಅಭಿಮಾನಿಯಾಗಿ ಹೋಗಬೇಕೋ ಅಥವಾ ನಟಿಯಾಗಿ ಹೋಗಬೇಕೋ ತಳಿಯುತ್ತಿಲ್ಲ. ಆದರೆ ಅವರ ಅಭಿಮಾನಿಯಂತೂ ನಿಜ" ಎನ್ನುವ ಶ್ರುತಿ ದಲ್ಕ್ವೇರ್ ಜೊತೆಗೂ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ. "ಅವರ ನಟನೆಯಿಂದ ಈಗಾಗಲೇ ಹೆಸರು ಮಾಡಿರುವವರು ಅವರು" ಎನ್ನುತ್ತಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos