ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ ಬಾಹುಬಲಿ 2 ಚಿತ್ರದ ಅಧಿಕೃತ ಟೀಸರ್ ಬಿಡುಗಡೆಯಾಗಿದೆ.
ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರದ 12 ಸೆಕೆಂಡಿನ ಟೀಸರ್ ಅನ್ನು ಬಲ್ಲಳಾದೇವ ಪಾತ್ರದಾರಿ ರಾಣಾ ದಗ್ಗುಬಾಟಿ ಟ್ವೀಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಟೀಸರ್ ನಲ್ಲಿ ಪ್ರಭಾಸ್ ರಕ್ತಮಯವಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಟ್ರೈಲರ್ ಮಾರ್ಚ್ 16ರಂದು ಬಿಡುಗಡೆಯಾಗಲಿದೆ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ನಾಲ್ಕು ಭಾಷೆಗಳಲ್ಲಿ ಏಪ್ರಿಲ್ 28ಕ್ಕೆ ಏಕಕಾಲಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದೆ.