ಬೆಂಗಳೂರು: 'ರಂಗಿತರಂಗ' ಕನ್ನಡ ಚಿತ್ರರಂಗದಲ್ಲಿ ಹಲವಾರು ವಿಶಿಷ್ಟತೆಗಳನ್ನು ಸೃಷ್ಟಿಸಿ, ದಾಖಲೆಗಳನ್ನು ನಿರ್ಮಿಸಿದ ಸಿನೆಮಾ. ಕನ್ನಡ ಚಿತ್ರರಂಗಕ್ಕೆ ಹಾಲಿವುಡ್ ತಂತ್ರಜ್ಞರನ್ನು ಕೈಬೀಸಿ ಕರೆದ ಸಿನೆಮಾ. ಈಗ ಹೆಚ್ಚಿನ ಕನ್ನಡ ನಿರ್ದೇಶಕರು ಹಾಲಿವುಡ್ ತಂತ್ರಜ್ಞರತ್ತ ಮುಖ ಮಾಡಿರುವುದು ವಿಶೇಷ. ನ್ಯೂಯಾರ್ಕ್ ಫಿಲಂ ಅಕಾಡೆಮಿಯಿಂದ ಕಲಿತು ಬಂದ ನಿರ್ದೇಶಕ್ ಆದರ್ಶ್ ಎಚ್ ಈಶ್ವರಪ್ಪ ಕೂಡ ಅದರಲ್ಲಿ ಈಗ ಯಶಸ್ವಿಯಾಗಿದ್ದಾರೆ.
ಈವಾರ ಆದರ್ಶ್ ನಿರ್ದೇಶನದ 'ಶುದ್ಧಿ' ಬಿಡುಗಡೆಯಾಗುತ್ತಿದೆ. ಈ ಸಿನೆಮಾದ ಸಿನೆಮ್ಯಾಟೋಗ್ರಾಫರ್ ಆಂಡ್ರ್ಯು ಆಯಿಲ್ಲೊ ಮತ್ತು ಸಂಗೀತ ನಿರ್ದೇಶಕ ಜೆಸ್ ಕ್ಲಿಂಟನ್. ಇವರಿಬ್ಬರು ಹಾಲಿವುಡ್ ತಂತ್ರಜ್ಞರು. ಅಲ್ಲದೆ ನಾಯಕ ನಟಿ ಲಾರೆನ್ ಸ್ಪಾರ್ಟಾನೋ, ನಿವೇದಿತಾ ಮತ್ತು ಅಮೃತ ಕರಗದ ಜೊತೆಗೆ ನಟಿಸಿರುವುದು ವಿಶೇಷ.
ಇವೆರೆಲ್ಲರ ಜೊತೆಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಳ್ಳುವ ಆದರ್ಶ್ "ನಮ್ಮ ಕ್ಯಾಮರಾಮಾನ್, ನಮ್ಮ ಜೊತೆಗೆ ಚಾಮುಂಡಿ ಬೆಟ್ಟಕ್ಕೆ ಬಂದಿದ್ದರು. ದೇವಾಲಯದಲ್ಲಿ ಅರ್ಚಕರು ಇವರಿಗೆ ಹಾರ ಹಾಕಿದಾಗ, ಅವರಲ್ಲಿ ಇಡೀ ದಿನ ಕಂಪನ ಉಂಟಾಯಿತು ಮತ್ತು ಅಂದೆಲ್ಲಾ ಸುತ್ತಮುತ್ತ ಚಿತ್ರೀಕರಿಸಿದರು. ಅವರು ಹಣೆಗೆ ಇಟ್ಟ ತಿಲಕವನ್ನು ಕೂಡ ಹಾಗೆಯೇ ಉಳಿಸಿಕೊಂಡಿದ್ದರು. ಅವರು ಗಣೇಶ ಜಾತ್ರೆ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸಿದ್ದರು" ಎನ್ನುತ್ತಾರೆ.
ಬೆಂಗಳೂರು ನಗರವನ್ನು ಹೊರತುಪಡಿಸಿ ಆಂಡ್ರ್ಯು ಕರ್ನಾಟಕದ ಎಲ್ಲ ಪ್ರದೇಶಗಳನ್ನು ಇಷ್ಟಪಟ್ಟರು. ಅವರು ಬೆಂಗಳೂರನ್ನು ಲಾಸೆಂಜಲಿಸ್ ಗೆ ಹೋಲಿಸುತ್ತಾರೆ ಎಂದು ತಿಳಿಸುವ ಆದರ್ಶ್ "ಗೋಕರ್ಣ ಮತ್ತು ಮಡಿಕೇರಿಯಲ್ಲಿ ತಂಗಿದ್ದು ಅವರಿಗೆ ಇಷ್ಟವಾಯಿತು. ಮಡಿಕೇರಿಯಲ್ಲಿ ಚಿತ್ರೀಕರಣಕ್ಕಾಗಿ ತಾಣಗಳನ್ನು ಹುಡುಕುವಾಗ, ಮದುವೆ ಸಮಾರಂಭವನ್ನು ಕೂಡ ಅವರು ಎದುರಾಗಿ ಹಲವು ಬಗೆಯ ಮಾಂಸಾಹಾರಿ ಖಾದ್ಯಗಳನ್ನು ಸವಿದರು. ರಸ್ತೆ ಬದಿಯಲ್ಲಿ ಮಾರುವ ಪಾನಿಪುರಿ, ಮಸಾಲ ಪುರಿ ಒಳಗೊಂಡಂತೆ ಆಂಡ್ರ್ಯು ಎಲ್ಲ ಬಗೆಯ ಖಾದ್ಯಗಳನ್ನು ಇಷ್ಟಪಡುತ್ತಾರೆ. ಅವರು ತಿಂಡಿ ಬೀದಿಗೆ ಭೇಟಿ ನೀಡಿದ್ದಲ್ಲದೆ ಸದಾ ಎಳನೀರು ಕುಡಿಯುತ್ತಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ ಆದರ್ಶ್.