ಐಂದ್ರಿತಾ ರೇ 
ಸಿನಿಮಾ ಸುದ್ದಿ

'ಗರುಡ' ಸಿನೆಮಾದಲ್ಲಿ ಐಂದ್ರಿತಾ ರೇ

ಸಿದ್ಧಾರ್ಥ್ ಮಹೇಶ್ ನಟಿಸುತ್ತಿರುವ 'ಗರುಡ' ಸಿನೆಮಾಗೆ ಮಾರ್ಚ್ ನಲ್ಲಿ ಮುಹೂರ್ತ ನೆರವೇರಿತ್ತು ಮತ್ತು ಈ ವಾರ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಕೊನೆಯ ಘಳಿಗೆಯಲ್ಲಿ ನಾಯಕನಟಿಯ

ಬೆಂಗಳೂರು: ಸಿದ್ಧಾರ್ಥ್ ಮಹೇಶ್ ನಟಿಸುತ್ತಿರುವ 'ಗರುಡ' ಸಿನೆಮಾಗೆ ಮಾರ್ಚ್ ನಲ್ಲಿ ಮುಹೂರ್ತ ನೆರವೇರಿತ್ತು ಮತ್ತು ಈ ವಾರ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ ಕೊನೆಯ ಘಳಿಗೆಯಲ್ಲಿ ನಾಯಕನಟಿಯ ಬದಲಾವಣೆಯಾಗಿದ್ದು, ಮೊದಲಿಗೆ ನಟಿಸಬೇಕಿದ್ದ ದೀಪಾ ಸನ್ನಿಧಿ ಅವರನ್ನು ಐಂದ್ರಿತಾ ರೇ ಬದಲಿಸಿದ್ದಾರೆ.
ನಟ ಸಿದ್ಧಾರ್ಥ್ ಎದುರು, ಮತ್ತೊಬ್ಬ ನಟಿ ಆಶಿಕಾ ರಂಗನಾಥ ಕೂಡ ನಟಿಸುತ್ತಿದ್ದಾರೆ. ಚಿತ್ರತಂಡದ ಮೂಲಗಳು ಹೇಳುವಂತೆ "ದೀಪಾ ಸನ್ನಿಧಿ ಅವರಿಗೆ ಮನೆಯ ಕಡೆ ತುರ್ತು ಕೆಲಸವಿತ್ತು, ಆದುದರಿಂದ ಅವರಿಗೆ ಮೇ ೨೯ ರಿಂದ ನಮಗೆ ಅವರ ಸಮಯ ಒದಗಿಸಲು ಸಾಧ್ಯವಾಗಲಿಲ್ಲ. ಅವರಿಗೆ ಸಿನೆಮಾದಿಂದ ಹೊರಹೋಗುವುದ ಬಿಟ್ಟು ಬೇರೆ ಅವಕಾಶ ಇರಲಿಲ್ಲ. ನಮಗೆ ಈಗಾಗಲೇ ಜನಪ್ರಿಯವಾದ ನಾಯಕನಟಿಯ ಅವಶ್ಯಕತೆ ಇತ್ತು. ಐಂದ್ರಿತಾ ರೇ ಇದಕ್ಕೆ ಸೂಕ್ತವಾಗುತ್ತಾರೆ. ಮೇ ೨೯ ಕ್ಕೆ  ನಟಿ ಸೆಟ್ ಸೇರಲಿದ್ದಾರೆ. ಚಿತ್ರೀಕರಣ ಗೋವಾದಲ್ಲಿ ಮುಂದಿನ ೧೫ ದಿನಗಳ ಕಾಲ ನಡೆಯಲಿದೆ" ಎನ್ನುತ್ತಾರೆ. 
ಐಂದ್ರಿತಾ ಕೊನೆಯ ಬಾರಿಗೆ ತರುಣ್ ಸುಧೀರ್ ಅವರ 'ಚೌಕ' ದಲ್ಲಿ ಕಾಣಿಸಿಕೊಂಡಿದ್ದರು. ಅವರು ಸದ್ಯಕ್ಕೆ ಬೆಂಗಾಳಿ ಸಿನೆಮಾ 'ಅಮರ್ ಅಪಂಜನ್' ನಲ್ಲಿ ನಿರತರಾಗಿದ್ದು, ಬಾಲಿವುಡ್ ನಲ್ಲಿ ಕೂಡ ಪಾದಾರ್ಪಣೆ ಮಾಡುತ್ತಿದ್ದಾರೆ. ಚಂದ್ರಕಾಂತ್ ಸಿಂಗ್ ನಿರ್ದೇಶನದ ಹಿಂದಿ ಸಿನೆಮಾದಲ್ಲಿ ಅವರು ಅರ್ಬಾಜ್ ಖಾನ್ ಎದುರು ನಟಿಸಲಿದ್ದಾರೆ. 
ಪ್ರಸಾದ್ ರೆಡ್ಡಿ ನಿರ್ಮಿಸುತ್ತಿರುವ 'ಗರುಡ' ಸಿದ್ಧಾರ್ಥ್ ಅವರಿಗೆ 'ಸಿಪಾಯಿ' ನಂತರ ಎರಡನೆಯ ಸಿನೆಮಾ. ನೃತ್ಯನಿರ್ದೇಶಕ ಧನಕುಮಾರ್ ಮೊದಲ ಬಾರಿಗೆ ಈ ಸಿನೆಮಾ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಲಿದ್ದು, ಜೈ ಆನಂದ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್