ಮುಂಬಯಿ: ನಟ ಪ್ರಭಾಸ್ ತಮ್ಮ ಮುಂದಿನ ಬಾಲಿವುಡ್ ಚಿತ್ರಕ್ಕಾಗಿ ಹಿಂದಿ ಕಲಿಯುತ್ತಿದ್ದಾರಂತೆ.
ರನ್ ರಾಜಾ ರನ್ ಖ್ಯಾತಿಯ ಸುಜೀತ್ ರೆಡ್ಡಿ ಅವರ ನಿರ್ದೇಶನ ಸಾಹೋ ಸಿನಿಮಾಗಾಗಿ ಪ್ರಭಾಸ್ ಹಿಂದಿ ಭಾಷೆ ಕಲಿಯುತ್ತಿದ್ದಾರೆ. ಈ ಮೊದಲು ಸಿನಿಮಾವನ್ನು ತೆಲುಗು ಭಾಷೆಯಲ್ಲಿ ನಿರ್ಮಸಿ ನಂತರ ಹಿಂದಿ ಮತ್ತು ತಮಿಳಿಗೆ ಡಬ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈಗ ಸಾಹೋ ಸಿನಿಮಾ ಏಕಕಾಲದಲ್ಲಿ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿದೆ.
ಈಗಾಗಲೇ ಪ್ರಭಾಸ್ ಪ್ರಭಾಸ್ ಗೆ ಹಿಂದಿ ತರಬೇತಿಗಾಗಿ ಕೋಚ್ ನೇಮಿಸಲಾಗಿದೆ. ಜುಲೈ ತಿಂಗಳ ಒಳಗೆ ಹಿಂದಿ ಕಲಿಯುತ್ತಾರೆಂದಪು ಮೂಲಗಳು ತಿಳಿಸಿವೆ.