ಹೈದರಾಬಾದ್: ಭಾರತೀಯ ಚಿತ್ರರಂಗ ಎದುರು ನೋಡುತ್ತಿರುವ ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು 24 ಗಂಟೆಯೊಳಗೆ 50 ಮಿಲಿಯನ್ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ.
ಬಾಹುಬಲಿ 2 ಈ ಹಿಂದಿನ ಎಲ್ಲ ಚಿತ್ರಗಳ ಟ್ರೈಲರ್ ವೀಕ್ಷಣೆಯ ದಾಖಲೆಯನ್ನು ಹಿಂದಿಕ್ಕಿದೆ. ಯೂಟ್ಯೂಬ್ ನಲ್ಲಿ ಈ ಟ್ರೈಲರ್ ಅನ್ನು ಬರೋಬ್ಬರಿ 50 ಮಿಲಿಯನ್ ಮಂದಿ ವೀಕ್ಷಿಸಿದ್ದು ಜಗತ್ತಿನ ಚಿತ್ರಗಳ ಪೈಕಿ ಬಾಹುಬಲಿ 2 ಟ್ರೈಲರ್ 30ನೇ ಸ್ಥಾನ ಪಡೆದುಕೊಂಡಿದೆ.
ಆಮೀರ್ ಖಾನ್ ಅಭಿನಯದ ದಂಗಲ್ ಚಿತ್ರ ಬಿಡುಗಡೆಯಾದ 24 ಗಂಟೆಯೊಳಗೆ 1.65 ಕೋಟಿ ವೀಕ್ಷಣೆ ಪಡೆದು 30ನೇ ಸ್ಥಾನದಲ್ಲಿತ್ತು. ಇದೀಗ ಬಾಹುಬಲಿ 2 1.70 ಕೋಟಿ ವೀಕ್ಷಣೆಯೊಂದಿಗೆ ದಂಗಲ್ ಅನ್ನು ಹಿಂದಿಕ್ಕಿದೆ.
ಬಾಲಿವುಡ್ ನಿರ್ದೇಶಕ ಕರಣ್ ಜೋಹಾರ್ ಹಿಂದಿ ಆವೃತ್ತಿಯ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು ಈ ಚಿತ್ರ ನಿಜವಾಗಿ 50 ಮಿಲಿಯನ್ ವೀಕ್ಷಣೆ ಪಡೆದಿದೆ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಬಹುತಾರಾಗಣವಿದ್ದು ಬಾಹುಬಲಿ, ಶಿವುಡು ಆಗಿ ಪ್ರಭಾಸ್, ಬಲ್ಲಾಳದೇವನಾಗಿ ರಾಣಾ ದಗ್ಗುಬಾಟಿ, ದೇವಸೇನಾಳಾಗಿ ಅನುಷ್ಕಾ ಶೆಟ್ಟಿ, ಆವಂತಿಕಾ ಪಾತ್ರದಲ್ಲಿ ತಮನ್ನಾ ಭಾಟಿಯಾ, ಕಟ್ಟಪ್ಪನಾಗಿ ಸತ್ಯರಾಜ್, ಶಿವಗಾಮಿಯಾಗಿ ರಮ್ಯಾ ಕೃಷ್ಣ ಕಾಣಿಸಿಕೊಂಡಿದ್ದಾರೆ.
2015ರಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ ಮೊದಲ ಆವೃತ್ತಿ ಬ್ಲಾಕ್ ಬಸ್ಟರ್ ಚಿತ್ರವಾಗಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುವ ಮೂಲಕ ಅಂತ್ಯ ಕಂಡಿತ್ತು. ಆಗ ಕಟ್ಟಪ್ಪ ಬಾಹುಬಲಿಯನ್ನು ಯಾಕೆ ಕೊಂದ ಪ್ರಶ್ನೆ ಉದ್ಭವವಾಗಿದ್ದು ಮುಂದಿನ ತಿಂಗಳ 28ರಂದು ಇದಕ್ಕೆ ಉತ್ತರ ಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics