ಶ್ರದ್ಧಾ ಶ್ರೀನಾಥ್-ಸತೀಶ್ ನೀನಾಸಂ 
ಸಿನಿಮಾ ಸುದ್ದಿ

ಶ್ರದ್ಧಾ ಮುಂದಿನ ಸಿನೆಮಾ ನಿರ್ದೇಶಿಸಲಿರುವ ನಂದೀಶ

ನಟಿ ಶ್ರದ್ಧಾ ಶ್ರೀನಾಥ್ ಸದ್ಯಕ್ಕೆ ಅವರ ಮೊದಲ ತೆಲುಗು ಸಿನೆಮಾ 'ಹೇ ಕೃಷ್ಣ ಮುಕುಂದ ಮುರಾರಿ' ಸೆಟ್ ನಲ್ಲಿ ಕಾರ್ಯನಿರತರಾಗಿದ್ದಾರೆ. ರವಿಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಚೊಚ್ಚಲ ನಟ ಸಿದ್ಧು

ಬೆಂಗಳೂರು: ನಟಿ ಶ್ರದ್ಧಾ ಶ್ರೀನಾಥ್ ಸದ್ಯಕ್ಕೆ ಅವರ ಮೊದಲ ತೆಲುಗು ಸಿನೆಮಾ 'ಹೇ ಕೃಷ್ಣ ಮುಕುಂದ ಮುರಾರಿ' ಸೆಟ್ ನಲ್ಲಿ ಕಾರ್ಯನಿರತರಾಗಿದ್ದಾರೆ. ರವಿಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಚೊಚ್ಚಲ ನಟ ಸಿದ್ಧು ಜೊನ್ನಲೆಗೆದ್ದ ಎದುರು ನಟಿಸುತ್ತಿದ್ದಾರೆ. "ಚಿತ್ರೀಕರಣ ಉತ್ತಮವಾಗಿ ಸಾಗುತ್ತಿದೆ. ಅತ್ಯುತ್ತಮ ತಂಡದೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗಿದೆ" ಎನ್ನುತ್ತಾರೆ ನಟಿ. 
'ಆಪರೇಷನ್ ಅಲಮೇಲಮ್ಮ' ನಂತರ ತಮ್ಮ ಮುಂದಿನ ಕನ್ನಡ ಸಿನೆಮಾವನ್ನು ಚೊಚ್ಚಲ ನಿರ್ದೇಶಕ ಕೆ ಎಸ್ ನಂದೀಶ ನಿರ್ದೇಶಿಸಲಿದ್ದಾರೆ ಎಂದು ಧೃಢೀಕರಿಸುತ್ತಾರೆ ನಟಿ. 'ಗೋಧ್ರಾ' ಎಂಬ ಶೀರ್ಷಿಕೆ ಹೊತ್ತಿರುವ ಈ ಸಿನೆಮಾದಲ್ಲಿ ಅವರು ಸತೀಶ್ ನೀನಾಸಂ ಎದುರು ನಟಿಸಲಿದ್ದಾರೆ. 
ಜಾಕಬ್ ವರ್ಗಿಸ್ ಜೊತೆಗೆ ೧೦ ವರ್ಷಗಳ ಕಾಲ ಸಹ ನಿರ್ದೇಶಕನಾಗಿ ದುಡಿದಿರುವ ನಂದೀಶ ಸ್ವತಂತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ಸದ್ಯಕ್ಕೆ ಜಾಕಬ್ ಅವರ 'ಚಂಬಲ್' ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 
ನಂದೀಶ ಅವರನ್ನು ಎರಡು ವರ್ಷಗಳಿಂದ ಬಲ್ಲೆ ಎನ್ನುವ ಶ್ರದ್ಧಾ "ಅವರು ಶಾಂತ ಚಿತ್ತ ಮತ್ತು ಪ್ರಜ್ಞಾವಂತ. ಕಥೆ ಬಹಳ ಆಸಕ್ತಿದಾಯಕವಾಗಿದ್ದು, ೯೦ರ ದಶಕದ ರಾಮ್ ಗೋಪಾಲ್ ವರ್ಮಾ ಸಿನೆಮಾಗಳನ್ನು ನೆನಪಿಸುತ್ತದೆ. ಅಲ್ಲದೆ ಸತೀಶ್ ಜೊತೆ ನಟಿಸುತ್ತಿರುವುದು ಬೋನಸ್" ಎನ್ನುತ್ತಾರೆ. 
ಜೂನ್ ಅಂತ್ಯಕ್ಕೆ ಈ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT