ಅಮೆರಿಕ ಪ್ರವಾಸದಲ್ಲಿ ಧನಂಜಯ್ 
ಸಿನಿಮಾ ಸುದ್ದಿ

ರಂಗಭೂಮಿಯತ್ತ ಮರಳಿದ ನಟ ಧನಂಜಯ್

ರಂಗಭೂಮಿಯಿಂದ ವೃತ್ತಿ ಜೀವನ ಪ್ರಾರಂಭಿಸಿ ಬೆಳ್ಳಿ ತೆರೆಗೆ ಆಗಮಿಸಿದ ನಟ ಧನಂಜಯ್, ಏಪ್ರಿಲ್ ೨೯ ರಂದು ವಾಷಿಂಗ್ಟನ್ ಡಿಸಿಯ ವರ್ಜಿನಿಯಾ ರಂಗೋತ್ಸವದಲ್ಲಿ ಅವರ ಏಕಪಾತ್ರಾಭಿನಯ ನಾಟಕ

ಬೆಂಗಳೂರು: ರಂಗಭೂಮಿಯಿಂದ ವೃತ್ತಿ ಜೀವನ ಪ್ರಾರಂಭಿಸಿ ಬೆಳ್ಳಿ ತೆರೆಗೆ ಆಗಮಿಸಿದ ನಟ ಧನಂಜಯ್, ಏಪ್ರಿಲ್ ೨೯ ರಂದು ವಾಷಿಂಗ್ಟನ್ ಡಿಸಿಯ ವರ್ಜಿನಿಯಾ ರಂಗೋತ್ಸವದಲ್ಲಿ ಅವರ ಏಕಪಾತ್ರಾಭಿನಯ ನಾಟಕ 'ಶ್ರದ್ಧಾ'ದಲ್ಲಿ ಅಭಿನಯಿಸಿದ್ದಾರೆ. 
ಈ ಸಂತಸವನ್ನು ಹಂಚಿಕೊಂಡ ನಟ "ಏಳು ವರ್ಷಗಳ ನಂತರ ನಾನು ಮತ್ತೆ ರಂಗಭೂಮಿ ವೇದಿಕೆ ಹತ್ತಿದ್ದೇನೆ. ಇದು ನನ್ನ ರಂಗಭೂಮಿ ದಿನಗಳನ್ನು ಮರುಕಳಿಸಿತು. ನಾನು ಭಾರತಕ್ಕೆ ಹಿಂದಿರುಗಿದ ಮೇಲೆ ಮತ್ತೆ ನನ್ನ ರಂಗಭೂಮಿ ಚಟುವಟಿಕೆಗಳನ್ನು ಪ್ರಾರಂಭಿಸಲಿದ್ದೇನೆ" ಎನ್ನುತ್ತಾರೆ ಧನಂಜಯ್. 
ಈಗ ಜರ್ಮನಿಯಲ್ಲಿ ಪ್ರವಾಸದಲ್ಲಿರುವ ನಟ, ದಶಕದ ಹಿಂದೆ ರಂಗಭೂಮಿಯಲ್ಲಿ ತರಬೇತಿ ನೀಡಿದ ಅವರ ಗುರು ಕ್ರಿಶ್ಚಿಯನ್ ಸ್ಟುಕಿ ಅವರನ್ನು ಭೇಟಿ ಮಾಡಲು ಉತ್ಸುಕರಾಗಿದ್ದಾರೆ. "ಕ್ರಿಶ್ಚಿಯನ್ ಭಾರತಕ್ಕೆ ಬಂದಾಗಲೆಲ್ಲಾ ಅವರನ್ನು ಭೇಟಿ ಮಾಡುತ್ತಿದ್ದೆ. ಈಗ ಜರ್ಮನಿಯಲ್ಲಿ ಅವರನ್ನು ಮತ್ತು ನನ್ನ ಗೆಳೆಯರನ್ನು ಭೇಟಿ ಮಾಡಲಿದ್ದೇನೆ" ಎನ್ನುತ್ತಾರೆ. 
ಈಗ ಧನಂಜಯ್ ಪ್ರವಾಸದ ಬಗ್ಗೆ ತಿಳಿದ ಮ್ಯೂನಿಚ್, ಆಮ್ಸ್ಟ್ರೆಡಾಂ ಮತ್ತು ಮಿಲನ್ ಕನ್ನಡ ಸಂಘದವರು, ನಟ ಪ್ರಧಾನ ಪಾತ್ರದಲ್ಲಿ ನಟಿಸಿರುವ 'ಅಲ್ಲಮ' ಸಿನೆಮಾ ಪ್ರದರ್ಶನವನ್ನು ಹಮ್ಮಿಕೊಂಡಿವೆ. "ಇದು ಸಿನೆಮಾ ಪ್ರಚಾರ ಅಲ್ಲ. ನಾನು ಪ್ರವಾಸದಲ್ಲಿದ್ದೇನೆ. ಇಲ್ಲಿನ ಗೆಳೆಯರು ಮತ್ತು ಕನ್ನಡಿಗರ ಜೊತೆಗೆ ಕಾಲ ಕಳೆಯಲಿದ್ದೇನೆ" ಎನ್ನುತ್ತಾರೆ. 
ಮೇ ೯ ರಂದು ಬೆಂಗಳೂರಿಗೆ ಹಿಂದಿರುಗಳಿರುವ ಧನಂಜಯ್, ಈ ವಾರ ಬಿಡುಗಡೆಯಾಗಲಿರುವ ಅವರ ಸಿನೆಮಾ 'ಹ್ಯಾಪಿ ನ್ಯೂ ಇಯರ್' ಸಿನೆಮಾದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ನಮ್ಮ ಆಚರಣೆಯ ನಡುವೆ ಬೇರೆಯದನ್ನು ಯಾಕೆ ತರುತ್ತೀರಾ: ದಸರಾದಲ್ಲಿ ಕಂಬಳ ಆಯೋಜನೆಗೆ ಯದುವೀರ್- ಪ್ರತಾಪ್ ಸಿಂಹ ವಿರೋಧ!

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್