'ಬೆಂಗಳೂರು ಅಂಡರ್ ವರ್ಲ್ಡ್' ಸಿನೆಮಾದಲ್ಲಿ ಆದಿತ್ಯ
ಬೆಂಗಳೂರು: ಭೂಗತ ಲೋಕಕ್ಕೆ ಸಂಬಂಧಿಸಿದ ಸಿನೆಮಾಗಳಲ್ಲಿ ನಟ ಆದಿತ್ಯ ಗೆದ್ದದ್ದೇ ಹೆಚ್ಚು. ೨೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿರುವ ಈ ನಟನನ್ನು ಹೆಚ್ಚು ನೆನಪಿಸಿಕೊಳ್ಳುವುದು 'ಡೆಡ್ಲಿ ಸೋಮ', 'ಡೆಡ್ಲಿ ೨' ಮತ್ತು 'ಎದೆಗಾರಿಕೆ' ಸಿನೆಮಾಗಳಿಗಾಗಿ. ಈಗ ಅದೇ ವಿಷಯದ 'ಬೆಂಗಳೂರು ಅಂಡರ್ ವರ್ಲ್ಡ್' ಈ ವಾರ ಬಿಡುಗಡೆಗೆ ಸಿದ್ಧವಾಗಿದೆ.
ಭೂಗತಲೋಕದ ಬಗೆಗಿನ ಜೀವನವನ್ನು ತೆರೆಯ ಮೇಲೆ ಕಾಣುವ ಕುತೂಹಲ ಎಂದಿಗೂ ಜೀವಂತವಾಗಿರುವುದೇ. ಕಲಾವಿದನಾಗಲು ಕಷ್ಟಪಟ್ಟಿದ್ದು, ಸಂಕೀರ್ಣ ಪಾತ್ರಗಳನ್ನೂ ಸರಳವಾಗಿ ನಟಿಸಲು ಪ್ರಯತ್ನಿಸುತ್ತೇನೆ ಎನ್ನುವ ನಟ ಆದಿತ್ಯ "ನಾನು 'ಬೆಂಗಳೂರು ಅಂಡರ್ ವರ್ಲ್ಡ್'ನಲ್ಲಿ ನಟಿಸಲು ಸ್ವಲ್ಪ ಸಮಯ ತೆಗೆದುಕೊಂಡೆ, ಏಕೆಂದರೆ ಒಪ್ಪಿಗೆಯಾದ ಸಿನೆಮಾದಲ್ಲಿ ನಟಿಸಲು ನನಗೆ ಇಷ್ಟವಿಲ್ಲ. ಆದುದರಿಂದ ನನ್ನ ಮೊದಲ ಆದ್ಯತೆ ಸ್ಕ್ರಿಪ್ಟ್ ಮತ್ತು ನಿರ್ದೇಶಕ" ಎನ್ನುವ ನಟ ನಿರ್ದೇಶಕ ಪಿ ಎನ್ ಸತ್ಯ ಅವರೊಂದಿಗಿನ ಸಂಬಂಧ ನಿರ್ಧಾರ ಮಾಡುವುದಕ್ಕೆ ಸಹಕರಿಸಿತು ಎನ್ನುತ್ತಾರೆ. "ಈ ಹಿಂದೆ ಅವರ ಜೊತೆಗೆ ಕೆಲಸ ಮಾಡುವ ಎರಡು ಅವಕಾಶಗಳು ಒದಗಿಬಂದಿದ್ದವು. ಆದರೆ ಅವುಗಳು ತಪ್ಪಿಹೋದವು. ಈಗ 'ಬೆಂಗಳೂರು ಅಂಡರ್ ವರ್ಲ್ಡ್'ಗೆ ಒಂದಾಗಿರುವುದಕ್ಕೆ ಸಂತಸವಾಗಿದೆ. ಅವರು ನನ್ನ ಪಾತ್ರವನ್ನು ಚೆನ್ನಾಗಿ ಚಿತ್ರಿಸಿದ್ದಾರೆ ಮತ್ತು ನಿರೂಪಣೆ ಶೈಲಿಯಲ್ಲಿ ಅದು ವಿಶಿಷ್ಟವಾಗಿ ಮೂಡಿಬಂದಿದೆ" ಎನ್ನುತ್ತಾರೆ.
ಇದು ಮತ್ತೊಂದು ಭೂಗತಲೋಕದ ಸಿನೆಮಾ ಅಲ್ಲ ಎನ್ನುವ ನಟ "ಈ ಸಿನೆಮಾ ಮಾಮೂಲಿ ಮಾಫಿಯಾ ಕಥೆಯಿಂದ ಪಕ್ಕಕ್ಕೆ ಹೊರಳುತ್ತದೆ. ಊಹೆಗೆ ನಿಲುಕುವುದಿಲ್ಲ. ಸಾಕಷ್ಟು ಸಸ್ಪೆನ್ಸ್ ಇದೆ ಮತ್ತು ಊಹಿಸಿಕೊಳ್ಳಲಾಗದ ಕ್ಲೈಮಾಕ್ಸ್ ಇದೆ" ಎನ್ನುವ ಅವರು ಈ ಸಿನೆಮಾ ಅವರ ಅಭಿಮಾನಿಗಳ ನಡುವೆ ವಿಶಿಷ್ಟ ವ್ಯಕ್ತಿತ್ವ ತಂದುಕೊಡಲಿದೆ ಎನ್ನುತ್ತಾರೆ. "'ಡೆಡ್ಲಿ ಸೋಮ' ನಂತರ ಜನ ನನ್ನನ್ನು ಡೆಡ್ಲಿ ಎಂದು ಕರೆಯುತ್ತಿದ್ದರು. 'ಎದೆಗಾರಿಕೆ' ನಂತರ ಸೋನಾ ಎಂದು ಗುರುತಿಸುತ್ತಿದ್ದರು. ಈ ಸಿನೆಮಾ ನಂತರ ನಾನು 'ಮಲಿಕ್' ಆಗಲಿದ್ದೇನೆ" ಎನ್ನುತ್ತಾರೆ ಆದಿತ್ಯ.
ಅನೂಪ್ ಸೀಳಿನ್ ಅವರ ಹಿನ್ನಲೆ ಸಂಗೀತದ ವಿಶೇಷವಾಗಿದೆ ಆದಿತ್ಯ, ಇದು ಸಿನೆಮಾದ ಮುಖ್ಯ ಅಂಶಗಳಲ್ಲಿ ಒಂದು ಎನ್ನುತ್ತಾರೆ.