ಸಿನಿಮಾ ಸುದ್ದಿ

ಟಗರು ಸಿನಿಮಾದಲ್ಲಿ ಅನಿತಾ ಭಟ್ ನೆಗೆಟಿವ್ ರೋಲ್

Shilpa D

ಬೆಂಗಳೂರು: ಸೆಂಚ್ಯುರಿ ಸ್ಟಾರ್ ಶಿವಣ್ಣ ಮುಖ್ಯಭೂಮಿಕೆಯಲ್ಲಿ ಸೂರಿ ನಿರ್ದೇಶಿಸುತ್ತಿರುವ 'ಟಗರು' ಚಿತ್ರದಲ್ಲಿ ಅನಿತಾ ಭಟ್ ಕೂಡ ಅಭಿನಯಿಸುತ್ತಿದ್ದಾರೆ.

ಸೂರಿ ನಿರ್ದೇಶನದಲ್ಲಿ ಅನಿತಾ ಭಟ್ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಈ ಹಿಂದೆ 'ದೊಡ್ಮನೆ ಹುಡ್ಗ' ಚಿತ್ರದಲ್ಲಿ ಮಿಂಚಿದ್ದರು. ಪ್ರಪ್ರಥಮ ಬಾರಿಗೆ ಅನಿತಾ ಭಟ್ ಟಗರು ಚಿತ್ರದ ಮೂಲಕ ನೆಗೆಟಿವ್  ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದೊಡ್ಮನೆ ಹುಡುಗ ಸಿನಿಮಾ ನಂತರ ಸೂರಿ ನಿರ್ದೇಶನದ ಟಗರು ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ಪಾತ್ರದ ಬಗ್ಗೆ ನನಗೆ ತುಂಬಾ ಕುತೂಹಲವಿದೆ. ಮಾರ್ಚ್ 24 ರಿಂದ ನನ್ನ ಪಾತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಅನಿತಾ ಭಟ್ ಹೇಳಿದ್ದಾರೆ.

ಶ್ರೀಮಂತ ಕುಟುಂಬ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಸಂಬಂಧಿತ ಪಾತ್ರ ಇದಾಗಿದೆ. ಜೊತೆಗೆ ಅಂಡರ್ ವರ್ಲ್ಡ್ ಸಂಪರ್ಕ ಕೂಡ ಇರುತ್ತದೆ ಎಂದು ತಮ್ಮ ಪಾತ್ರದ ಬಗ್ಗೆ ಅನಿತಾ ವಿವರಿಸಿದ್ದಾರೆ.

ಟಗರು ಸಿನಿಮಾದಲ್ಲಿ ಧನಂಜಯ್ ಈಗಾಗಲೇ ವಿಲ್ಹನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಸದ್ಯ ಅನಿತಾ ಬೋರಾಪುರ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ರಿಲೀಸ್ ಗೆ ಸಿದ್ಧವಾಗಿದೆ, ಪ್ರೀತ್ಸೋರು ಸಿನಿಮಾದ ಮೊದಲ ಹಂತದ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ,

ಈ ಚಿತ್ರದಲ್ಲಿ ಅಚ್ಯುತ ಕುಮಾರ್ ಹಾಗೂ ಸುಮನ್ ರಂಗನಾಥ್ ಕೂಡ ಅಭಿನಯಿಸಿದ್ದಾರೆ. ಸೈಕೋ ಅನಿತಾ ಭಟ್ ಅಭಿನಯದ ಮೊದಲ ಸಿನಿಮಾವಾಗಿತ್ತು.

SCROLL FOR NEXT