ಬೀಜಿಂಗ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ನಟಿಸಿರುವ 'ದಂಗಾಲ್' ಚೈನಾದಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲಿಯೇ ೨೦೦ಕೋಟಿ ರೂ ಗಳಿಸಿದೆ. ಇದು ಚೈನಾದಲ್ಲಿ ಅತಿ ಹೆಚ್ಚು ಗಳಿಸಿದ ಮೊದಲ ಭಾರತೀಯ ಸಿನೆಮಾ ಎನ್ನಲಾಗಿದೆ.
ಈ ಸಿನೆಮಾ ಚೈನಾದಲ್ಲಿ ೭೦೦೦ ತೆರೆಗಳಲ್ಲಿ 'ಶುಐ ಜಿಎಒ ಬಾಬಾ' (ಕುಸ್ತಿ ಆಡೋಣ ಅಪ್ಪ) ಎಂಬ ಹೆಸರಿನಲ್ಲಿ ಬಿಡುಗಡೆಯಾಗಿದೆ. ಶುಕ್ರವಾರ ಸಂಜೆಯ ವೇಳೆಗೆ ಸಿನೆಮಾ ೨೧೬ ಮಿಲಿಯನ್ ಯಾನ್ (೨೦೧ ಕೋಟಿ ರೂ) ಗಳಿಸಿದೆ ಎನ್ನಲಾಗಿದೆ.
ಅಮೀರ್ ಖಾನ್ ಅವರೇ ನಟಿಸಿದ್ದ 'ಪಿಕೆ' ಸಿನೆಮಾ ಚೈನಾದಲ್ಲಿ ೧೦೦ ಕೋಟಿ ಗಳಿಸಿತ್ತು. ಈಗ ಅವರದ್ದೇ ಅಭಿನಯದ ಸಿನೆಮಾ ಈ ದಾಖಲೆ ಮುರಿದಿರುವುದು ವಿಶೇಷ.
ಚೈನಾ ಪುರುಷಪ್ರಾಧಾನ್ಯ ಸಮಾಜ ಎನ್ನಲಾಗಿದ್ದರೂ, 'ದಂಗಾಲ್' ಸಿನೆಮಾದ ಜೊತೆಗೆ ಜನ ಕಂಡುಕೊಂಡಿದ್ದಾರೆ.
ಚೈನಾದಲ್ಲಿ ಅಮೀರ್ ಖಾನ್ ಅತಿ ಹೆಚ್ಚು ಜನಪ್ರಿಯ ಭಾರತೀಯ ನಟರಲ್ಲಿ ಒಬ್ಬರು. ದಕ್ಷಿಣ ಕೊರಿಯಾದಲ್ಲಿಯೂ ಅಮೀರ್ ಖಾನ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.