ಸುದೀಪ್ 
ಸಿನಿಮಾ ಸುದ್ದಿ

ಸುದೀಪ್ ಮುಂದಿನ ಚಿತ್ರಕ್ಕೆ 'ಹೆಬ್ಬುಲಿ' ನಿರ್ದೇಶಕ ಕೃಷ್ಣ ನಿರ್ದೇಶನ!

ಸುದೀಪ್ ಅಭಿನಯಿಸಬೇಕಿದ್ದ ರಕ್ಷಿತ್ ಶೆಟ್ಟಿ ನಿರ್ದೇಶನದ ಚಿತ್ರ ಅನಿರ್ಧಿಷ್ಟಾವಧಿಯವರೆಗೆ ಮುಂದೂಡಲಾಗಿದ್ದು, ಈಗ ವಾಣಿಜ್ಯ ದೃಷ್ಟಿಯಿಂದ ಯಶಸ್ಸು ಕಂಡ ಹೆಬ್ಬುಲಿ ನಿರ್ದೇಶಕ ಕೃಷ್ಣ

ಬೆಂಗಳೂರು: ಸುದೀಪ್ ಅಭಿನಯಿಸಬೇಕಿದ್ದ ರಕ್ಷಿತ್ ಶೆಟ್ಟಿ ನಿರ್ದೇಶನದ ಚಿತ್ರ ಅನಿರ್ಧಿಷ್ಟಾವಧಿಯವರೆಗೆ ಮುಂದೂಡಲಾಗಿದ್ದು, ಈಗ ವಾಣಿಜ್ಯ ದೃಷ್ಟಿಯಿಂದ ಯಶಸ್ಸು ಕಂಡ ಹೆಬ್ಬುಲಿ ನಿರ್ದೇಶಕ ಕೃಷ್ಣ ನಿರ್ದೇಶಿಸಲಿರುವ ಸಿನೆಮಾಗೆ ಸುದೀಪ್ ಮತ್ತೆ ಒಂದಾಗಲಿದ್ದಾರೆ. ಸಿನೆಮಾವೊಂದಕ್ಕೆ ಇಬ್ಬರೂ ಒಟ್ಟಿಗೆ ಬರಲಿದ್ದಾರೆ ಎಂಬ ಸುದ್ದಿ ಹಿಂದೆಯೇ ತಿಳಿದಿತ್ತಾದರೂ, ಈಗ ಅದು ಶೀಘ್ರದಲ್ಲೇ ನೆರವೇರಲಿದೆ. 
ಇದನ್ನು ನಿರ್ದೇಶಕ ಕೃಷ್ಣ ಟ್ವಿಟ್ಟರ್ ನಲ್ಲಿ ಘೋಷಿಸಿದ್ದು "ಕಿಚ್ಚ ಸುದೀಪ್ ಸರ್ ಜೊತೆಗೆ ಮತ್ತೆ ಕೆಲಸ ಮಾಡುವುದಕ್ಕೆ ಖುಷಿಯಾಗಿದೆ. ಇಷ್ಟು ಬೇಗ ಇದು ಸಾಧ್ಯವಾಗುತ್ತದೆ ಎಂದೆಣಿಸಿರಲಿಲ್ಲ. ಚಿತ್ರ ತಂಡ ಉತ್ಸಾಹದಿಂದಿದ್ದು, ತುದಿಗಾಲ ಮೇಲೆ ನಿಂತಿದೆ" ಎಂದು ಬರೆದಿರುವ ಅವರು ಮತ್ತೊಂದು ಟ್ವೀಟ್ ನಲ್ಲಿ "ಹೊಸ ಯೋಜನೆಯ ಚಿತ್ರೀಕರಣ ಅಕ್ಟೋಬರ್ ನಿಂದ ಪ್ರಾರಂಭವಾಗಲಿದೆ. 'ದ ವಿಲನ್' ಚಿತ್ರೀಕರಣ ಸಂಪೂರ್ಣಗೊಂಡ ನಂತರ...ಶೀರ್ಷಿಕೆ, ತಾರಾಗಣ ಮತ್ತು ತಂತ್ರಜ್ಞರ ತಂಡದ ವಿವಿರಗಳನ್ನು ಶೀಘ್ರದಲ್ಲೇ ತಿಳಿಸಲಿದ್ದೇನೆ. ಸದ್ಯಕ್ಕೆ ಅತ್ಯುತ್ಸಾಹ?" ಎಂದಿರುವ ಕೃಷ್ಣ "ಇದು ಕೊನೆಯ ಕೆಲವೇ ದಿನಗಳ ಬೆಳವಣಿಗೆ ಮತ್ತು ನಾನು ಈಗಾಗಲೇ ಕೆಲ ಪ್ರಾರಂಭಿಸಿದ್ದೇನೆ. ಸುದೀಪ್ ಜೊತೆಗೆ ಮತ್ತೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗಿದೆ" ಎನ್ನುತ್ತಾರೆ. 
ಈಮಧ್ಯೆ ನಿರ್ದೇಶಕ, ಸುದೀಪ್ ಅವರಿಗೆ ಮೂರೂ ಸ್ಕ್ರಿಪ್ಟ್ ಗಳನು ನೀಡಿದ್ದು, ಅವುಗಳಲ್ಲಿ ಒಂದರ ಆಯ್ಕೆ ಮತ್ತು ಒಪ್ಪಿಗೆಗೆ ಕಾಯುತ್ತಿದ್ದರಂತೆ. "ಇದು ಹೆಬ್ಬುಲಿ ೨ ಆಗಿರುವುದಿಲ್ಲ. ಅದು ಕೂಡ ಯೋಜನೆಯಲ್ಲಿದ್ದರೂ ಅದಕ್ಕಿನ್ನೂ ಸಮಯವಿದೆ" ಎನ್ನುತ್ತಾರೆ ಕೃಷ್ಣ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ; ಟ್ರಂಪ್ ಮಾರ್ಮಿಕ ನುಡಿ, ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ

Hubli Love jihad case: ವಿಡಿಯೋ ಇರೋದು ನಿಜ, ಆದ್ರೆ… ಪ್ರಜ್ಞೆ ತಪ್ಪಿದ್ದರೆ ವಿಡಿಯೋದಲ್ಲಿ ಹೇಗೆ ಆ್ಯಕ್ಟಿವ್ ಆಗಿರುತ್ತಾಳೆ?: Sameer Mulla ಸ್ಫೋಟಕ ಹೇಳಿಕೆ!

IPL 2026: Shreyas Iyer ಗೆ ಮತ್ತೆ ದಂಡ.. ನಾಯಕ ಮಾತ್ರವಲ್ಲ ಇಡೀ ಪಂಜಾಬ್ ತಂಡಕ್ಕೆ ಬರೆ ಹಾಕಿದ ಮ್ಯಾಚ್ ರೆಫರಿ!

'ಸಿಎಂ ಸಿದ್ದರಾಮಯ್ಯ ತಮ್ಮ ಮಗನನ್ನು ವಸೂಲಿ ಮಾಡಲು ರಾಜಕೀಯಕ್ಕೆ ಕರೆತಂದಿದ್ದಾರೆ': ಹೆಚ್ ಡಿ ಕುಮಾರಸ್ವಾಮಿ

Kerala: ಕಾಂಗ್ರೆಸ್ ಸಂಸದ Shashi Tharoor ಬೆಂಗಾವಲು ಪಡೆ ತಡೆದು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ

SCROLL FOR NEXT