ದಂಡುಪಾಳ್ಯ 2 ಚಿತ್ರದ ಆರಂಭದಲ್ಲಿ ಅನೇಕ ವಿಘ್ನಗಳು ಎದುರಾಗಿತ್ತು. ನಿರ್ಮಾಪಕರಿಗೆ ಹಣಕಾಸಿನ ತೊಂದರೆಯು ಎದುರಾಗಿತ್ತು. ಅದೆಲ್ಲ ಈಗ ಬಗೆಹರಿದಿದ್ದು, ಚಿತ್ರದ ಶೂಟಿಂಗ್ ನಾಳೆ ಮುಗಿಯಲಿದೆ. ಚಿತ್ರದ ಅಂತಿಮ ಭಾಗದ ಚಿತ್ರೀಕರಣ ನಡೆಯುತ್ತಿದೆ ಎಂದು ನಿರ್ದೇಶಕ ಶ್ರೀನಿವಾಸ್ ರಾಜು ತಿಳಿಸುತ್ತಾರೆ.
ಚಿತ್ರದಲ್ಲಿ ಪೂಜಾ ಗಾಂಧಿ, ಮಾರ್ಕಂಡ್ ದೇಶಪಾಂಡೆ, ಸಂಜನಾ, ರವಿ ಕಾಳೆ, ಕರಿ ಸುಬ್ಬು, ಯತಿರಾಜು, ಡಾನ್ನಿ, ಜಯದೇವ, ಮುನಿ, ಪೆಟ್ರೋಲ್ ಪ್ರಸನ್ನ ಮತ್ತು ರವಿಶಂಕರ್ ಮೊದಲಾದವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ದಂಡುಪಾಳ್ಯ ಮೊದಲ ಭಾಗ 2012ರಲ್ಲಿ ತೆರೆ ಕಂಡಿತ್ತು. ಕುಖ್ಯಾತ ಗ್ಯಾಂಗ್ ನ ದಿಗಿಲುಗೊಳಿಸುವ ಕಥೆಯನ್ನು ಇದು ಹೊಂದಿದೆ.
ಈ ಮಧ್ಯೆ ನಿರ್ದೇಶಕರು ದಂಡುಪಾಳ್ಯ 3ನ್ನು ಕೂಡ ಆರಂಭಿಸಿದ್ದು ಅದರ ಮೊದಲ ಹಂತದ ಚಿತ್ರೀಕರಣ ನಡೆದಿದೆ. ದಂಡುಪಾಳ್ಯ 3ಯ ಎರಡನೇ ಹಂತದ ಚಿತ್ರೀಕರಣ ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿದೆ. ದಂಡುಪಾಳ್ಯ 2 ಬಿಡುಗಡೆಯಾದ ತಿಂಗಳೊಳಗೆ ದಂಡುಪಾಳ್ಯ 3ನ್ನು ಬಿಡುಗಡೆಮಾಡುವ ಯೋಚನೆಯಲ್ಲಿ ಚಿತ್ರದ ನಿರ್ದೇಶಕರಿದ್ದಾರೆ.
ದಂಡುಪಾಳ್ಯ 3ಕ್ಕೆ ಇನ್ನಿಬ್ಬರು ನಟರು ಬಂದು ಸೇರಿಕೊಳ್ಳಲಿದ್ದಾರೆ.ದಂಡುಪಾಳ್ಯ 2ವನ್ನು ವೆಂಕಟ್ ನಿರ್ಮಿಸಿದ್ದು, ದಂಡುಪಾಳ್ಯ 3ಯನ್ನು ಎಸ್ಆರ್ ಪಿ ಎಂಟರ್ಟೈನ್ ಮೆಂಟ್ ನಿರ್ಮಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics