ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವಣ್ಣನಿಗಿಲ್ಲ ಲೀಡರ್ ಪಟ್ಟ: ಮಾಸ್ ಲೀಡರ್ ಆಗಿ ಸೆಂಚ್ಯುರಿ ಸ್ಟಾರ್

ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ "ಲೀಡರ್" ಟೈಟಲ್‌ಗೆ ಸಂಬಂಧಿಸಿದಂತೆ ತಲೆದೋರಿದ್ದ ವಿವಾದಕ್ಕೆ ತೆರೆಬಿದ್ದಂತಾಗಿದೆ. ಲೀಡರ್ ಟೈಟಲ್ ...

ಬೆಂಗಳೂರು: ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ "ಲೀಡರ್" ಟೈಟಲ್‌ಗೆ ಸಂಬಂಧಿಸಿದಂತೆ ತಲೆದೋರಿದ್ದ ವಿವಾದಕ್ಕೆ ತೆರೆಬಿದ್ದಂತಾಗಿದೆ. ಲೀಡರ್  ಟೈಟಲ್ ಬಳಸದಂತೆ ಫಿಲ್ಮ್ ಛೇಂಬರ್‌ ನಿರ್ಮಾಪಕ ತರುಣ್ ಅವರಿಗೆ ಪತ್ರ ಬರೆದಿದೆ.

ಕಳೆದ 6 ತಿಂಗಳಿಂದ 'ಲೀಡರ್ ' ಟೈಟಲ್‌ ವಿಚಾರವಾಗಿ ಗೊಂದಲ ಉಂಟಾಗಿತ್ತು. ಟೈಟಲ್‌ ವಿಚಾರವಾಗಿ ನಿರ್ಮಾಪಕ ತರುಣ್ ಪಿಕ್ಚರ್ ಹಾಗೂ ವಸಿಷ್ಠ ಪಿಕ್ಚರ್ಸ್ ಎಂ ಆರ್ ರಮೇಶ್‌‌ ನಡುವೆ ಗಲಾಟೆ ನಡೆಯುತ್ತಿತ್ತು. ತಾವು ರಿಜಿಸ್ಟರ್ ಮಾಡಿಸಿರುವ ಟೈಟಲ್‌ನ್ನು ಬೇರೆಯವರು ಬಳಸುತ್ತಿರುವ ಬಗ್ಗೆ ವಸಿಷ್ಠ ಪಿಕ್ಚರ್‌ನ  ನಿರ್ದೇಶಕ ಎ ಎಂ ಆರ್ ರಮೇಶ್ ದೂರು ನೀಡಿದ್ದರು.

ಸದ್ಯ ಲೀಡರ್ ಸಿನಿಮಾ ತಂಜ ಖತಾರ್ ನಲ್ಲಿ ಹಾಡಿನ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ನಮಗೆ ಟೈಟಲ್ ನಿಂದ ಯಾವುದೇ ತೊಂದರೆಯಿಲ್ಲ, ಎಎಂಆರ್ ರಮೇಶ್ ಈ ವಿಷಯವನ್ನು ಏಕೆ ಇಷ್ಟು ದೊಡ್ಡದು ಮಾಡಿದರೊ ತಿಳಿದಿಲ್ಲ ಎಂದು ನಿರ್ಮಾಪಕ ತರುಣ್ ಶಿವಪ್ಪ ಹೇಳಿದ್ದಾರೆ.

ನಮ್ಮ ಸಿನಿಮಾ ಟೈಟಲ್ ಮಾಸ್ ಲೀಡರ್, ಇದನ್ನು ನಾವು ಬರಹಗಾರ ಅಜಯ್ ಕುಮಾರ್ ಅವರಿಂದ ಪಡೆದುಕೊಂಡಿದ್ದೇವೆ. ಅಜಯ್ ಕುಮಾರ್ ಈ ಟೈಟಲ್ ಅನ್ನು ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟ್ರಾರ್ ಮಾಡಿಸಿದ್ದರು. ಸಂಕ್ರಾಂತಿ ಹಬ್ಬದ ವೇಳೆ, ನಾವು ಸಿನಿಮಾ ಬಗ್ಗೆ ಜಾಹೀರಾತು ನೀಡಿದ ವೇಳೆಯಿಂದ ರಮೇಶ್ ಲೀಡರ್ ಟೈಟಲ್ ತಮ್ಮದು. ನನ್ನ ಗಮನಕ್ಕೆ ತರದೇ ಟೈಟಲ್ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಣಿಜ್ಯಮಂಡಳಿಗೆ ದೂರು ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲೀಡರ್ ಟೈಟಲ್ ನೋಂದಾಯಿಸಿದ್ದ ರಘುನಾಥ್ ನಾವು ಪ್ರಾಜೆಕ್ಟ್ ನಿಲ್ಲಿಸಿದ್ದು , ಅದನ್ನು ಬಳಕೆ ಮಾಡಿಕೊಳ್ಳುವಂತೆ ನಮಗೆ ಹೇಳಿದ್ದರು. ರಮೇಶ್ 2010 ರಲ್ಲಿ ತಮ್ಮ ಟೈಟಲ್ ರಿಜಿಸ್ಟ್ರಾರ್ ಮಾಡಿಸಿದ್ದಾರೆ. 2014 ರಲ್ಲೆ  ಈ ಸಂಬಂಧ ದೂರು ನೀಡಬೇಕಿತ್ತು, ಆದರೆ ಈಗ ಏಕೆ ಈ ಸಂಬಂಧ ಜಗಳ ತೆಗೆಯುತ್ತಿದ್ದಾರೆ ಎಂಬದು ತಿಳಿಯುತ್ತಿಲ್ಲ ಎಂದು ತರುಣ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT