ಸಿನಿಮಾ ಸುದ್ದಿ

ರಜನಿ 'ಕಾಲ ಕರಿಕಾಲನ್' ನಲ್ಲಿ ನಾನಾ ಪಾಟೇಕರ್; ಹುಮಾ ಖುರೇಷಿ ನಾಯಕ ನಟಿ

Guruprasad Narayana
ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್, ಸೂಪರ್ ಸ್ಟಾರ್ ರಜನಿಕಾಂತ್  ಅವರ ಮುಂದಿನ ಚಿತ್ರ 'ಕಾಲ ಕರಿಕಾಲನ್' ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎಂದು ನಿರ್ಮಾಪಕರು ಭಾನುವಾರ ಧೃಢೀಕರಿಸಿದ್ದಾರೆ. 
ಪ ರಂಜಿತ್ ನಿರ್ದೇಶನದ ಈ ಸಿನೆಮಾದ ಚಿತ್ರೀಕರಣ ಭಾನುವಾರ ಪ್ರಾರಂಭವಾಗಿದೆ. 
ತಾರಾಗಣದದ ಸಂಪೂರ್ಣ ಪಟ್ಟಿ ಘೋಷಿಸಿದ ನಿರ್ಮಾಪಕರು, ಹುಮಾ ಖುರೇಷಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ಘೋಷಿಸಿದ್ದಾರೆ. 
'ಕಾಲ ಕರಿಕಾಲನ್' ನಲ್ಲಿ ಸಮುದ್ರಕಿಣಿ ಮತ್ತು ಅಂಜಲಿ ಪಾಟೀಲ್ ಕೂಡ ನಟಿಸುತ್ತಿದ್ದಾರೆ. ಚಿತ್ರೀಕರಣ ಮುಂಬೈನಲ್ಲಿ ಸತತ ೪೦ ದಿನಗಳ ಮುಂದುವರೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಧನುಷ್ ನಿರ್ಮಿಸುತ್ತಿರುವ ಈ ಸಿನೆಮಾಗೆ ಸಂತೋಷ್ ನಾರಾಯಣ್ ಸಂಗೀತ ನೀಡಲಿದ್ದಾರೆ. 
SCROLL FOR NEXT