ಸಂಗ್ರಹ ಚಿತ್ರ 
ಸಿನಿಮಾ ಸುದ್ದಿ

ಉತ್ತಮ ಕಥೆ ಹುಡುಕಾಟದಲ್ಲಿ ವಿನಯ್ ರಾಜ್ ಕುಮಾರ್!

ಉತ್ತಮ ಕಥೆಗಾಗಿ ಕಾಯುತ್ತಿರುವ ವಿನಯ್ ದೀರ್ಘ ಸಮಯದ ಬಳಿಕ ಸುನಿಲ್ ಥಾಲ್ಯ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾಜ್ ಕುಟುಂಬದ ಕುಡಿ ವಿನಯ್ ರಾಜ್ ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ತುಂಬಾ ದಿನಗಳೇ ಕಳೆದರು ಒಂದು ಉತ್ತಮ ಯಶಸ್ಸು ಅವರಿಗೆ ಈವರೆಗೂ ಕೈಗೆ ಸಿಕ್ಕಿಲ್ಲ. ಹೀಗಾಗಿ ಉತ್ತಮ ಕಥೆಗಾಗಿ  ಕಾಯುತ್ತಿರುವ ವಿನಯ್ ದೀರ್ಘ ಸಮಯದ ಬಳಿಕ ಸುನಿಲ್ ಥಾಲ್ಯ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರನ್ ಆ್ಯಂಟನಿ ಚಿತ್ರದ ಬಳಿಕ ವಿನಯ್ ರಾಜ್ ಕುಮಾರ್ ಬಳಿ ಸಾಕಷ್ಟು ಸ್ಕ್ರಿಪ್ಟ್ ಗಳು ಬಂದಿತ್ತಾದರೂ, ಉತ್ತಮ ಕಥೆಗಾಗಿ ವಿನಯ್ ಕಾದಿದ್ದರು. ಈ ಅವಧಿಯಲ್ಲು ಸುಮಾರು 15 ಸ್ಕ್ರಿಪ್ಟ್ ಗಳನ್ನು ಓದಿದ್ದ ವಿನಯ್ ಸುದೀರ್ಘ ಸಮಯದ  ಬಳಿಕ ಸುನಿಲ್ ಥಾಲ್ಯ ಅವರ ಕಥೆಗೆ ಒಪ್ಪಿಗೆ ನೀಡಿದ್ದಾರಂತೆ. ಸಿಕ್ಕ ಸಿಕ್ಕ ಕಥೆಗಳನ್ನು ಮಾಡುವುದಕ್ಕಿಂತ ಉತ್ತಮವಾದ ಕಥೆಗೆ ಒಪ್ಪಿಗೆ ನೀಡುವುದು ನನ್ನ ಉದ್ದೇಶವಾಗಿತ್ತು. ಹೀಗಾಗಿ ರನ್ ಆ್ಯಂಟನಿ ಚಿತ್ರದ ಬಳಿಕ ಸಾಕಷ್ಟು ಸಮಯ  ತೆಗೆದುಕೊಂಡಿದ್ದೆ.

ಈ ನಡುವೆ ಸಾಕಷ್ಟು ಕಥೆಗಳನ್ನು ಓದಿದ್ದೆ ಮತ್ತು ಈ ಪೈಕಿ ನನಗಿಷ್ಟವಾದ ಕಥೆಗಳನ್ನು ನಮ್ಮ ತಂದೆಯವರೊಂದಿಗೂ ಚರ್ಚಿಸಿದ್ದೆ. ಆ ಕಥೆಗಳಲ್ಲಿ ಪಾತ್ರ ವಿಶೇಷತೆ ಕುರಿತು ಸಾಕಷ್ಟು ಬಾರಿ ಚರ್ಚಿಸಿದ್ದೇವೆ. ಇದೀಗ ಸುನಿಲ್ ಅವರ  ಕಥೆಯನ್ನು ಒಪ್ಪಿಕೊಂಡಿದ್ದೇವೆ. ಇದಲ್ಲದೆ ಮತ್ತೊಂದು ಕಥೆ ಇಷ್ಟವಾಗಿದ್ದು, ಶೀಘ್ರದಲ್ಲೇ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ವಿನಯ್ ರಾಜ್ ಕುಮಾರ್ ಹೇಳಿದ್ದಾರೆ.

ಸುನಿಲ್ ಚಿತ್ರರಂಗದಲ್ಲಿ ಸುಮಾರು 10 ವರ್ಷಗಳಷ್ಟು ಅನುಭವ ಹೊಂದಿದ್ದು, ಖ್ಯಾತ ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಸಾಧು ಕೋಕಿಲಾ, ರಾಘವ ಲೋಕಿ, ಚೇತನ್ ಕುಮಾರ್ ಸೇರಿದಂತೆ ಹಲವು ನಿರ್ದೇಶಕ ಜೊತೆ ಕೆಲಸ  ಮಾಡಿದ ಅನುಭವ ಹೊಂದಿದ್ದಾರೆ. ಇದೀಗ ವಿನಯ್ ರಾಜ್ ಕುಮಾರ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗ ಹೊರಟಿದ್ದಾರೆ ಸುನಿಲ್...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!