ಬೆಂಗಳೂರು: ದ್ವಾರಕೀಶ್ ಅವರ 51ನೇ ಚಿತ್ರಕ್ಕೆ ಅಮ್ಮ ಐ ಲವ್ ಯೂ ಎಂದು ಹೆಸರಿಟ್ಟಿದ್ದು, ಇದು ತಮಿಳಿನ "ಪಿಚ್ಚಕಾರನ್' ಚಿತ್ರದ ಅವತರಣಿಕೆಯಾಗಿದೆ.
ನಿರ್ದೇಶಕ ಚೈತನ್ಯ ಮತ್ತು ಚಿರಂಜೀವಿ ಸರ್ಜಾ ಸಹಯೋಗದ 4ನೇ ಚಿತ್ರ ಇದಾಗಿದ್ದು, ದಕ್ಷಿಣ ಭಾರತದ ಪ್ರಸಿದ್ದ ನಟಿ ಸಿತಾರಾ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರಕ್ಕೆ "ಅಮ್ಮ ಐ ಲವ್ ಯು' ಎಂದು ನಾಮಕರಣ ಮಾಡಿದ್ದು, ಇತ್ತೀಚೆಗೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ ಗಣಪತಿ ದೇವಾಲಯದಲ್ಲಿ ಮುಹೂರ್ತವೂ ನೆರವೇರಿದೆ. ಈಗಾಗಲೇ ಬೆಂಗಳೂರಿನಲ್ಲಿ ಎರಡು ದಿನಗಳ ಶೂಟಿಂಗ್ ಮುಗಿದಿದ್ದು, ಮುಂದಿನ ಚಿತ್ರೀಕರಣಕ್ಕಾಗಿ, ಮಂಗಳೂರು ಮತ್ತು ಉಡುಪಿಯಲ್ಲಿ ಸುಂದರ ಸ್ಥಳಗಳ ಹುಡುಕಾಟ ನಡೆಸಲಾಗಿದೆ.
ಚಿತ್ರದಲ್ಲಿ ಸಿತಾರಾ, ಕರಿಸುಬ್ಬು, ನಟನಾ ಪ್ರಶಾಂತ್ ಪ್ರಮುಖ ತಾರಾಗಣದಲ್ಲಿ ನಟಿಸುತ್ತಿದ್ದಾರೆ. ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ.ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಸಲಾಗಿದೆ.