ಬೆಂಗಳೂರು: ದುನಿಯಾ ವಿಜಯ್ ಅಭಿನಯದ ಕನಕ ಸಿನಿಮಾವನ್ನು ಆರ್ .ಚಂದ್ರು ನಿರ್ದೇಶಿಸುತ್ತಿದ್ದಾರೆ. ವಿಜಯ್ ಅವರ ಫೈಟಿಂಗ್ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡಿರುವ ಚಂದ್ರು ಸಿನಿಮಾದ ಆರಂಭಿಕ ಹಾಡಿನ ಚಿತ್ರೀಕರಣದಲ್ಲಿ ಹೆಚ್ಚಿನ ಫೈಟಿಂಗ್ ಸನ್ನಿವೇಶ ಅಳವಡಿಸಿದ್ದಾರೆ.
ಓಪನಿಂಗ್ ಸಾಂಗ್ ಗಾಗಿ ಸುಮಾರು 80 ಲಕ್ಷ ರು ಹಣ ವೆಚ್ಚ ಮಾಡುತ್ತಿದ್ದು, ದೇವನಹಳ್ಳಿಯ ಬಳಿಯ 20 ಎಕರೆ ಜಮೀನಲ್ಲಿ ಸೆಟ್ ಹಾಕಲಾಗಿದೆ.
ಇದೊಂದು ಅತಿ ದೊಡ್ಡ ಪ್ರಮಾಣದ ಡ್ಯಾನ್ಸ್ ಆಗಿದ್ದು ಇದರಲ್ಲಿ ಆ್ಯಕ್ಷನ್ ಮತ್ತು ಡ್ಯಾನ್ಸ್ ಎರಡು ಮಿಕ್ಸ್ ಆಗಿದೆ. ಸಾಹಸ ಸನ್ನಿವೇಶಗಳನ್ನು ಥ್ರಿಲ್ಲರ್ ಮಂಜು ನಿರ್ದೇಶಿಸುತ್ತಿದ್ದು, ಮುರುಳಿ ಮಾಸ್ಟರ್ ಕೊರಿಯೊಗ್ರಫಿ ಮಾಡಿದ್ದಾರೆ. ಹಾಡಿನಲ್ಲಿ ಸುಮಾರು 100 ಮಂದಿ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಗಳಿದ್ದು ಅವರನ್ನು ಮುಂಬಯಿಯಿಂದ ಕರೆಸಲಾಗುತ್ತದೆ ಎಂದು ನಿರ್ದೇಶಕ ಚಂದ್ರು ಹೇಳಿದ್ದಾರೆ.
ಹಾಡಿನ ಕಾಸ್ಟ್ಯೂಮ್ ಗಳನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತಿದೆ. ಹಾಡಿನಲ್ಲಿ ಸಾಮ್ರಾಜ್ಯದಂತ ಥೀಮ್ ಸೃಷ್ಟಿಮಾಡಿದ್ದು, 25 ಜೀಪ್, ಲಾರಿ, ಕಾರು ಮತ್ತು ದೊಡ್ಡ ಕ್ರೇನ್ ಹಾಗೂ ಟ್ರಾಕ್ಟರ್ ಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದುವರೆಗೂ 2 ದಿನದ ಶೂಟಿಂಗ್ ಮುಗಿದಿದ್ದು, ಮುಂದಿನ ನಾಲ್ಕು ದಿನಗಳ ಶೂಟಿಂಗ್ ಮಿನರವ್ ಮಿಲ್ ನ್ಲಲಿ ನಡೆಯಲಿದೆ, ಇಲ್ಲಿ ಬೃಹತ್ ಪ್ರಮಾಣದ ಸೆಟ್ ನಿರ್ಮಿಸಲಾಗುವುದು ಎಂದು ಚಂದ್ರು ತಿಳಿಸಿದ್ದಾರೆ.
ಕನಕ ಚಿತ್ರದಲ್ಲಿ ವಿಜಯ್ ಗೆ ಮಾನ್ವಿತಾ ಹರೀಶ್ ನಾಯಕಿಯಾಗಿದ್ದಾರೆ. ನವೀನ್ ಸಜ್ಜು ಸಂಗೀತ ನೀಡಿದ್ದು ಸತ್ಯ ಹೆಗಡೆ ಸಿನಿಮಾಟೋಗ್ರಫಿಯಿದೆ.