ಮೋದಿ ಭೇಟಿ ಮಾಡಿ 'ಟಾಯ್ಲೆಟ್:ಏಕ್ ಪ್ರೇಮ್ ಕಥಾ' ಚರ್ಚಿಸಿದ ಅಕ್ಷಯ್ ಕುಮಾರ್ 
ಸಿನಿಮಾ ಸುದ್ದಿ

ಮೋದಿ ಭೇಟಿ ಮಾಡಿ 'ಟಾಯ್ಲೆಟ್: ಏಕ್ ಪ್ರೇಮ್ ಕಥಾ' ಚರ್ಚಿಸಿದ ಅಕ್ಷಯ್ ಕುಮಾರ್

ತಮ್ಮ ಮುಂದಿನ ಸಿನೆಮಾದ ಶೀರ್ಷಿಕೆ 'ಟಾಯ್ಲೆಟ್:ಏಕ್ ಪ್ರೇಮ್ ಕಥಾ' (ಶೌಚಾಲಯ: ಒಂದು ಪ್ರೇಮಕಥೆ) ಪ್ರಧಾನಿ ನರೇಂದ್ರ ಮೋದಿ ಅವರ ಮುಖದಲ್ಲಿ ನಗು ಮೂಡಿಸಿತು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಕ್ಷಯ್

ನವದೆಹಲಿ: ತಮ್ಮ ಮುಂದಿನ ಸಿನೆಮಾದ ಶೀರ್ಷಿಕೆ 'ಟಾಯ್ಲೆಟ್:ಏಕ್ ಪ್ರೇಮ್ ಕಥಾ' (ಶೌಚಾಲಯ: ಒಂದು ಪ್ರೇಮಕಥೆ) ಪ್ರಧಾನಿ ನರೇಂದ್ರ ಮೋದಿ ಅವರ ಮುಖದಲ್ಲಿ ನಗು ಮೂಡಿಸಿತು ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಕ್ಷಯ್ ಕುಮಾರ್ ಮಂಗಳವಾರ ಹೇಳಿದ್ದಾರೆ. 
ಮೋದಿ ಅವರನ್ನು ಭೇಟಿ ಮಾಡಿರುವುದರ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ "ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದೆ ಮತ್ತು ನನ್ನ ಮುಂದಿನ ಸಿನೆಮಾ 'ಟಾಯ್ಲೆಟ್:ಏಕ್ ಪ್ರೇಮ್ ಕಥಾ' ಬಗ್ಗೆ ತಿಳಿಸುವ ಅವಕಾಶ ಸಿಕ್ಕಿತು. ಶೀರ್ಷಿಕೆ ಕೇಳಿದ ತಕ್ಷಣ ಅವರು ನಕ್ಕ ನಗು ಇಡೀ ದಿನ ಸಂಭ್ರಮಿಸುವಂತೆ ಮಾಡಿತು" ಎಂದಿರುವ ನಟ ಮೋದಿಯವರ ಜೊತೆಗೆ ಚರ್ಚಿಸುತ್ತಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. 
ಈ ಸಿನೆಮಾ ಸ್ವಚ್ಛ ಭಾರತ ಅಭಿಯಾನದ ಕುರಿತಾದದ್ದು ಎಂದು ಈ ಮೊದಲು ತಿಳಿಸಲಾಗಿತ್ತು. ಆದರೆ ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವುದಕ್ಕೂ ಮೊದಲೇ ಈ ಸಿನೆಮಾದ ಬಗ್ಗೆ ಚರ್ಚಿಸಿದ್ದೆವು ಎಂದು ಸಿನೆಮಾದ ಸಂಭಾಷಣಕಾರರಾದ ಸಿದ್ಧಾರ್ಥ್ ಸಿಂಗ್ ಮತ್ತು ಗರೀಮ ವಹಾಳ್ ಹೇಳಿದ್ದಾರೆ. 
ಪ್ರೇಮ ಕಥೆಯ ಮೂಲಕ ದೇಶಕ್ಕೆ ಶೌಚಾಲಯಗಳ ಅಗತ್ಯವನ್ನು ಈ ಸಿನೆಮಾ ಚರ್ಚಿಸಲಿದೆಯಂತೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT