ಸಿನಿಮಾ ಸುದ್ದಿ

'ನಮ್ಮೆಲ್ಲರೊಳಗೂ ಒಬ್ಬ ಲಿಫ್ಟ್ ಮ್ಯಾನ್ ಇದ್ದಾನೆ': ಸುಂದರ್ ರಾಜ್

Guruprasad Narayana
ಬೆಂಗಳೂರು: ೧೯೯ ಸಿನೆಮಾಗಳಲ್ಲಿ ನಟಿಸಿರುವ ಸುಂದರ್ ರಾಜ್, ನೈಜ, ಸೂಕ್ಷತೆಯಿಂದ ಕೂಡಿದ, ಕಾಡುವ ಪಾತ್ರಗಳಲ್ಲಿ ನಟಿಸಿರುವ ಹಿರಿಯ ಕಲಾವಿದ. ಇಂತಹ ಒಂದು ಲಿಫ್ಟ್ ಮ್ಯಾನ್ ಕಾವೇರಪ್ಪ ಪಾತ್ರಕ್ಕೆ ಕೇಳಿಕೊಂಡಾಗ ಮರುಮಾತಿಲ್ಲದೆ ಒಪ್ಪಿಕೊಂಡಿದ್ದಾರೆ ಸುಂದರ್ ರಾಜ್. 
ವಿಧಾನ ಸೌಧದಲ್ಲಿ ಲಿಫ್ಟ್ ನಡೆಸುವ ಹುದ್ದೆಯಲ್ಲಿದ್ದು, ಅದೇ ಹುದ್ದೆಯಿಂದ ೨೦ ವರ್ಷಗಳ ನಂತರ ನಿವೃತ್ತಿ ಹೊಂದಿದ ಕಥೆ ಹೊಂದಿರುವ 'ಲಿಫ್ಟ್ ಮಾನ್' ಶೀರ್ಷಿಕೆಯ ಚಿತ್ರ ಸುಂದರ್ ರಾಜ್ ಅವರ ೨೦೦ ನೇ ಚಿತ್ರವಾಗಿದೆ. ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಈಗ ಬಿಡುಗಡೆ ಎದುರುನೋಡುತ್ತಿದೆ. 
ಈ ಹಿಂದೆ ತಾವು ನಟನೆಯಿಂದ ಬಹಳ ಸಂತಸಪಟ್ಟಿದ್ದು ೧೯೮೦ ರ 'ಅನ್ವೇಷಣೆ' ಸಿನೆಮಾದಲ್ಲಿ ಎಂದು ತಿಳಿಸುವ ಸುಂದರ್ "ತರುವಾಯ ನಾನು ಇಷ್ಟು ಸಂತಸಪಟ್ಟ ಸಿನೆಮಾ 'ಲಿಫ್ಟ್ ಮ್ಯಾನ್' ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ. ವಯಸ್ಸಾದಂತೆ ಕೆಲವು ರೀತಿಯ ಪಾತ್ರಗಳಲ್ಲಿ ನಟಿಸುವುದಕ್ಕೆ ಮಾತ್ರ ಖುಷಿಯಾಗುತ್ತದೆ ಮತ್ತು ಅಂತಹವುಗಳಲ್ಲಿ ಈ ಸಿನೆಮಾದ ಪಾತ್ರ ಕೂಡ ಒಂದು" ಎನ್ನುತ್ತಾರೆ. 
"ಲಿಫ್ಟ್ ಮ್ಯಾನ್ ಸಿನೆಮಾ ಸಾಮಾನ್ಯ ಮನುಷ್ಯನ ಬಗ್ಗೆ ಸಿನೆಮಾ ಆದರೂ ಇದು ಕಮರ್ಷಿಯ ಸಿನೆಮಾ" ಎನ್ನುತ್ತಾರೆ ಸುಂದರ್ ರಾಜ್. "ಆಟೋ ಚಾಲಕ, ಬಸ್ ಕಂಡಕ್ಟರ್ ಅಥವಾ ಲಿಫ್ಟ್ ಮ್ಯಾನ್ ಪಾತ್ರಗಳನ್ನು ಸಿಕ್ಸ್ ಪ್ಯಾಕ್ ದೇಹ ಹೊತ್ತ ಹೀರೋಗಳು ಮಾಡಲು ಸಾಧ್ಯವಿಲ್ಲ. ಅವರನ್ನು ಸೂಪರ್ ಮ್ಯಾನ್ ಗಳ ರೀತಿ ಕೂಡ ಚಿತ್ರಿಸಲು ಸಾಧ್ಯವಿಲ್ಲ. ಅಂತಹ ಒಂದು ಪಾತ್ರ ಕಾವೇರಪ್ಪ" ಎನ್ನುತ್ತಾರೆ ನಟ. 
ನಿರ್ಮಾಪಕ ರಾಮ್ ನಾಯಕ್ ಈ ಸಿನೆಮಾವನ್ನು ಕಮರ್ಷಿಯಲ್ ಸಿನೆಮಾವಾಗಿ ರೂಪಿಸುವುದರಲ್ಲಿ ಪ್ರಮುಖ ರೂವಾರಿ ಎನ್ನುವ ಸುಂದರ್ "ಪತ್ರಕರ್ತ ಚಂದ್ರ ಬಾರ್ಕುರ್ ಕಥೆ ಬರೆದಿದ್ದಾರೆ ಮತ್ತು ಕಾರಂಜಿ ಶ್ರೀಧರ್ ಇದನ್ನು ನಿರ್ದೇಶಿಸಿದ್ದಾರೆ. ಅವರು ನನ್ನ ದೊಡ್ಡ ಅಭಿಮಾನಗಳಂತೆ ಮತ್ತು ನನ್ನನ್ನು ಹಾಕಿಕೊಂಡು ಸಿನೆಮಾ ಮಾಡಬೇಕೆಂದುಕೊಂಡಿದ್ದರಂತೆ" ಎನ್ನುವ ಅವರು ನಮ್ಮೆಲರಲ್ಲೂ ಒಬ್ಬ ಲಿಫ್ಟ್ ಮ್ಯಾನ್ ಇದ್ದಾನೆ ಎನ್ನುತ್ತಾರೆ. 
ಸುರೇಶ ಹೆಬ್ಳಿಕರ್, ಅರುಣಾ ಬಾಲರಾಜ್, ಸುನಿಲ್ ಪುರಾಣಿಕ್, ಶೀತಲ್ ಶೆಟ್ಟಿ, ನಿಹಾರಿಕಾ ಕೂಡ ಸಿನೆಮಾದ ಭಾಗವಾಗಿದ್ದಾರೆ. ಪ್ರವೀಣ್ ಗೊಡ್ಕಿಂಡಿ ಸಂಗೀತ ನೀಡಿದ್ದು, ನಾಣಿ ಸಿನೆಮ್ಯಾಟೋಗ್ರಾಫರ್. 
SCROLL FOR NEXT