'ರೋಗ್' ಸಿನೆಮಾದಲ್ಲಿ ಇಶಾನ್ ಮತ್ತು ಮನ್ನಾರ ಚೋಪ್ರಾ 
ಸಿನಿಮಾ ಸುದ್ದಿ

ಇಶಾನ್ ಮುಂದೊಂದು ದಿನ ದೊಡ್ಡ ಸ್ಟಾರ್ ಆಗಲಿದ್ದಾರೆ: ಪೂರಿ ಜಗನ್ನಾಥ್

ಬೆಳ್ಳಿತೆರೆಗೆ ಹೊಸಬರನ್ನು ಪರಿಚಯಿಸುವುದರಲ್ಲಿ ಛಾತಿ ಹೊಂದಿರುವ ನಿರ್ದೇಶಕ ಪೂರಿ ಜಗನ್ನಾಥ್ ಈಗ ದ್ವಿಭಾಷಾ ಚಲನಚಿತ್ರ 'ರೋಗ್'ನಲ್ಲಿ ಇಶಾನ್ ಅವರನ್ನು ಪರಿಚಯಿಸಿದ್ದಾರೆ.

ಬೆಂಗಳೂರು: ಬೆಳ್ಳಿತೆರೆಗೆ ಹೊಸಬರನ್ನು ಪರಿಚಯಿಸುವುದರಲ್ಲಿ ಛಾತಿ ಹೊಂದಿರುವ ನಿರ್ದೇಶಕ ಪೂರಿ ಜಗನ್ನಾಥ್ ಈಗ ದ್ವಿಭಾಷಾ ಚಲನಚಿತ್ರ 'ರೋಗ್'ನಲ್ಲಿ ಇಶಾನ್ ಅವರನ್ನು ಪರಿಚಯಿಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಲಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು "ನನ್ನ ಮೇಲೆ ನಂಬಿಕೆ ಇಡುವ ನಿರ್ಮಾಪಕರು, ಚೊಚ್ಚಲ ನಟರನ್ನು ನಾನು ಸ್ಟಾರ್ ಗಳನ್ನಾಗಿ ಮಾಡಬಲ್ಲೆ ಎಂದು ನಂಬಿದ್ದಾರೆ" ಎನ್ನುತ್ತಾರೆ ಪೂರಿ. 
ಹೊಸಬರಿಗೆ ಪ್ರಾರಂಭಿಸಲು ರೋಮ್ಯಾನ್ಸ್ ಸಿನೆಮಾಗಳು ಉತ್ತಮ ಎನ್ನುವ ಅವರು "ಭಾರದ ಕಥೆಗಳಿಂದ ಹೊಸಬರ ಮೇಲೆ ತೂಕ ಹಾಕಲು ನನಗಿಷ್ಟವಿಲ್ಲ. ಎರಡನೆಯದಾಗಿ ಹೀರೊ ಮೇಲೆ ಕೇಂದ್ರೀಕೃತವಾಗಿರಬೇಕು ಮತ್ತು ಇದಕ್ಕೆ ರೋಮ್ಯಾನ್ಸ್ ಉತ್ತಮ ಮತ್ತು ಇದು ಇಲ್ಲಿಯವರೆಗೂ ಕೆಲಸ ಮಾಡಿದೆ" ಎನ್ನುತ್ತಾರೆ. 
ಇಶಾನ್ ಬಗ್ಗೆ ಮಾತನಾಡುವ ಪೂರಿ "ಮನೋಹರ್ ಈ ಹುಡುಗನ್ನು ಪರಿಚಯಿಸಿದ ಕ್ಷಣ ನಾನು ಇಂಪ್ರೆಸ್ ಆದೆ. ಅವರು ನಟನ ಶಾಲೆಯಲ್ಲಿ ತರಬೇತಿ ಪಡೆದಿದ್ದರೂ, ಅವರನ್ನು ಬ್ಯಾಂಗ್ಕಾಕ್ ಗೆ ಕಳುಹಿಸಿ ಸ್ಟಂಟ್ ತರಬೇತಿ ಪಡೆಯುವಂತೆ ಹೇಳಿದೆ. ಅವರ ಕೂದಲ ಬಣ್ಣ ಬದಲಿಸಿ ಫೋಟೋಶೂಟ್ ಗಳನ್ನು ನಡೆಸಿ, ಅವರ ಆತ್ಮವಿಶ್ವಾಸ ಹೆಚ್ಚಿಸಲು ಡಬ್ಮ್ಯಾಷ್ ಮಾಡುತ್ತಿದ್ದೆ. ಇದಕ್ಕೆಲ್ಲ ೪ ತಿಂಗಳ ಕಾಲ ಹಿಡಿಯಿತು" ಎನ್ನುವ ಪೂರಿ ಹೊಸ ನಟನ ಜೊತೆಗೆ ಇನ್ನೆರಡು ಸಿನೆಮಾಗಳನ್ನು ಮಾಡಲು ಮುಂದಾಗಿದ್ದಾರೆ. 
"ಕಲಾವಿದರಿಗೆ ಸಾಕಷ್ಟು ಪ್ರತಿಭೆ ಇರುತ್ತದೆ ನಾವದನ್ನು ಸರಿ ದಾರಿಗೆ ತರುತ್ತೇವಷ್ಟೇ. ನಟನಾ ಶಾಲೆಗಳು ಒಂದಷ್ಟು ಹೇಳಿಕೊಡಬಹುದು ಆದರೆ ನಟರನ್ನಾಗಿಸಲು ಸಾಧ್ಯವಿಲ್ಲ. ನಟರಿಗೆ ಆತ್ಮವಿಶ್ವಾಸ ಮತ್ತು ಕಾರ್ಯತತ್ಪರತೆ ಮುಖ್ಯ. ಇವೆರಡು ಇಶಾನ್ ನಲ್ಲಿವೆ. ಅವರು ವಿನಯವಂತ ಮತ್ತು ಗಮನವಿಟ್ಟು ಕೆಲಸ ಮಾಡುತ್ತಾರೆ. ಮುಂದೊಂದು ದಿನ ಅವರನ್ನು ಸ್ಟಾರ್ ಆಗಿ ನೋಡುವ ಆತ್ಮವಿಶ್ವಾಸ ಇದೆ" ಎನ್ನುತ್ತಾರೆ ಪೂರಿ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT