ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಖ್ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದ್ದು ಇದೀಗ ಎರಡನೇ ಹಂತದ ಚಿತ್ರೀಕರಣಕ್ಕಾಗಿ ನಿರ್ದೇಶಕ ಪ್ರಕಾಶ್ ಜಯರಾಂ ಭರದ ಸಿದ್ಧತೆ ನಡೆಸಿದ್ದಾರೆ.
ಎರಡನೇ ಹಂತದ ಚಿತ್ರೀಕರಣ ಮೇ 15ರಿಂದ ಪ್ರಾರಂಭವಾಗಲಿದ್ದು ಈ ಮಧ್ಯೆ ನಿರ್ದೇಶಕರು ಚಿತ್ರದ ಪೋಸ್ಟ್ ಪ್ರೊಡೆಕ್ಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಚಿತ್ರದ ಮಾತಿನ ಭಾಗದ ಕೆಲಸಗಳು ನಡೆಯುತ್ತಿದ್ದು ನಟಿ ಶ್ರುತಿ ಹರಿಹರನ್ ಇಂದಿನಿಂದ ತಮ್ಮ ಭಾಗದ ಡಬ್ಬಿಂಗ್ ಮುಗಿಸಿದ್ದಾರೆ ಎಂದು ನಿರ್ದೇಶಕ ಪ್ರಕಾಶ್ ಹೇಳಿದ್ದಾರೆ.
ಇನ್ನು ಎರಡನೇ ಹಂತದ ಚಿತ್ರೀಕರಣ ವಿದೇಶಗಳಲ್ಲಿ 40 ದಿನಗಳ ಕಾಲ ನಡೆಯಲಿದೆ. ಹೀಗಾಗಿ ನಾನು ಪಯಣಕ್ಕೆ ಸಿದ್ಧತೆ ನಡೆಸಿದ್ದೇನೆ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ. ಇನ್ನು ಚಿತ್ರದ ಮತ್ತೊಬ್ಬ ನಾಯಕಿ ಸಾನ್ವಿ ಶ್ರೀವಾತ್ಸವ್ ಸಹ ವಿದೇಶಿ ಪ್ರಯಣಕ್ಕೆ ಸಿದ್ಧತೆ ನಡೆಸಿದ್ದು ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳ ವಿಜಯದಶಮಿಗೆ ತಾರಕ್ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು ಅಂದುಕೊಂಡ ದಿನದಂತೆ ಚಿತ್ರ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಇನ್ನು ಚಿತ್ರದಲ್ಲಿ ದುಶ್ಯನಾಥ್ ಎಂಬುವರು ನಿರ್ದೇಶಿಸುತ್ತಿದ್ದು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ.