ಸಿನಿಮಾ ಸುದ್ದಿ

ಬೆಳ್ಳಿತೆರೆಗೆ 20 ತಿಂಗಳ ಎಚ್ ಡಿ ಕೆ ಸರ್ಕಾರದ ಆಡಳಿತ; ಅರ್ಜುನ್ ಸರ್ಜಾ ಮುಖ್ಯಮಂತ್ರಿ

Guruprasad Narayana
ಬೆಂಗಳೂರು: ತಮಿಳು ಸಿನೆಮಾ ಮುಧಲ್ವನ್ (೧೯೯೯)ನಲ್ಲಿ ಒಂದು ದಿನ ಮುಖ್ಯಮಂತ್ರಿಯಾಗಿ ಅರ್ಜುನ್ ಸರ್ಜಾ ನಿರ್ವಹಿಸಿದ್ದ ಪಾತ್ರ ಭಾರಿ ಜನಪ್ರಿಯವಾಗಿತ್ತು. ಈಗ 'ಭೂಮಿ ಪುತ್ರ' ಸಿನೆಮಾದಲ್ಲಿ ಅಂತಹುದೇ ಒಂದು ಪಾತ್ರವನ್ನು ನಿರ್ವಹಿಸಲು ಅವರು ಸನ್ನದ್ಧರಾಗಿದ್ದಾರೆ. ಈ ಸಿನೆಮಾವನ್ನು ಎಸ್ ನಾರಾಯಣ್ ನಿರ್ದೇಶಿಸಲಿದ್ದಾರೆ. 
ಈ ಸಿನೆಮಾ ಜೆ ಡಿ ಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ೨೦ ತಿಂಗಳ ಅವಧಿಯ ಸರ್ಕಾರದ ಕುರಿತಾಗಿದೆ. ಮತ್ತೆ ಮುಖ್ಯಮಂತ್ರಿ ಪಾತ್ರದಲ್ಲಿ ನಟಿಸುವ ಸವಾಲನ್ನು ಅರ್ಜುನ್ ಸರ್ಜಾ ಒಪ್ಪಿಕೊಂಡಿದ್ದಾರೆ. 
"ನಾನು ನಟನಾಗಿ ಸಿನೆಮಾ ವಿಷಯ ಮತ್ತು ಪಾತ್ರದ ಧನಾತ್ಮಕತೆ ಬಗ್ಗೆ ಹೆಚ್ಚ್ಗೂ ಚಿಂತಿಸುತ್ತೇನೆ. ಕುಮಾರಸ್ವಾಮಿ ಆಡಳಿತದ ೨೦ ತಿಂಗಳಲ್ಲಿ ನಡೆದ ಒಳ್ಳೆಯ ಕೆಲಸದ ಬಗ್ಗೆ ತಿಳಿದಾಗ ನನಗೆ ಅಂತಹ ಭಾವನೆ ಮೂಡಿತು. ಆ ಪಾತ್ರವನ್ನು ಪೋಷಿಸಲು ನನಗೆ ಕರೆ ಬಂದಾಗ, ಆ ಸಿನೆಮಾದ ಭಾಗವಾಗಬೇಕು ಎಂದು ನಿಶ್ಚಯಿಸಿದೆ. ಈ ಸಿನೆಮಾದಲ್ಲಿ ಹಲವು ಸೃಜನಶೀಲ ಮತ್ತು ಕಮರ್ಷಿಯಲ್ ಅಂಶಗಳು ಇರಲಿವೆ" ಎನ್ನುತ್ತಾರೆ ನಟ. 
ಸಾಮಾಜಿಕ ಅರಿವು ಮೂಡಿಸುವ ಸಿನೆಮಾಗಳು ಅರ್ಜುನ್ ಗಮನ ಸೆಳೆಯುತ್ತವೆ. "ಹಿಂದೆ ಮುಧಲ್ವನ್ ನಲ್ಲಿ ನಾನು ನಿರ್ವಹಿಸಿದ ಶಕ್ತಿಯುತ ಪಾತ್ರವನ್ನು ಜನ ಮೆಚ್ಚಿದ್ದರು. ಶಂಕರ್ ನೀಡಿದ್ದ ಈ ಪಾತ್ರವನ್ನು ಒಪ್ಪಿಕೊಳ್ಳಲು ನಾನು ಮೊದಲಿಗೆ ಹಿಂಜರಿದಿದ್ದೆ. ಆದರೆ ನಿರ್ದೇಶಕರ ಭರವಸೆ ಆ ಪಾತ್ರವನ್ನು ತೆರೆಯ ಮೇಲೆ ಗಟ್ಟಿಯಾಗಿ ಮೂಡಿಸಲು ಸಾಧ್ಯವಾಯಿತು. ಹಾಗೆಯೇ 'ಭೂಮಿ ಪುತ್ರ' ಚಿತ್ರತಂಡ ಕೂಡ ನನ್ನ ಮೇಲೆ ಭರವಸೆಯಿಟ್ಟಿದೆ" ಎನ್ನುತ್ತಾರೆ ಅರ್ಜುನ್. 
ಸದ್ಯಕ್ಕೆ ನಿರ್ದೇಶಕ-ನಟ ಅರ್ಜುನ್ ಸರ್ಜಾ ತಮ್ಮ ಪುತ್ರಿ ಐಶ್ವರ್ಯ ಮತ್ತು ಚಂದನ್ ನಟಿಸಿರುವ 'ಪ್ರೇಮ ಬರಹ' ಕನ್ನಡ ಸಿನೆಮಾದ ಚಿತ್ರೀಕರಣ ಮುಗಿಸಿದ್ದಾರೆ. "ಈ ಸಿನೆಮಾದ ಡಬ್ಬಿಂಗ್ ಮುಗಿದಿದ್ದು, ಈಗ ಸಂಕಲನ ಕಾರ್ಯ ಚಾಲ್ತಿಯಲ್ಲಿದೆ" ಎಂದು ತಿಳಿಸುತ್ತಾರೆ. 
SCROLL FOR NEXT