ಇಶಾನ್ 
ಸಿನಿಮಾ ಸುದ್ದಿ

'ರೋಗ್' ಇಶಾನ್ ನಾಚಿಕೆ ಸ್ವಭಾವದ ಪಕ್ಕದ ಮನೆಯ ಹುಡುಗನಂತೆ!

ನಪ್ರಿಯ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್'ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಇಶಾನ್ ಗೆ ಇದು ಮಾಮೂಲಿ ಚಿತ್ರವಲ್ಲ. ತಮ್ಮ ಸಂಬಂಧಿ ಸಿ ಆರ್ ಮನೋಹರ್ ಅವರೇ ನಿರ್ಮಿಸುತ್ತಿರುವ

ಬೆಂಗಳೂರು: ಜನಪ್ರಿಯ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ 'ರೋಗ್'ನಲ್ಲಿ ಪಾದಾರ್ಪಣೆ ಮಾಡುತ್ತಿರುವ ಇಶಾನ್ ಗೆ ಇದು ಮಾಮೂಲಿ ಚಿತ್ರವಲ್ಲ. ತಮ್ಮ ಸಂಬಂಧಿ ಸಿ ಆರ್ ಮನೋಹರ್ ಅವರೇ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ತನು-ಮನ-ಧನವನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವುದಾಗಿ ಹೇಳಿತ್ತಾರೆ ಇಶಾನ್. 
"ನಾನು ಬೆಳ್ಳಿತೆರೆಗೆ ಬರಲು ಎಂದಿಗೂ ಆಶಿಸುತ್ತಿದ್ದೆ. ನನ್ನ ಸಹೋದರರ ಪ್ಯಾಷನ್ ಮತ್ತು ಆಶೀರ್ವಾದ ನನಗೆ ಸಹಾಯ ಮಾಡಿತು. ನಾನು ನಟನಾಗಬೇಕು ಅಂದು ಅವರಿಗೆ ತಿಳಿಸಿದಾಗ, ನಟನಾಗಲು ಅತಿ ಹೆಚ್ಚು ಶ್ರಮ ಬೇಕು ಎಂದಷ್ಟೇ ಹೇಳಿದ್ದರು. ನಾನು ಅವರ ಸಲಹೆ ತೆಗೆದುಕೊಂಡು, ಅದಕ್ಕಾಗಿ ಮಾಡಬೇಕಾದ ಕೆಲಸವನ್ನು ಮಾಡಿದೆ. ಆತ್ಮವಿಶ್ವಾಸ ಗಳಿಸಿದೆ. ನಾನು ಅತಿ ದೊಡ್ಡ ಬಜೆಟ್ ಸಿನೆಮಾದ ಭಾಗವಾಗಿದ್ದರೂ, ಅತಿ ದೊಡ್ಡ ನಿರ್ದೇಶಕನ ಕೆಳಗೆ ನಟಿಸಿದರೂ ಕೊನೆಗೆ ಪ್ರಮುಖವಾದದ್ದು ನನ್ನ ಪ್ರದರ್ಶನ ಎಂಬುದನ್ನು ಮನಗಂಡೆ. ನನ್ನ ಸಹೋದರರ ಒಡೆತನದ ತನ್ವಿ ಪ್ರೊಡಕ್ಷನ್ಸ್ ನಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದೆ" ಎನ್ನುತ್ತಾರೆ ಚೊಚ್ಚಲ ನಟ ಇಶಾನ್.
ನಂತರ ಪೂರಿ ಜಗನ್ನಾಥ್ ಜೊತೆಗೆ ಭೇಟಿ ನಡೆಯಿತು ಎಂದು ತಿಳಿಸುವ ಅವರು "೧೦ ನಿಮಿಷಗಳಲ್ಲಿ ಅವರು ನನ್ನನ್ನು ಪರಿಚಯಿಸಲು ಒಪ್ಪಿಕೊಂಡರು. ಅಂತಹ ದೊಡ್ಡ ನಿರ್ದೇಶಕ ನನ್ನನ್ನು ಬೆಳ್ಳಿ ತೆರೆಗೆ ಪರಿಚಯಿಸಲು ಒಪ್ಪಿಕೊಂಡಾಗ ನಾನು ಚಂದ್ರನ ಮೇಲಿದ್ದೆ ಮತ್ತು ಅವರ ನಂಬಿಕೆ ಮತ್ತು ಭರವಸೆಯನ್ನು ಉಳಿಸಿಕೊಂಡಿದ್ದೇನೆ ಎಂದು ನಂಬಿದ್ದೇನೆ... ಈಗ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅವರ ಜೊತೆಗೆ ಕೆಲಸ ಮಾಡಿದ ಅನುಭವ ಹೇಗಿತ್ತು ಎಂದು ಯಾರಾದರೂ ಕೇಳಿದರೆ 'ಅವರು ಬಹಳ ಧೈರ್ಯದ ನಿರ್ದೇಶಕ ಮತ್ತು ಒಳ್ಳೆಯ ನಟ ಕೂಡ' ಎಂದು ಹೇಳುತ್ತೇನೆ" ಎನ್ನುತ್ತಾರೆ ಇಶಾನ್. 
ಸಿನೆಮಾದ ಅಂತಿಮ ಪ್ರತಿಯನ್ನು ವೀಕ್ಷಿಸಿರುವ ಇಶಾನ್, ಈಗ ವೀಕ್ಷಕರ ಪ್ರತಿಕ್ರಿಯೆಗೆ ಉದ್ವೇಗದಿಂದ ಕಾಯುತ್ತಿದ್ದಾರೆ. ಹೊಸಬನಾಗಿದ್ದರಿಂದ ರೋಮ್ಯಾನ್ಸ್ ದೃಶ್ಯಗಳನ್ನು ಮಾಡುವುದು ತ್ರಾಸದಾಯಕವಾಗಿತ್ತು ಎಂದು ನೆನಪಿಸಿಕೊಳ್ಳುವ ಅವರು "ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ತುಸು ಭಯಭೀತನಾಗಿದ್ದೆ. ನನ್ನ ಮೊದಲ ಶಾಟ್ ಬ್ಯಾಂಗ್ಕಾಕ್ ನಲ್ಲಿ ನಡೆದ ರೋಮ್ಯಾಂಟಿಕ್ ಹಾಡು. ನಾನು ಮೂಲತಃ ನಾಚಿಕೆ ಸ್ವಭಾವದವ ಮತ್ತು ಶಾಲೆಯಲ್ಲಾಗಲಿ ಅಥವಾ ಕಾಲೇಜಿನಲ್ಲಾಗಲಿ ಹುಡುಗಿಯರ ಜೊತೆಗೆ ಮಾತನಾಡಲು ಹಿಂಜರಿಯುತ್ತಿದ್ದೆ. ಚಿತ್ರೀಕರಣದ ಮೊದಲ ದಿನ, ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಲು ಭಯಪಟ್ಟಿದ್ದನ್ನು ವಿವರಿಸಲು ನಾನು ನನ್ನ ಸಹೋದರಿಯರನ್ನು ಒಳಗೊಂಡಂತೆ ಇಡೀ ಕುಟುಂಬವನ್ನು ಕರೆದಿದ್ದೆ. ಈಗ ಸಿನೆಮಾ ಪೂರ್ಣ ವೀಕ್ಷಿಸಿದ ಮೇಲೆ, ಅವುಗಳು ಅತ್ಯುತ್ತಮವಾಗಿ ಮೂಡಿಬಂದಿವೆ ಮತ್ತು ಆಕ್ಷನ್ ದೃಶ್ಯಗಳು ಕೂಡ" ಎನ್ನುತ್ತಾರೆ.
ಈಗ ನಿರ್ದೇಶಕ ಪೂರಿ ಅವರ ಬ್ಯಾನರ್ ನಲ್ಲಿಯೇ ಇಶಾನ್ ಜೊತೆಗೆ ಮತ್ತೊಂದು ಚಿತ್ರ ನಿರ್ದೇಶಿಸಲು ಸಿದ್ಧತೆ ನಡೆಸಿದ್ದಾರೆ. ಇಶಾನ್ ಮುಂದೆ ಏನು ಮಾಡಬೇಕೆಂದಿದ್ದೀರಿ ಎಂಬ ಪ್ರಶ್ನೆಗೆ "ಇದು ಕ್ಲಿಷೆಯ ರೀತಿ ಕೇಳಿಸಬಹುದು, ಆದರೆ ಪ್ರತಿ ಸಿನೆಮಾವನ್ನು ನನ್ನ ಮೊದಲ ಸಿನೆಮಾವಾಗಿ ನೋಡುತ್ತೇನೆ ನಾನು" ಎನ್ನುವ ನಟ "ನನ್ನ ಎಲ್ಲ ಸಿನೆಮಾಗಳ ವಿಷಯಗಳು ತಾಜಾತನದಿಂದ ಕೂಡಿರಬೇಕು ಹಾಗು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ನಟಿಸಲಿದ್ದೇನೆ" ಎನ್ನುತ್ತಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT