ರಣಬೀರ್ ಕಪೂರ್ 
ಸಿನಿಮಾ ಸುದ್ದಿ

ಬಾಲಿವುಡ್ ನಟ ರಣಬೀರ್ ಕಪೂರ್ ಶೀಘ್ರದಲ್ಲೆ ಕಂಕಣ ಭಾಗ್ಯ?

ಬಾಲಿವುಡ್ ನಟ ರಣಬೀರ್ ಕಪೂರ್ ವಿವಾಹದ ಬಗ್ಗೆ ಬಿಟೌನ್ ನಲ್ಲಿ ಹಲವು ಗುಸುಗುಸು ಆರಂಭವಾಗಿವೆ. ರಣಬೀರ್ ..

ಮುಂಬಯಿ: ಬಾಲಿವುಡ್ ನಟ ರಣಬೀರ್ ಕಪೂರ್ ವಿವಾಹದ ಬಗ್ಗೆ ಬಿಟೌನ್ ನಲ್ಲಿ ಹಲವು ಗುಸುಗುಸು ಆರಂಭವಾಗಿವೆ. ರಣಬೀರ್ ಲಂಡನ್ ಮೂಲದ ಚೆಲುವೆಯನ್ನು ವರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಣಬೀರ್ ಕಪೂರ್ ಮತ್ತು ತಾಯಿ ನೀತು ಕಪೂರ್ ಕಳೆದ ತಿಂಗಳು ಲಂಡನ್ ಗೆ ತೆರಳಿದ್ದರು. ಸದ್ಯ ಅವರು ಮುಂಬಯಿಗೆ ವಾಪಸಾಗಿದ್ದಾರೆ. ಮೂಲಗಳ ಪ್ರಕಾರ ರಣಬೀರ್ ಕಪೂರ್ ಮತ್ತು ತಾಯಿ ನೀತು ಲಂಡನ್ ನಲ್ಲಿರುವ ಪರಿಚಯಸ್ಥರ ಕುಟುಂಬದ ಭೇಟಿಗಾಗಿ ತೆರಳಿದ್ದರು ಎನ್ನಲಾಗಿದೆ.
ಲಂಡನ್ ಗೆ ತೆರಳಿದ್ದ ರಣಬೀರ್ ತಮ್ಮ ಭಾವಿ ಪತ್ನಿಯನ್ನು ನೋಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ, ಕಪೂರ್ ಮನೆಯ ಹಿರಿಯರೆಲ್ಲರಿಗೂ ಯುವತಿ ಮೆಚ್ಚುಗೆಯಾಗಿದ್ದು, ರಣಬೀರ್ ಕಪೂರ್  ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಹೇಳಲಾಗಿದೆ. ರಣಬೀರ್ ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆಯೇ ಇಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲ, ಒಂದು ವೇಳೆ ರಣಬೀರ್ ಈ ಸಂಬಂಧಕ್ಕೆ ಒಪ್ಪಿದರೇ ಶಾಹಿದ್ ಕಪೂರ್ ನಂತರ ಬಾಲಿವುಡ್ ನಲ್ಲಿ ಮತ್ತೊಂದು ಆರೇಂಜ್ಡ್ ಮ್ಯಾರೇಜ್ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್